ಚಿತ್ರದುರ್ಗ | ಸೆ . 01 ರಂದು ಜಿ.ಪಂ ತ್ರೈಮಾಸಿಕ ಕೆಡಿಪಿ ಸಭೆ

suddionenews
0 Min Read

ಚಿತ್ರದುರ್ಗ,(ಆಗಸ್ಟ್ 30) : ಚಿತ್ರದುರ್ಗ ಜಿಲ್ಲಾ ಪಂಚಾಯತ್ 2022-23ನೇ ಸಾಲಿನ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯನ್ನು ಸೆಪ್ಟೆಂಬರ್ 01ರಂದು ಬೆಳಿಗ್ಗೆ 11ಕ್ಕೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಸಭೆಯ ಅಧ್ಯಕ್ಷತೆ ವಹಿಸುವರು. ಕೆಡಿಪಿ ಸಭೆಯು ಈ ಹಿಂದೆ ಸೆಪ್ಟೆಂಬರ್ 02ರಂದು ನಿಗಧಿಯಾಗಿತ್ತು. ಕಾರಣಾಂತರಳಿಂದ ಸಭೆಯನ್ನು ಸೆಪ್ಟೆಂಬರ್ 01ರಂದು ಬೆಳಿಗ್ಗೆ 11ಕ್ಕೆ ಹಿಂದೂಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ ತಿಳಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *