ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 26 : ಚಂದ್ರವಳ್ಳಿಯಲ್ಲಿರುವ ಹುಲಿಗೊಂದಿ ಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ 25 ನೇ ವರ್ಷದ ಶ್ರಾವಣ ಮಾಸದ ಅಂಗವಾಗಿ ಭಾನುವಾರ ವಿಶೇಷವಾಗಿ ಅಲಂಕರಿಸಲಾಗಿತ್ತು.
ಬಗೆ ಬಗೆಯ ಹೂವು ಹಾಗೂ ಹಾರಗಳಿಂದ ಹುಲಿಗೊಂದಿ ಸಿದ್ದೇಶ್ವರಸ್ವಾಮಿಯನ್ನು ಸಿಂಗರಿಸಿ ಪೂಜಿಸಲಾಯಿತು.
ಬೆಳಗಿನಿಂದ ಸಂಜೆಯತನಕ ಸಹಸ್ರಾರು ಭಕ್ತರು ಚಂದ್ರವಳ್ಳಿಗೆ ತೆರಳಿ ಹುಲಿಗೊಂದಿ ಸಿದ್ದೇಶ್ವರಸ್ವಾಮಿಯ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಹುಲಿಗೊಂದಿ ಸಿದ್ದೇಶ್ವರಸ್ವಾಮಿಯ 25 ನೇ ವರ್ಷದ ಶ್ರಾವಣ ಮಾಸದ ಪ್ರಯುಕ್ತ ಭಾನುವಾರ ಚಂದ್ರವಳ್ಳಿ ವಾಯುವಿಹಾರಿ ಬಳಗದಿಂದ ಚಂದ್ರವಳ್ಳಿ ಕೆರೆಗೆ ಬಾಗಿನ ಅರ್ಪಿಸಲಾಯಿತು.
ಚಂದ್ರವಳ್ಳಿ ವಾಯುವಿಹಾರಿ ಬಳಗದ ಅಧ್ಯಕ್ಷ ಟಿ.ಎಸ್.ಎನ್.ಜಯಣ್ಣ, ಕಾರ್ಯದರ್ಶಿ ಕುಳೇನೂರು ಮುರುಗೇಶ್‍ಗೌಡ್ರು, ಖಜಾಂಚಿ ಡಾ.ಚನ್ನಕೇಶವ, ಚಂದ್ರಣ್ಣ,
ಎಸ್.ಎನ್.ರವಿಕುಮಾರ್, ಫೈಲ್ವಾನ್ ತಿಪ್ಪೇಸ್ವಾಮಿ, ಬ್ಯಾಂಕ್ ಜಯಣ್ಣ, ಯಲ್ಲಪ್ಪರೆಡ್ಡಿ, ಶ್ರೀನಿವಾಸ್, ಷಣ್ಮುಖಪ್ಪ ಎಂ. ಬಿ.ಎಸ್.ಚಂದ್ರಶೇಖರ್, ರಂಗಣ್ಣ, ಶೇಖರ್, ಷಣ್ಮುಖ, ಶಾಂತಮ್ಮ, ಕಾವ್ಯ, ದೇವಸ್ಥಾನದ ಅರ್ಚಕ ಹುಲಿಯಜ್ಜ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.