Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಿತ್ರದುರ್ಗ | ಶ್ರದ್ದಾ ಭಕ್ತಿಗಳಿಂದ ನಡೆದ ಶ್ರೀ ರಾಮನವಮಿ ಶತಮಾನೋತ್ಸವ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಮಾ. 28 : ನಗರದ ವಾಸವಿ ಶಾಲೆ ಬಳಿಯಲ್ಲಿನ ತ್ಯಾಗರಾಜ ಬೀದಿಯಲ್ಲಿನ ಶ್ರೀ ಪೇಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ 100ವರ್ಷ(1926-2026)ತುಂಬಿದ ಈ ಹಿನ್ನಲೆಯಲ್ಲಿ ಮಾ. 26 ರಿಂದ 28ರವರೆಗೆ ಮೂರು ದಿನಗಳ ಕಾಲ ಶ್ರೀ ರಾಮೋತ್ಸವ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಸಡಗರ ಶ್ರದ್ದಾ ಭಕ್ತಿಗಳಿಂದ ಶ್ರೀ ರಾಮನವಮಿ ಶತಮಾ ನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇಂದು ಮುಂಜಾನೆಯಿಂದಲೇ ದೇವಾಲಯದಲ್ಲಿ ಅಂಜನೇಯ ಸ್ವಾಮಿಗೆ ಅಭೀಷೇಕವನ್ನು ಮಾಡುವುದರ ಮೂಲಕ ವಿಶೇಷವಾದ ಪೂಜೆ, ಅರ್ಚನೆಯನ್ನು ಮಾಡಲಾಯಿತು. ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕಾರವನ್ನು ಮಾಡಲಾಗಿತ್ತು. ಮೂರು ದಿನಗಳ ಕಾಲ ಭಜನೆ, ದಾಸಗಾನ ವೈಭವ” ಭಕ್ತಿ ಗೀತೆಗಳ ಗಾಯನ, ಹರಿಕಥಾ ಕಾರ್ಯಕ್ರಮ ನಡೆದಿದ್ದು, ಇಂದು ಬೆಳಿಗ್ಗೆ “ಶ್ರೀ ಸೀತಾರಾಮಚಂದ್ರರ ಉತ್ಸವಮೂರ್ತಿಗಳ ಮೆರವಣಿಗೆ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ನಿನ್ನೆ ಸಂಜೆ  ಶ್ರೀ ಬೃಂದಾವನ ಭಜನಾ ಮಂಡಳಿ ಹಾಗೂ ಸರಸ್ವತಿ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ ನಡೆಯಲಿದ್ದು, ಕೀರ್ತನ ಕಲಾಸಿರಿ ಡಾ. ಬೇಲೂರು ವಸಂತಲಕ್ಷ್ಮಿ ಇವರಿಂದ “ಸೀತಾರಾಮ ಕಲ್ಯಾಣ ಹರಿಕಥಾ ಕಾರ್ಯಕ್ರಮ ನಡೆಯಿತು. ಮಾಜಿ ಶಾಸಕರಾದ ಜಿ.ಎಚ್,ತಿಪ್ಪಾರೆಡ್ಡಿಯವರು ದೇವಾಲಯಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನವನ್ನು ಪಡೆದು ಪ್ರಸಾದ ತೀರ್ಥವನ್ನು ಸ್ವೀಕಾರ ಮಾಡಿದರು.

ಮಾ 28ರ ಶನಿವಾರ ಬೆಳಿಗ್ಗೆ “ಶ್ರೀ ಸೀತಾರಾಮಚಂದ್ರರ ಉತ್ಸವಮೂರ್ತಿಗಳ ಮೆರವಣಿಗೆಯನ್ನು ಜನಸ್ತೋಮದ ನಡುವೆ ಬಹಳ ಅದ್ದೂರಿಯಾಗಿ ನೆರವೇರಿತು ಬೆಳಿಗ್ಗೆಯಿಂದ ಮೂಲ ದೇವರಿಗೆ ಅಭಿಷೇಕ, ಅಲಂಕಾರ, ಸಹಸ್ರನಾಮಾರ್ಚನೆ, ಮಹಾಮಂಗಳಾರತಿ, ರಾಷ್ಟ್ರಾರ್ಚನೆ, ತೀರ್ಥ ಪ್ರಸಾದ ವಿನಿಯೋಗ, ಅಕಂಡಪಾನಕ ಪೂಜೆ, ನವಗ್ರಹ ಪೂಜೆ ನೆರವೇರಿಸಲಾಯಿತು ಈ ಬಾರಿ ದೇವರುಗಳ ಮೆರವಣಿಗೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಥೋತ್ಸವಕ್ಕೆ ಆಗಮಿಸುವಂತಹ ಭಕ್ತಾದಿಗಳಿಗೆ ಅನ್ನದಾನ ನಡೆಯಿತು. ಹೂವಿನ ಅಲಂಕಾರ ಸ್ತ್ರಾಲಂಕಾರ ವಿಶೇಷವಾಗಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಭಾಗವಹಿಸಿಧ ಭಕ್ತಾಧಿಗಳು ಜೈ ಶ್ರೀರಾಮ್ ಎಂಬ ನಾಮವನ್ನು ಜಪ ಮಾಡಿದರು.

ಮೆರವಣಿಗೆಯೂ ದೇವಾಲಯದಿಂದ ಪ್ರಾರಂಭವಾಗಿ ವಾಸವಿ ಶಾಲೆ ರಸ್ತೆ, ದೊಡ್ಡಪೇಟೆ, ಜೈನ್ ದೇವಸ್ಥಾನ,  ಉಚ್ಚಂಗಿಯಲ್ಲಮ್ಮ ದೇವಾಲಯ, ಚಿಕ್ಕಪೇಟೆ, ಐಯ್ಯಣ್ಣನಪೇಟೆ, ಧರ್ಮಶಾಲಾ ರಸ್ತೆ, ಪಾಶ್ರ್ವ ನಾಥ ಶಾಲೆಯ ಮುಂಭಾಗದಿಂದ ವಾಸವಿಸ್ಕೂಲ್ ರಸ್ತೆಯ ಮೂಲಕ ವಾಪಾಸ್ ದೇವಸ್ಥಾನ ತಲುಪಿತು.ತದ ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ರಾಮೋತ್ಸವದ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಅರುಣ್‍ಕುಮಾರ್, ನಗರಸಭೆಯ ಮಾಜಿ ಸದಸ್ಯರಾದ ಹರೀಶ್, ಕೃಷ್ಣಮೂರ್ತಿ, ಆನಂತರಾಮು, ವೆಂಕಟಚಲಯ್ಯ, ರಮೇಶ್, ರಾಜಾರಾವ್, ರಾಘವೇಂದ್ರರಾವ್, ನಾಗರಾಜ್ ಬೇದ್ರೇ ವೆಂಕಟೇಶ್, ವಂಸತಕುಮಾರ್, ಚಂದ್ರಶೇಖರ್‍ರಾವ್ ಸೇರಿದಂತೆ ಇತರರು ಭಾಗವಹಿಸಿದ್ದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now