ಚಿತ್ರದುರ್ಗ, ಮೇ 08 : ನಗರದ ಮುನಿಸಿಪಲ್ ಕಾಲೋನಿಯ ವಾಸಿ ಶ್ರೀಮತಿ ಕೆ.ಜಿ. ತಿಪ್ಪಮ್ಮ ಅವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರಿಗೆ 75 ವರ್ಷ ವಯಸ್ಸಾಗಿತ್ತು. ಪತಿ ಡಾ|| ವಿ. ಸೀತಾರಾಮರೆಡ್ಡಿ, ಪುತ್ರ ವಕೀಲ ಎಸ್. ಪ್ರಸನ್ನ ಸೇರಿದಂತೆ ಇಬ್ಬರು ಪುತ್ತಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಬಂಧು-ಬಳಗವನ್ನು ಬಿಟ್ಟು ಅಗಲಿದ್ದಾರೆ.
ಅಂತಿಮ ದರ್ಶನ : ಮೃತ ಶ್ರೀಮತಿ ಕೆ.ಜಿ. ತಿಪ್ಪಮ್ಮ ಅವರ ನಿಧನದ ಸುದ್ದಿ ತಿಳಿಯುತ್ತಲೇ ಸಹಕಾರಿ ಧುರೀಣ, ಎಸ್.ಆರ್. ಲಕ್ಷ್ಮೀಕಾಂತರೆಡ್ಡಿ, ಮರ್ಚೆಂಟ್ಸ್ ಬ್ಯಾಂಕಿನ ಅಧ್ಯಕ್ಷ ರಘುರಾಮರೆಡ್ಡಿ, ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟಿನ ಅಧ್ಯಕ್ಷ ಶರಣ್‍ಕುಮಾರ್ ಸೇರಿದಂತೆ ಅಪಾರ ಬಂಧು-ಬಳಗ, ವಕೀಲರು, ಮೃತರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು.
ಅಂತ್ಯಕ್ರಿಯೆ :ಮೃತರ ಅಂತ್ಯಕ್ರಿಯೆ ನಗರದ ಮುಕ್ತಿಧಾಮದಲ್ಲಿ ಸಂಜೆ 4-30 ಗಂಟೆ ಸುಮಾರಿಗೆ ನಡೆಯಲಿದೆ.


















