ಚಿತ್ರದುರ್ಗ.ಸೆ.10: ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರು ಸರಬರಾಜು ಆಗುವ ವಾಣಿವಿಲಾಸ ಸಾಗರ( ಮಾರಿ ಕಣಿವೆ) ಜಾಕ್ ವೆಲ್ ಮೋಟಾರು ದುರಸ್ಥಿ ಕೆಲಸ ಸೆ.9 ರಿಂದ ಸೆ.15 ವರೆಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ನಗರದ ನೀರು ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ದಿನಗಳಂದು ಸಾರ್ವಜನಿಕರು ತಮ್ಮ ಪ್ರದೇಶದ ಕೊಳವೆ ಬಾವಿಗಳ ನೀರನ್ನು ಮತ್ತು ಆರ್.ಓ.ಪ್ಲಾಂಟ್ ಘಟಕದ ನೀರನ್ನು ಬಳಸುವಂತೆ ಹಾಗೂ ನೀರನ್ನು ಮಿತವಾಗಿ ಉಪಯೋಗಿಸುವಂತೆ ಪೌರಾಯುಕ್ತೆ ಲಕ್ಷ್ಮಿ ಕೋರಿದ್ದಾರೆ.









