Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಿತ್ರದುರ್ಗ | ಮಡಿವಾಳ ಮಾಚಿದೇವ ಜಯಂತಿ ಆಚರಣೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ : ಮಡಿವಾಳ ಮಾಚಿದೇವ ವಚನ ಸಾಹಿತ್ಯಗಳನ್ನು ರಕ್ಷಿಸದಿದ್ದರೆ ಲಿಂಗಾಯಿತ, ವೀರಶೈವ ಸಾಹಿತ್ಯದ ಅಸ್ಮಿತೆಯಿರುತ್ತಿರಲಿಲ್ಲ ಎಂದು ಇತಿಹಾಸ ಸಂಶೋಧಕ ಹಾಗೂ ಪ್ರಾಧ್ಯಾಪಕ ಡಾ.ಎನ್.ಎಸ್.ಮಹಂತೇಶ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಮಡಿವಾಳ ಮಾಚಿದೇವ ಜಯಂತಿಯಲ್ಲಿ  ಮಾತನಾಡಿದರು.

ಮಡಿವಾಳ ಜನಾಂಗ ಹಿಂದಿನಿಂದಲೂ ಶೋಷಣೆ ಅನುಭವಿಸಿಕೊಂಡು ಬರುತ್ತಿದೆ. ಹನ್ನೆರಡನೆ ಶತಮಾನದ ಆರ್ಥಿಕ ಕ್ರಾಂತಿಯಿಂದಲೂ ಕೆಳ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಮಡಿವಾಳ ಮಾಚಿದೇವನ ವಚನ ಸಾಹಿತ್ಯ ಚಳುವಳಿ ವಿಶಿಷ್ಟವಾದುದು. ಲಿಂಗಾಯಿತ, ವೀರಶೈವ ವಿದ್ವಾಂಸರು ಮಡಿವಾಳ ಮಾಚಿದೇವನನ್ನು ಹೆಚ್ಚು ಪ್ರಸ್ತಾಪಿಸಿಲ್ಲ. ಭ್ರಷ್ಟರು, ಕೊಲೆಗಡುಕರು, ವ್ಯಭಿಚಾರಿಗಳ ಬಟ್ಟೆಗಳನ್ನು ಮಾಚಿದೇವ ತೊಳೆಯುತ್ತಿರಲಿಲ್ಲ. ಶಿವಶರಣರ ವಸ್ತ್ರಗಳನ್ನು ಮಾತ್ರ ಶುಚಿಗೊಳಿಸುತ್ತಿದ್ದರು. ಬಿಜ್ಜಳನಿಂದ ಮಾಚಯ್ಯನನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಡುನಿಷ್ಟೆ, ಪ್ರಾಮಾಣಿಕ ವಚನಕಾರರಾಗಿದ್ದ ಮಡಿವಾಳ ಮಾಚಿದೇವ ಮೂಢನಂಬಿಕೆ, ಮೌಢ್ಯ, ವೇದ, ಉಪನಿಷತ್ತು, ಶಾಸ್ತ್ರ, ಪುರಾಣಗಳನ್ನು ಕಟುವಾಗಿ ವಿರೋಧಿಸುತ್ತಿದ್ದುದನ್ನು ವಚನ ಸಾಹಿತ್ಯದಲ್ಲಿ ನೋಡಬಹುದು. ಬಸವಣ್ಣನ ಮೇಲೆ ಅಪಾರವಾದ ಭಕ್ತಿಯಿಟ್ಟುಕೊಂಡಿದ್ದರು. ವೀರಶೈವ, ಲಿಂಗಾಯಿತ ಧರ್ಮೋದ್ದಾರಕನಾಗಿದ್ದ ಮಡಿವಾಳ ಮಾಚಿದೇವನ ತತ್ವ ಸಿದ್ದಾಂತ, ಹೋರಾಟದ ಗುಣಗಳನ್ನು ಮಡಿವಾಳ ಜನಾಂಗ ಮೈಗೂಡಿಸಿಕೊಂಡು ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಬದುಕು ಕಟ್ಟಿಕೊಳ್ಳಬೇಕೆಂದು ಕರೆ ನೀಡಿದರು.

ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಬಿ.ರಾಮಜ್ಜ ಮಾತನಾಡಿ ಮಡಿವಾಳ ಜನಾಂಗ ಶ್ರಮ ಜೀವಿಗಳು. ಕೋವಿಡ್‍ನಂತ ಭಯಾನಕ ಪರಿಸ್ಥಿತಿಯಲ್ಲೂ ಬಟ್ಟೆಗಳನ್ನು ಶುಭ್ರಗೊಳಿಸಿದ್ದಾರೆ. ಮಾಚಿದೇವನಿಗೆ ಪವಾಡವಿದೆ. ಅತ್ಯಂತ ಹಿಂದುಳಿದಿರುವ ನಮ್ಮ ಸಮಾಜಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಬೇಕು. ಸಂಘಟನೆ, ಹೋರಾಟ ಅತ್ಯವಶ್ಯಕ. ಒತ್ತುವರಿಯಾಗಿರುವ ದೋಬಿಘಾಟನ್ನು ತೆರವುಗೊಳಿಸಿ ಮಡಿವಾಳ ಜನಾಂಗಕ್ಕೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.

 

ಮಡಿವಾಳ ಜನಾಂಗದ ಗೌರವಾಧ್ಯಕ್ಷ ಡಾ.ವಿ.ಬಸವರಾಜು ಮಾತನಾಡುತ್ತ ಮಡಿವಾಳ ಸಮಾಜದ ಸಾಂಸ್ಕøತಿಕ ನಾಯಕ ಮಾಚಿದೇವ. ಮಡಿವಾಳ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಎಲ್ಲಿಯವರೆಗೂ ವಿದ್ಯಾವಂತರಾಗುವುದಿಲ್ಲವೋ ಅಲ್ಲಿಯತನಕ ಶೋಷಣೆಯಿಂದ ಹೊರ ಬರಲು ಆಗುವುದಿಲ್ಲ. ರಾಜಕೀಯ ಪಕ್ಷಗಳು ನಮ್ಮನ್ನು ಗುರುತಿಸುತ್ತಿಲ್ಲ. ಅಸ್ಪøಶ್ಯತೆ, ಅಸಮಾನತೆ, ಜಾತಿ ತಾರತಮ್ಯ ಇನ್ನು ಜೀವಂತವಾಗಿದೆ. ಕೇವಲ ಬಟ್ಟೆಗಳನ್ನಷ್ಟೆ ಅಲ್ಲ. ಸಮಾಜದ ಕೊಳೆಯನ್ನು ತೊಳೆಯುವ ನಮ್ಮ ಜನಾಂಗಕ್ಕೆ ಮೀಸಲಾತಿ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

 

ಶೋಷಣೆಗೊಳಗಾಗಿರುವ ಮಡಿವಾಳ ಜನಾಂಗವನ್ನು ಉನ್ನತ ಜಾತಿಯಲ್ಲಿ ಸೇರಿಸುವ ಹುನ್ನಾರ ನಡೆಯುತ್ತಿದೆ. ಹದಿನಾರು ರಾಜ್ಯಗಳಲ್ಲಿ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. 2 ಎ.ನಲ್ಲಿರುವ ನಮಗೂ ಒಳ ಮೀಸಲಾತಿ ಬೇಕು ಎಂದರು.

 

ಜಯಂತಿಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಗೋವಿಂದರಾಜು ಮಾತನಾಡಿ ನಿರ್ಲಕ್ಷೆಗೊಳಗಾಗಿರುವ ಸಮಾಜ ನಿಮ್ಮದು. ಹಾಗಾಗಿ ಮಕ್ಕಳಿಗೆ ಮೊದಲು ಶಿಕ್ಷಣ ಕೊಡಿಸಿದಾಗ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಮಡಿವಾಳ ಸಮುದಾಯದವರಲ್ಲಿ ಮನವಿ ಮಾಡಿದರು.

 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಗ್ಯಾರೆಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಮಡಿವಾಳ ಸಮಾಜದ ಕಾರ್ಯದರ್ಶಿ ಕೆ.ಆರ್.ಮಂಜುನಾಥ್, ನಿರ್ದೇಶಕ ರಂಗಸ್ವಾಮಿ, ಮಡಿವಾಳ ದೇವಸ್ಥಾನದ ಗೌರವಾಧ್ಯಕ್ಷ ಲಕ್ಷ್ಮಣ, ಅಧ್ಯಕ್ಷ ರುದ್ರೇಶ್, ಉಪಾಧ್ಯಕ್ಷ ಪರಶುರಾಂ, ರಂಗಸ್ವಾಮಿ, ಕಾರ್ಯದರ್ಶಿ ಪುರುಷೋತ್ತಮ, ಮಡಿವಾಳ ಸಮಾಜದ ಮಹಿಳಾ ಗೌರವಾಧ್ಯಕ್ಷೆ ರಂಗಮ್ಮ, ಶ್ರೀನಿವಾಸ್, ಪೂಜಾರಿ ಯಲ್ಲಪ್ಪ, ರಮೇಶ, ಗೋಪಾಲಣ್ಣ, ಭೋವಿ ಸಮಾಜದ ತಿಮ್ಮಣ್ಣ ಹಾಗೂ ಮಡಿವಾಳ ಸಮುದಾಯದ ಅನೇಕ ಮುಖಂಡರುಗಳು ಮಡಿವಾಳ ಮಾಚಿದೇವ ಜಯಂತಿಯಲ್ಲಿ ಪಾಲ್ಗೊಂಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...