ಚಿತ್ರದುರ್ಗ. ಮೇ.20: ಚಿತ್ರದುರ್ಗ ನಗರಸಭೆಯ ಸಭಾಂಗಣದಲ್ಲಿ ಮಂಗಳವಾರ ನಗರಸಭೆ ವ್ಯಾಪ್ತಿಯಲ್ಲಿನ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಿತು.
ಕಳೆದ ಏಪ್ರಿಲ್ 28ರ ಮಳಿಗೆಗಳ ಬಹಿರಂಗ ಹರಾಜು ಪ್ರಕಟಣೆಯಂತೆ ನಗರಸಭಾ ವ್ಯಾಪ್ತಿಯಲ್ಲಿರುವ ಟೂರಿಸ್ಟ್ ಹೋಟೆಲ್ ಪಕ್ಕದಲ್ಲಿರುವ ಮಳಿಗೆಗಳು, ಸಂತೆ ಹೊಂಡದ ಹತ್ತಿರವಿರುವ ಪೇಪರ್ ಮಳಿಗೆಗಳು, ಎನ್‍ಆರ್‍ವೈ ಮಳಿಗೆಗಳು, ಆರ್‍ಎಂಸಿ ಮಳಿಗೆಗಳು, ಸಿ.ಕೆ.ಪುರ ಯೂಟಿನಿ ಕಾಂಪ್ಲೆಕ್ಸ್ ಆಟೋ ಗ್ಯಾರೇಜ್ ಮಳಿಗೆಗಳು ಸೇರಿ ಒಟ್ಟು 37 ಮಳಿಗೆಗಳಿಗೆ ಬಹಿರಂಗ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿತ್ತು.
ಉಚ್ಛ ನ್ಯಾಯಾಲಯದಲ್ಲಿ ಎರಡು ಮಳಿಗೆಗಳಿಗೆ ಹಾಗೂ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಒಂದು ಮಳಿಗೆಗೆ ತಡೆಯಾಜ್ಞೆ ಕಾರಣದಿಂದ ಮೂರು ಮಳಿಗೆಗಳನ್ನು ಹೊರತುಪಡಿಸಿ, ಉಳಿದ 34 ಅಂಗಡಿಗಳ ಹರಾಜು ಕರೆಲಾಯಿತು. ಅವುಗಳಲ್ಲಿ ಟೂರಿಸ್ಟ್ ಹೋಟೆಲ್ ರೂ.3,26,000/ಗಳಿಗೆ ಅತಿ ಹೆಚ್ಚಿನ ಬೆಲೆಗೆ ಬಾಡಿಗೆಗೆ ಬಹಿರಂಗ ಹರಾಜಿನಲ್ಲಿ ಅಂತಿಮ ಬಿಡ್ ಆಗಿರುತ್ತದೆ ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.
