ಚಿತ್ರದುರ್ಗ ಜಿಲ್ಲೆಯ ಮಳೆ ವರದಿ : 16 ಮನೆಗಳು ಭಾಗಶಃ ಹಾನಿ

1 Min Read

 

ಚಿತ್ರದುರ್ಗ,(ಅಕ್ಟೋಬರ್01) : ಜಿಲ್ಲೆಯಲ್ಲಿ ಸೆಪ್ಟಂಬರ್ 30ರಂದು ಸುರಿದ ಮಳೆ ವಿವರದನ್ವಯ ಹೊಳಲ್ಕೆರೆ ತಾಲ್ಲೂಕಿನ ಹೆಚ್.ಡಿ.ಪುರದಲ್ಲಿ 36 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಉಳಿದಂತೆ ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 34.2 ಮಿ.ಮೀ, ಚಿಕ್ಕಜಾಜೂರು 19.5 ಮಿ.ಮೀ, ಬಿ.ದುರ್ಗ 33 ಮಿ.ಮೀ, ತಾಳ್ಯ 10.2 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಳ್ಮೂರಿನಲ್ಲಿ 9.8 ಮಿ.ಮೀ, ರಾಯಪುರ 17.9 ಮಿ.ಮೀ, ಬಿ.ಜಿ.ಕೆರೆ 13.8 ಮಿ.ಮೀ, ರಾಂಪುರ 30.1 ಮಿ.ಮೀ, ದೇವಸಮುದ್ರ 26 ಮಿ.ಮೀ ಮಳೆಯಾಗಿದೆ .

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 18.6 ಮಿ.ಮೀ, ಬಾಗೂರು 3.3 ಮಿ.ಮೀ,  ಮತ್ತೋಡು 8.6 ಮಿ.ಮೀ, ಮಾಡದಕೆರೆ 26 ಮಿ.ಮೀ, ಶ್ರೀರಾಂಪುರ 16.2 ಮಿ.ಮೀ ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 18.8 ಮಿ.ಮೀ, ಬಬ್ಬೂರಿನಲ್ಲಿ 20.6 ಮಿ.ಮೀ, ಈಶ್ವರಗೆರೆ 8.8 ಮಿ.ಮೀ, ಇಕ್ಕನೂರಿನಲ್ಲಿ 15.2 ಮಿ,ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ -1ರಲ್ಲಿ 22 ಮಿ.ಮೀ, ಚಿತ್ರದುರ್ಗ -2ರಲ್ಲಿ 20.4 ಮಿ.ಮೀ, ಹಿರೇಗುಂಟನೂರು 4.1, ಮಿ.ಮೀ, ಐನಳ್ಳಿ 31.4 ಮಿ.ಮೀ, ಭರಮಸಾಗರ 25.2 ಮಿ.ಮೀ, ಸಿರಿಗೆರೆ 26.2 ಮಿ.ಮೀ, ತುರುವನೂರು 11.6 ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 14.6 ಮಿ.ಮೀ, ಪರಶುರಾಂಪುರ 15.6 ಮಿ.ಮೀ, ನಾಯಕನಹಟ್ಟಿ 23.8 ಮಿ.ಮೀ, ಡಿ.ಮರಿಕುಂಟೆ 5.4 ಮಿ.ಮೀ, ತಳುಕು 8.2 ಮಿ.ಮೀ ಮಳೆಯಾಗಿದೆ.

16 ಮನೆಗಳು ಭಾಗಶಃ ಹಾನಿ: ಶುಕ್ರವಾರ ಸುರಿದ ಮಳೆಗೆ ಜಿಲ್ಲೆಯಲ್ಲಿ ಒಟ್ಟು 16 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ.  ಚಿತ್ರದುರ್ಗ ತಾಲ್ಲೂಕಿನಲ್ಲಿ 4 ಮನೆಗಳು, ಚಳ್ಳಕೆರೆ 4, ಹಿರಿಯೂರು 2, ಹೊಸದುರ್ಗ 1, ಹೊಳಲ್ಕೆರೆ 4 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *