ಸುದ್ದಿಒನ್, ಚಿತ್ರದುರ್ಗ, ಮೇ. 10 : ನಗರದ ದೊಡ್ಡಪೇಟೆಯ ಮೈಸೂರು ಕೆಫೆ ಹೋಟೆಲಿನ ಮಾಲೀಕರಾಗಿದ್ದ ವೇದವ್ಯಾಸ ಆಚಾರ್ಯ (ಅಣ್ಣಾದೊರೈ, 77 ವರ್ಷ) ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಮೃತರು ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.ಮೈಸೂರು ಕೆಫೆ ಮಾಲೀಕರಾಗಿದ್ದ ಅವರು ಸುಮಾರು 5 ದಶಕಕ್ಕೂ ಹೆಚ್ಚು ಕಾಲ ಹೋಟೆಲ್ ಉದ್ಯಮವನ್ನು ಯಶಸ್ವಿಯಾಗಿ ನಡೆಸಿದ್ದರು. ಅವರನ್ನು ಅಣ್ಣಾದೊರೆ ಎಂದೇ ಕರೆಯುತ್ತಿದ್ದರು. ದೊಡ್ಡಪೇಟೆಯಲ್ಲಿ ಕನ್ನಡ ಬಳಗ ಸ್ಥಾಪಿಸಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಹಿರಿಯ ಸಾಹಿತಿ ಕವಿ ದ.ರಾ.ಬೇಂದ್ರೆ. ಜಿ ಎಸ್ ಶಿವರುದ್ರಪ್ಪ ಮುಂತಾದವರನ್ನು ಕರೆಸಿದ್ದನ್ನು ಸ್ಥಳೀಯರು ಸ್ಮರಿಸುತ್ತಾರೆ. ಬೆಂಗಳೂರಿನಲ್ಲೇ ಇಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.









