Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ಭಗತ್ ಸಿಂಗ್ 119ನೇ ಜನ್ಮದಿನಾಚರಣೆ : ಸಮಾಜವಾದಿ ಸಮಾಜ ನಿರ್ಮಾಣವೇ ಭಗತ್ ಸಿಂಗ್‌ಗೆ ಸಲ್ಲಿಸುವ ನಿಜವಾದ ಗೌರವ : ರವಿಕುಮಾರ್

---Advertisement---

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 28 : ನಗರದ ಡಿ.ಸಿ ವೃತ್ತದಲ್ಲಿರುವ ಭಗತ್ ಸಿಂಗ್ ಉದ್ಯಾನವನದಲ್ಲಿಂದು(ಸೆ. 28, ಸೋಮವಾರ) ಎಐಡಿಎಸ್‍ಒ- ಎಐಡಿವೈಒ-ಎಐಎಂಎಸ್‍ಎಸ್  ವತಿಯಿಂದ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 119ನೇ ಜನ್ಮದಿನವನ್ನು ಆಚರಿಸಲಾತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಮುಖಂಡ ರವಿಕುಮಾರ್ ಅವರು, ಹುತಾತ್ಮ ಭಗತ್ ಸಿಂಗ್ ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಹೋರಾಡಿ ಕೇವಲ ತಮ್ಮ 23 ವಯಸ್ಸಿನಲ್ಲೇ ಗಲ್ಗಂಬಕ್ಕೆ ಮುತ್ತಿಟ್ಟು ಹುತಾತ್ಮರಾದರು. ತಮ್ಮೆದುರಿನ ಅನ್ಯಾಯದ ವಿರುದ್ಧ ಸಿಡಿದು ನಿಂತ ಅವರು ಬ್ರಿಟಿಷರ ದಬ್ಬಾಳಿಕೆಯನ್ನು ಕೊನೆಗಾಣಿಸುವುದು ಮಾತ್ರವಲ್ಲದೆ ನಮ್ಮ ಸಮಾಜದಲ್ಲಿ ಮಾನವನಿಂದ ಮಾನವನ ಶೋಷಣೆಗೆ ಅವಕಾಶವೇ ಇರದಂತಹ ಸಮಾಜವಾದಿ ಸಮಾಜವನ್ನು ಕಟ್ಟುವ ಕನಸು ಕಂಡಿದ್ದರು. ಅವರು “ನಮ್ಮ ದೇಶದಲ್ಲಿ ಸಮಾಜವಾದವನ್ನು ಸ್ಥಾಪಿಸದೆ ಇದ್ದರೆ ದೇಶ ಸ್ವಾತಂತ್ರ್ಯಗೊಂಡರೂ ಸಹ ಬ್ರಿಟಿಷರ ಜಾಗದಲ್ಲಿ ಭಾರತೀಯ ಬಂಡವಾಳಗಾರರೇ ಈ ದೇಶದ ಜನಸಾಮಾನ್ಯರನ್ನು ಶೋಷಣೆ ಮಾಡುತ್ತಾರೆ. ಆದ್ದರಿಂದ ಸಮಾಜವಾದಿ ಕ್ರಾಂತಿ ಅನಿವಾರ್ಯ” ಎಂದಿದ್ದರು.

ಆದರೆ ಸ್ವಾತಂತ್ರ್ಯ ಸಂಗ್ರಾಮದ ಕೊನೆಯ ಘಟ್ಟದಲ್ಲಿ ಬ್ರಿಟಿಷರೊಂದಿಗೆ ಸಂಧಾನ ಮಾಡಿಕೊಳ್ಳುತ್ತಿದ್ದ ರಾಜೀ ಪರ ಪಂಥದ ನಾಯಕರು ಮೇಲುಗೈ ಸಾಧಿಸಿದ ಪರಿಣಾಮ, ದೇಶದ ಅಧಿಕಾರವು ಬ್ರಿಟಿಷರ ಕೈನಿಂದ ಭಾರತದ ಬಂಡವಾಳಿಕರ ಕೈಗೆ ಹಸ್ತಾಂತರಗೊಂಡಿತು. ತತ್ಬಲವಾಗಿಯೇ ಸ್ವಾತಂತ್ರ್ಯ ಬಂದು 80 ವರ್ಷಗಳು ಕಳೆಯುತ್ತಿದ್ದರೂ ಬಡತನ, ನಿರುದ್ಯೋಗ, ಮಹಿಳೆಯರ ಮೇಲಿನ ದೌರ್ಜನ್ಯ, ರೈತರ ಆತ್ಮಹತ್ಯೆ, ಕಾರ್ಮಿಕರ ಹಕ್ಕುಗಳ ಹರಣಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದಕ್ಕೆ ಪ್ರಮುಖ ಕಾರಣ ಇಷ್ಟು ವರ್ಷಗಳ ಕಾಲ ನಮ್ಮನ್ನಾಳಿದ ಎಲ್ಲ ರಾಜಕೀಯ ಪಕ್ಷಗಳ ಬಂಡವಾಳಶಾಹಿಪರ ನೀತಿಗಳು ಮತ್ತು ಜನಸಾಮಾನ್ಯರ ಬಗೆಗಿನ ನಿಷ್ಕಾಳಜಿ.

ಈ ಅನ್ಯಾಯವನ್ನು ಪ್ರಶ್ನಿಸಬೇಕಾದ ಮತ್ತು ಸೋಲಿಸಬೇಕಾದ ಜವಾಬ್ದಾರಿ ಇಂದಿನ ವಿದ್ಯಾರ್ಥಿ ಯುವಜನರ ಮೇಲಿದೆ. ಇಂದಿನ ಹೊಸ ಪೀಳಿಗೆಯ ಜನರಿಗೆ ಭಗತ್ ಸಿಂಗ್‍ರವರ ವಿಚಾರಗಳು ದೊರೆತರೆ, ಅವರು ಅನ್ಯಾಯದ ವಿರುದ್ಧ ತಿರುಗಿ ಬೀಳುತ್ತಾರೆ ಎಂಬ ಭಯದಿಂದಲೇ ನಮ್ಮ ನಾಳುತ್ತಿರುವ ಪಕ್ಷಗಳು ಭಗತ್ ಸಿಂಗ್‍ರಂತಹ ಕ್ರಾಂತಿಕಾರಿಗಳ ವಿಚಾರಗಳನ್ನು ನಮ್ಮಿಂದ ಮರೆಮಾಚುತ್ತಿವೆ. ಆದರೆ ನಾವು ಈ ಹುನ್ನಾರಕ್ಕೆ ಬಲಿಯಾಗದೆ ಭಗತ್ ಸಿಂಗರನ್ನು ನೆನೆಯುತ್ತಾ, ಅವರಂತೆಯೇ ನಾವು ಸಹ ಇಂದಿನ ಎಲ್ಲ ಸಮಸ್ಯೆಗಳ ವಿರುದ್ಧ ಸಂಘಟಿತರಾಗಿ ಹೋರಾಡಬೇಕು ಎಂದು ಕರೆ ನೀಡಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಮುಖಂಡ ಈರಣ್ಣ ಅವರು, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದಂತಹ ಶಿಕ್ಷಣವನ್ನು ಕೊಡಬೇಕಾದ ಸರ್ಕಾರ ಇಂದು ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ. ಖಾಸಗಿ ಶಾಲಾ-ಕಾಲೇಜುಗಳನ್ನು ಪೆÇ್ರೀತ್ಸಾಹಿಸುತ್ತಿದೆ. ಇವುಗಳ ವಿರುದ್ಧ ಹೋರಾಟ ಅನಿವಾರ್ಯ. ಅಂತಹ ಹೋರಾಟಕ್ಕೆ ಭಗತ್ ಸಿಂಗ್ ನಮಗೆ ಸ್ಪೂರ್ತಿ ನೀಡುತ್ತಾರೆ. ಅದಕ್ಕಾಗಿಯೇ ಇಂದು ಭಗತ್ ಸಿಂಗ್‍ರ ಜೀವನ ಆದರ್ಶಗಳನ್ನು ವಿದ್ಯಾರ್ಥಿ ಯುವಜನರಲ್ಲಿ ಬಿತ್ತುವ ಸಲುವಾಗಿಯೇ ನಮ್ಮ ಸಂಘಟನೆಗಳು ದೇಶದಾದ್ಯಂತ ಎಲ್ಲಾ ಕಡೆಗಳಲ್ಲಿ, ಹಾಗೆಯೇ ನಮ್ಮ ಚಿತ್ರದುರ್ಗದ ನಾನಾ ಕಡೆಗಳಲ್ಲಿ ಭಗತ್ ಸಿಂಗ್‍ರವರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿದ್ದೇವೆ. ಈ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿ ಯುವಜನತೆ ಮತ್ತು ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದರು.

ಎಐಡಿವೈಓ ರಾಜ್ಯ ಉಪಾಧ್ಯಕ್ಷರಾದ ವಿಜಯಕುಮಾರ್, ಅಭಿಷೇಕ್ ಹಾಗೂ ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತರ ಸಂಘಟನೆಯ ಮುಖಂಡರಾದ ಗಿರಿಜಮ್ಮ, ಲಕ್ಷ್ಮಿಬಾಯಿ, ಗುರುಶಾಂತ, ಮಂಜುಳಮ್ಮ ಮತ್ತಿತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿ-ಯುವಜನರು ಆಶಾ ಕಾರ್ಯಕರ್ತೆಯರು, ಲಘು ವಾಹನ ಚಾಲಕರು ಹಾಗೂ ಮಾಲೀಕರು ಸಾರ್ವಜನಿಕರು ಪಾಲ್ಗೊಂಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now