ಸುದ್ದಿಒನ್, ಚಿತ್ರದುರ್ಗ, ಮೇ. 04 : ನಗರದ ಮೆದೇಹಳ್ಳಿ ರಸ್ತೆ ಪಿಎಂಎಸ್ ಲೇಔಟ್ ನಿವಾಸಿ ಎಚ್.ಎಂ.ಶರಣೇಂದ್ರಪ್ಪ(95 ವರ್ಷ)ಅವರು ಸೋಮವಾರ ಸಂಜೆ ನಿಧನ ಹೊಂದಿದರು.
ಅವರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಂ.ಎಸ್.ಸೋಮಶೇಖರ್, ಮಲ್ಲಪ್ಪ ಸಾಹುಕಾರ್ (ಶ್ರೀ ಶರಣ ಸಿದ್ದೇಶ್ವರ ಟ್ರೇಡರ್ಸ್, ಆರ್ ಎಮ್ ಸಿ ಯಾರ್ಡ್ ಈ ಅಂಡ್ ಎಫ್ ಬ್ಲಾಕ್, ಚಿತ್ರದುರ್ಗ) ಸೇರಿದಂತೆ ಮೂವರು ಪುತ್ರರು ಇದ್ದಾರೆ. ಅಂತ್ಯಕ್ರಿಯೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹುಲಿಕೆರೆ ಗ್ರಾಮದಲ್ಲಿ ಮಂಗಳವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.



















