Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ: 44A ಕಾಯ್ದೆ ಹಿಂಪಡೆಯದಿದ್ದರೆ ಕ್ರಷರ್ ಸ್ಥಗಿತ: ಜಿಲ್ಲಾ ಕ್ವಾರೆ ಮಾಲೀಕರ ಸಂಘದಿಂದ ಉಗ್ರ ಹೋರಾಟದ ಎಚ್ಚರಿಕೆ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 03 : ರಾಜ್ಯ ಸರ್ಕಾರ 44 ಎ. ಕಾಯಿದೆಯನ್ನು ಹಿಂದಕ್ಕೆ ಪಡೆದು ನಮ್ಮನ್ನು ಕರೆಸಿ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಕ್ರಷರ್‍ಗಳನ್ನು ನಿಲ್ಲಿಸಿ ಉಗ್ರ ಹೋರಾಟ ಮಾಡಬೇಕಾಗುತ್ತದೆಂದು ಜಿಲ್ಲಾ ಕ್ವಾರೆ ಮತ್ತು ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಎಚ್ಚರಿಸಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಂಟ್ರಾಕ್ಟರ್ ಮತ್ತು ಕ್ರಷರ್ ಇಬ್ಬರ ಬಳಿಯೂ ಸರ್ಕಾರ ರಾಯಲ್ಟಿ ಸಂಗ್ರಹಿಸುತ್ತಿದೆ. ಇಂತಹ ದ್ವಿಮುಖ ನೀತಿಯಿಂದ ನಮಗೆ ನಷ್ಟವಾಗುತ್ತಿದೆ. 44 ಎ. ಕಾಯಿದೆಯನ್ನು ಸರ್ಕಾರ ಹಿಂದಕ್ಕೆ ಪಡೆದು ಒಂದೆ ನೀತಿ ಅನುಸರಿಸಲಿ. ಆಂಧ್ರ ತಮಿಳುನಾಡಿನಿಂದ ಇಲ್ಲಿಗೆ ಜೆಲ್ಲಿಗಳು ಬರುತ್ತಿವೆ. ಆದರೆ ಅವರಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ತೆರಿಗೆ ಪಾವತಿಯಾಗುತ್ತಿಲ್ಲ. ಒಂದು ವರ್ಷದಿಂದ ಸರ್ಕಾರಕ್ಕೆ ನಮ್ಮ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸುತ್ತಿದ್ದೇವೆ. ಇನ್ನು ನಾಲ್ಕೈದು ದಿನಗಳು ಕಾಯುತ್ತೇವೆ. ಸಚಿವ ಸಂಪುಟ ವಿಸ್ತರಣೆಯಾದರೆ ನೂತನ ಸಚಿವರಿಗೂ ಮನವಿ ಅರ್ಪಿಸುತ್ತೇವೆ. ಸರ್ಕಾರಕ್ಕೆ ಸಂದಾಯವಾಗಬೇಕಾದ ರಾಯಲ್ಟಿ ಎಲ್ಲಾ ಹೋಗಿದೆ. ಆದರೂ ನಮಗೆ ಕಿರುಕುಳ ನಿಂತಿಲ್ಲ. ಸಾಲ ತೀರಿಸಲಾಗದೆ ರೈತ ಹೇಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೋ ಅದೇ ರೀತಿ ಕ್ರಷರ್‍ನವರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆಂದು ಹೇಳಿದರು.

 

ಕಲ್ಲು ಗಣಿಗೆ ಸಂಬಂಧಿಸಿದಂತೆ ಡಿ.ಎಂ.ಜಿ. ಕಡೆಯಿಂದ ಪ್ರತಿ ವರ್ಷ ಆಡಿಟ್ ಆಗುತ್ತಿರುವುದರಿಂದ ಕೆ.ಇ.ಬಿ. ಬಿಲ್ ಪಾವತಿಸಿಕೊಳ್ಳುವುದನ್ನು ತಕ್ಷಣ ನಿಲ್ಲಿಸಬೇಕು. ಜಿ.ಎಸ್.ಟಿ. ರೂಲ್ಸ್ ಪ್ರಕಾರ ಐವತ್ತು ಸಾವಿರ ರೂ.ಗಳ ಒಳಗಡೆ ಜಿ.ಎಸ್.ಟಿ. ಬಿಲ್ ಇದ್ದರೆ ಈ-ವೇ ಬಿಲ್ ಅವಶ್ಯಕತೆಯಿರುವುದಿಲ್ಲ. ಎಂದು ಕಾನೂನು ಹೇಳುತ್ತದೆ. ಆದರೆ ಡಿ.ಎಂ.ಜಿ. ಇಲಾಖೆಯವರು ನಮ್ಮ ಸರಕು ಸಾಗಾಣಿಕೆ ಮಾಡುವ ಬಿಲ್ಲಿನ ಮೊತ್ತ ಎರಡು ಸಾವಿರ ರೂ.ಗಳಿಂದ ಹದಿನೈದು ಸಾವಿರ ರೂ. ಒಳಗಡೆಯಿರುತ್ತದೆ.  ಈಗಿರುವಾಗ ಈ-ವೇ ಬಿಲ್‍ನ ಅಗತ್ಯವಿಲ್ಲ. ಆದ್ದರಿಂದ ಈ-ವೇ ಬಿಲ್ ಪದ್ದತಿಯನ್ನು ರದ್ದುಪಡಿಸುವಂತೆ ಅಬುಲ್ ಮಜೀದ್ ಸರ್ಕಾರವನ್ನು ಒತ್ತಾಯಿಸಿದರು.

 

ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡಿ ಹೊರ ರಾಜ್ಯದಿಂದ ಬರುವ ಜೆಲ್ಲಿಗೆ ನಮ್ಮ ರಾಜ್ಯ ಸರ್ಕಾರ ತೆರಿಗೆ ವಸೂಲಿ ಮಾಡುತ್ತಿಲ್ಲ. ನಮ್ಮ ಉದ್ದಿಮೆಯ ಮೇಲೆ ಸರ್ಕಾರ ಇಲ್ಲ ಸಲ್ಲದ ಕಾನೂನುಗಳನ್ನು ಜಾರಿಗೊಳಿಸಿ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್‍ಗಳಿಗೆ ದಂಡ ವಿಧಿಸುತ್ತಿರುವುದನ್ನು ತಕ್ಷಣವೆ ನಿಲ್ಲಿಸಬೇಕು. ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿಲ್ಲ. ಕಾನೂನು ಬದ್ದವಾಗಿ ಎಂ.ಡಿ.ಪಿ, ಜಿಎಸ್‍ಟಿ. ಮುಖಾಂತರ ಸರಕು ಪಡೆದು ಕ್ರಷಿಂಗ್ ಮಾಡಿ ಸಾಗಾಣಿಕೆ ಮಾಡುತ್ತಿದ್ದೇವೆಂದು ತಿಳಿಸಿದರು. ಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿರಂಜನ್, ವೆಂಕಟೇಶ್, ಅಶೋಕ್‍ರೆಡ್ಡಿ, ಮಲ್ಲಿಕಾರ್ಜುನ್, ಅಭಿಷೇಕ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now