ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಅರ್ಬನ್ ಇಂಡಿಯಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಗರದ ಹೋಟೆಲ್ ದುರ್ಗದ ಸಿರಿಯಲ್ಲಿ ನವೆಂಬರ್ 28ರಂದು ಆಯೋಜಿಸಿದ್ದು, ವಿವಿಧ ರಾಜ್ಯಗಳ ಸೀರೆಗಳು, ಕರಕುಶಲ ಹಾಗೂ ಅಲಂಕಾರಿಕ ವಸ್ತುಗಳು, ಗ್ರಾಮೋದ್ಯೋಗ ಉತ್ಪನ್ನಗಳ ಪ್ರದರ್ಶನ ಹಾಗೂ ಪ್ರಸಿದ್ಧ ಬ್ರಾಂಡ್‍ಗಳ ವಸ್ತುಗಳು ದೊರೆಯಲಿವೆ.
ವಾರಣಾಸಿಯಲ್ಲಿ ಕೈಮಗ್ಗದಿಂದ ನೇಯ್ದ, ಬನಾರಸ್ ಸಿಲ್ಕ್ ಹಾಗೂ ಕಾಟನ್ ಸೀರೆಗಳು, ಫ್ಯಾಷನ್ ಡಿಸೈನ್‍ರ ಫ್ಯಾನ್ಸಿ ಸೀರೆ ರೂ. 1,100 ರಿಂದ 28 ಸಾವಿರ ರೂ. ವರೆಗಿನ ಉತ್ಪನ್ನಗಳು ಜನರ ಕೈಗೆಟುಕಲಿವೆ. ಜತೆಗೆ ಸಿಲ್ಕ್ ಸೀರೆಗಳು, ಬೆಳ್ಳಿ ಹಾಗೂ ವಿವಿಧ ಹರಳುಗಳಿಂದ ಸಿದ್ಧಗೊಂಡ ಆಭರಣಗಳು, ಬೆಂಗಳೂರಿನ ಡಿಸೈನರ್ ಕುರ್ತೀಸ್, ಹತ್ತಿ ಸೂಪರ್ ಗಾತ್ರದ ಬೆಡ್‍ಶೀಟ್‍ಗಳು, ಡಿಸೈನರ್ ಕೈಚೀಲಗಳು, ಸೌಂದರ್ಯ ವರ್ಧಕ ಸಾಧನಗಳು, ಬ್ರಾಂಡೆಡ್ ಮಕ್ಕಳ ಉಡುಪುಗಳು ಮೇಳದಲ್ಲಿ ದೊರೆಯಲಿವೆ. ಕೇವಲ ಒಂದು ದಿನದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವಾಗಿದ್ದು, ಈ ಅವಕಾಶವನ್ನು ಚಿತ್ರದುರ್ಗದ ಜನತೆ ಸದುಪಯೋಗ ಪಡಿಸಿಕೊಳ್ಳಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.