ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಚಿತ್ರದುರ್ಗ ಅ. 31 : ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು ನ. 01 ರಂದು ಜಿಲ್ಲಾ ಕೇಂದ್ರದಲ್ಲಿ ಜರುಗುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲು 26 ಜನ ಸಾಧಕರನ್ನು ಆಯ್ಕೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ತಿಳಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯು ಅ. 30 ರಂದು ಸಭೆ ನಡೆಸಿ, ಸನ್ಮಾನಿತರ ಪಟ್ಟಿಯನ್ನು ಶಿಫಾರಸು ಮಾಡಿ ಸಲ್ಲಿಸಿರುತ್ತದೆ.
ಚಿತ್ರದುರ್ಗ ತಾಲ್ಲೂಕು ಚೀಳಂಗಿ ಗ್ರಾಮದ ರಂಗಪ್ಪ ಎ.ಡಿ.- ಜಾನಪದ ಕಲೆ(ಉರುಮೆ ವಾದ್ಯ). ಚಿತ್ರದುರ್ಗ ಗಾಂಧಿನಗರದ ಹೆಚ್. ಕಮಲಮ್ಮ- ಜಾನಪದ (ಸೋಬಾನೆ). ಚಿತ್ರದುರ್ಗ ಬುದ್ಧನಗರದ ಕೆ. ಶ್ರೀನಿವಾಸ- ಜಾನಪದ (ತಾಷರಾಂಡೋಲು). ಮೊಳಕಾಲ್ಮೂರು ತಾಲ್ಲೂಕು ರ್ರೇನಹಳ್ಳಿಯ ಬಿ. ಮಾರಣ್ಣ- ಕಲೆ (ಬಯಲಾಟ). ಚೋಳಗುಡ್ಡದ ಚನ್ನಬಸಪ್ಪ- ರಂಗಭೂಮಿ. ಚಿತ್ರದುರ್ಗದ ಸಿ.ಹೆಚ್. ಜಯಪ್ಪ- ತಬಲಾ ಕಲಾವಿದರು. ರಾಜೇಂದ್ರ ನಗರದ ಹರೀಶ್ ಎಂ.ಕೆ.- ರಂಗಭೂಮಿ. ಹೊಸದುರ್ಗದ ಬಿ. ಈಶ್ವರಪ್ಪ- ಸಂಗೀತ ಕಲಾವಿದರು. ಚಿತ್ರದುರ್ಗದ ನಾಗವಲ್ಲಿ ಶಾಸ್ತಿç ಮತ್ತು ಎಂ.ಕೆ. ಹಟ್ಟಿ ಗ್ರಾಮದ ಮಲ್ಲಿಕಾರ್ಜುನಯ್ಯ ಎ.ಎಂ.- ಸಂಗೀತ ಕ್ಷೇತ್ರ. ಚಿತ್ರದುರ್ಗದ ಹೇಮಾವತಿ- ಯೋಗ.
ಕನ್ನಡ ಸಂಪಿಗೆ ಪತ್ರಿಕೆ ಸಂಪಾದಕ ಟಿ. ತಿಪ್ಪೇಸ್ವಾಮಿ, ವಿಜಯಕರ್ನಾಟಕ ಪತ್ರಿಕೆ ಛಾಯಾಗ್ರಾಹಕ ಎಸ್.ಜಿ. ಸುರೇಶ್ ಬಾಬು,
ಪಬ್ಲಿಕ್ ಟಿ.ವಿ. ಕ್ಯಾಮೆರಾಮನ್ ಅರ್ಜುನ್ ಡಿ.,
ಪ್ರಜಾ ಟಿ.ವಿ. ವರದಿಗಾರ ಡಿ. ಕುಮಾರಸ್ವಾಮಿ- ಮಾಧ್ಯಮ ಕ್ಷೇತ್ರ.
ಪರಶುರಾಂಪುರದ ಡಾ. ಎಂ. ಚೌಡಪ್ಪ-ವೈದ್ಯಕೀಯ ಕ್ಷೇತ್ರ. ನಿವೃತ್ತ ಮುಖ್ಯ ಶಿಕ್ಷಕ ಚಿತ್ರದುರ್ಗದ ಹೆಚ್.ಎಸ್.ಟಿ. ಸ್ವಾಮಿ, ಜಿ.ಎಂ. ಶಂಕರಮೂರ್ತಿ, ಚಿತ್ರದುರ್ಗ- ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರ. ಹಿರಿಯೂರು ತಾಲ್ಲೂಕು ವಾಣಿ ವಿಲಾಸಪುರದ ಹೆಚ್.ಆರ್. ರಾಮಸ್ವಾಮಿ, ಚಿತ್ರದುರ್ಗದ ಟಿ.ವಿ. ಸುರೇಶ ಗುಪ್ತ, ಹೊಸದುರ್ಗ ತಾಲ್ಲೂಕು ಶ್ರೀರಾಂಪುರದ ಬಿ. ಮೈಲಾರಪ್ಪ ಮತ್ತು ರಾಮ್ಕಿ ಮಾಚೇನಹಳ್ಳಿ- ಸಾಹಿತ್ಯ/ಸಂಕೀರ್ಣ ಕ್ಷೇತ್ರ. ಹಿರಿಯೂರಿನ ನಿವೃತ್ತ ಮುಖ್ಯ ಶಿಕ್ಷಕ ಎಂ.ಬಿ. ಲಿಂಗಪ್ಪ- ಶಿಕ್ಷಣ ಕ್ಷೇತ್ರ. ಚಿತ್ರದುರ್ಗದ ದುರುಗೇಶ್, ಚಿತ್ರದುರ್ಗ ಹಿಮ್ಮತ್ ನಗರದ ಸಿರೀನ್ ತಾಜ್- ಸಮಾಜ ಸೇವೆ ಕ್ಷೇತ್ರ. ಚಳ್ಳಕೆರೆ ತಾಲ್ಲೂಕು ಹಾಲಿಗೊಂಡನಹಳ್ಳಿಯ ರುದ್ರಮುನಿಯಪ್ಪ- ಕೃಷಿ ಕ್ಷೇತ್ರ.
ಮೇಲ್ಕಂಡ ಗಣ್ಯರಿಗೆ ನ. 01 ರಂದು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜರುಗುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸೂಚನೆ
ಕನ್ನಡ ರಾಜ್ಯೋತ್ಸವ ಅಂಗವಾಗಿ ನ. 01 ರಂದು ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ಎಲ್ಲ ಕಾರ್ಯಕ್ರಮಗಳಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿಗಳು ತಪ್ಪದೆ ಭಾಗವಹಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ರಾಜ್ಯೋತ್ಸವದ ಅಂಗವಾಗಿ ಅಂದು ಬೆಳಿಗ್ಗೆ 07 ಗಂಟೆಗೆ ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರದ ಮೆರವಣಿಗೆಯು ವಿವಿಧ ಕಲಾ ತಂಡಗಳು, ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು, ಶಾಲಾ ಮಕ್ಕಳೊಂದಿಗೆ ಗಾಂಧಿ ವೃತ್ತ, ಸ್ಟೇಟ್ ಬ್ಯಾಂಕ್ ವೃತ್ತ, ಅಂಬೇಡ್ಕರ್ ವೃತ ಹಾಗೂ ಮದಕರಿ ವೃತ್ತ ಮೂಲಕ ಪೊಲಿಸ್ ಕವಾಯತು ಮೈದಾನ ತಲುಪಲಿದೆ. ಬಳಿಕ ಇದೇ ಮೈದಾನದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ರಾಷ್ಟç ಧ್ವಜಾರೋಹಣ ನೆರವೇರಿಸುವರು. ಇದೇ ದಿನದಂದು ಸಂಜೆ 06 ಗಂಟೆಗೆ ನಗರದ ವಾಲ್ಮೀಕಿ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಶಾಲಾ ಮಕ್ಕಳ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಎಲ್ಲ ಅಧಿಕಾರಿ, ಸಿಬ್ಬಂದಿಗಳು ತಪ್ಪದೆ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್