ಚಿತ್ರದುರ್ಗ | ಜೆ.ಜಯಶ್ರೀ ನಿಧನ
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 18 : ಐಯುಡಿಪಿ ಲೇಔಟ್ ನಿವಾಸಿ, ದಸಂಸ ರಾಜ್ಯ ಸಂಚಾಲಕ ದಿವಂಗತ ಎಂ.ಜಯಣ್ಣ ಪುತ್ರಿ ಜೆ.ಜಯಶ್ರೀ (50 ವರ್ಷ) ಭಾನುವಾರ ನಿಧನರಾದರು. ಪುತ್ರ ಇದ್ದಾರೆ. 13 ವರ್ಷಗಳ
ಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ನಗರದ ರುದ್ರಭೂಮಿಯಲ್ಲಿ ಸಂಜೆ ಅಂತ್ಯಕ್ರಿಯೆ
ನಡೆಯಲಿದೆ ಎಂದು ಮೃತರ ಸಹೋದರ ದಲಿತ ಯುವ ಮುಖಂಡ ಪ್ರಸನ್ನ ಜಯಣ್ಣ ತಿಳಿಸಿದ್ದಾರೆ.
ಅಂತಿಮ ದರ್ಶನ: ನಗರಸಭೆ ಮಾಜಿ ಅಧ್ಯಕ್ಷ ಡಿ.ದುರುಗೇಶ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಕರುನಾಡು ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಸ್ಲಂ
ಜನರ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಮಂಜಣ್ಣ, ಎಂ.ಆರ್.ತಿಪ್ಪೇಸ್ವಾಮಿ, ಪತ್ರಕರ್ತ ಚಳ್ಳಕೆರೆ ಬಸವರಾಜ್, ಮಾದಿಗ ಸಮಾಜದ ಹಿರಿಯ ನಾಯಕ ಬಿ.ರಾಜಪ್ಪ ಸೇರಿ ನೂರಾರು ಜನರು ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.










