Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಟಿಎಪಿಸಿಎಂಎಸ್ ಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

---Advertisement---

 

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 31 : ಚಿತ್ರದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟದ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್.ಎಂ.ಮಂಜುನಾಥಪ್ಪ ಕೋಗುಂಡೆ, ಉಪಾಧ್ಯಕ್ಷರಾಗಿ ಕೆ.ಆರ್.ರವಿ ಸಿಂಗಾಪುರ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದ ಸಂಘದ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ನಿರ್ದೇಶಕರು ಒಮ್ಮತದಿಂದ ಇವರನ್ನು ಆಯ್ಕೆ ಮಾಡಲಾಯಿತು.

ಅಕ್ಟೋಬರ್ 13 ರಂದು ನಡೆದ ಆಡಳಿತ ಮಂಡಲಿ ನಿರ್ದೇಶಕರ ಚುನಾವಣಾ ಪ್ರಕ್ರಿಯೆಯಲ್ಲಿ

ಹೆಚ್.ಎನ್.ಹನುಮಂತಪ್ಪ ಕೋಡಿರಂಗವ್ವನಹಳ್ಳಿ, ಜಿ.ಆರ್.ಧನಂಜಯ ಯಳಗೋಡು,
ಟಿ.ಸಣ್ಣತಿಮ್ಮಪ್ಪ ವಡ್ಡರಸಿದ್ದವ್ವನಹಳ್ಳಿ,
ಎನ್.ಕಲ್ಲೇಶ್ ಭರಮಸಾಗರ,
ಹೆಚ್.ನಿರಂಜನಮೂರ್ತಿ ಅನ್ನೇಹಾಳ್,          ಎಸ್..ಹೆಚ್.ತಿಪ್ಪೇಸ್ವಾಮಿ ಸಿರಿಗೆರೆ,
ಎಂ.ಎಸ್.ಪ್ರಸನ್ನ ಸಿರಿಗೆರೆ,
ದೇವರಾಜ್.ಬಿ.ಎನ್ ಕೊಡಗವಳ್ಳಿ,
ನಾಗರಾಜ್.ಜಿ.ಎಸ್ ಹಿರೇಕಬ್ಬಿಗೆರೆ,
ಶ್ರೀಮತಿ ಕೆ.ಜಿ.ಕವಿತ ಬಸವಕುಮಾರ್ ಸಿರಿಗೆರೆ,
ಶ್ರೀಮತಿ ಶಾಂತಕುಮಾರಿ.ಬಿ.ಎಸ್ ಚಿಕ್ಕಬೆನ್ನೂರು ಇವರುಗಳನ್ನು ನಿರ್ದೇಶಕರುಗಳಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು ಎಂದು ಚುನಾವಣಾಧಿಕಾರಿಗಳಾದ ಎಸ್.ಮಹಮ್ಮದ್ ಯೂನಸ್ ಫರ್ವಿಜ್ ಘೋಷಣೆ ಮಾಡಿದ್ದರು. ಹಾಗೂ ಜಿಲ್ಲಾ ಬ್ಯಾಂಕ್‍ನ ನಾಮ ನಿರ್ದೇಶಕರಾದ ಎಂ.ನಿಶಾನಿ ಜಯಣ್ಣ ಬುರುಜನಹಟ್ಟಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪದನಿಮಿತ್ತ ನಿರ್ದೇಶಕರಾಗಿರುತ್ತಾರೆ.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿಯವರಾದ ಜಿ.ಎನ್.ಉಮಾಶಂಕರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now