ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 22 : ನಗರದ ಸರ್ಕಾರಿ ಕಲಾ ಕಾಲೇಜ್ ಹಿಂಭಾಗ, ಕೆ.ಎಚ್.ಬಿ ಕಾಲೋನಿ, ಸೂರ್ಯಪುತ್ರ ಸರ್ಕಲ್ ಸಮೀಪದ ನಿವಾಸಿ, ನಿವೃತ್ತ ಮುಖ್ಯಶಿಕ್ಷಕ ಹೆಚ್.ಎಂ.ಬಾಲಕೃಷ್ಣ (79) ಭಾನುವಾರ ಮಧ್ಯರಾತ್ರಿ ನಿಧನರಾದರು.
ಪತ್ನಿ, ಮೂವರು ಪುತ್ರರು ಇದ್ದಾರೆ. ಸೂರ್ಯಪುತ್ರ ಸರ್ಕಲ್ ಸಮೀಪದ ಮನೆ ಬಳಿ ಸೋಮವಾರ ಮಧ್ಯಾಹ್ನ 1.30 ವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ್ದು, ಬಳಿಕ ಸ್ವಗ್ರಾಮ ಜೆ.ಎನ್.ಕೋಟೆಯಲ್ಲಿ ಸೋಮವಾರ (ಇಂದು) ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತರ ಪುತ್ರ ವೈಣಿಕ್ ತಿಳಿಸಿದ್ದಾರೆ.
ಜೋಗಿಮಟ್ಟಿ ರಸ್ತೆ ಕರುವಿನಕಟ್ಟೆ ಶಾಲೆ, ಬಾರ್ಲ್ ಲೈನ್, ಸಿ.ಕೆ.ಪುರ, ತಿಪ್ಪಾರೆಡ್ಡಿಹಳ್ಳಿ, ಫಟ್ರಹಳ್ಳಿ, ಕೋನಸಾಗರ, ಜೆ.ಎನ್.ಕೋಟೆ, ಕೋಳಾಳ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಬಾಲಕೃಷ್ಣ ಅವರು ಸೇವೆ ಸಲ್ಲಿಸಿ, ಮುಖ್ಯಶಿಕ್ಷಕರಾಗಿ ನಿವೃತ್ತಿ ಹೊಂದಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











