Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಭಗತ್‍ಸಿಂಗ್‍ರವರ 119 ನೇ ಜನ್ಮದಿನಾಚರಣೆ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 28 : ಧೀರ ಹುತಾತ್ಮ, ದೇಶಭಕ್ತ ಭಗತ್‍ಸಿಂಗ್‍ರ 119 ನೇ ಜನ್ಮದಿನಾಚರಣೆಯನ್ನು ಎಐಡಿಎಸ್‍ಓ. ಎಐಡಿವೈಓ. ಎಐಎಂಎಸ್‍ಎಸ್. ವತಿಯಿಂದ ರೋಟರಿ ಬಾಲಭವನದ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ಭಾನುವಾರ ಆಚರಿಸಲಾಯಿತು.

ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದು, ಭಗತ್‍ಸಿಂಗ್‍ರವರ ಭಾವಚಿತ್ರಕ್ಕೆ ಪುಷ್ರ್ಪಾಚನೆ ಸಲ್ಲಿಸಿದರು.
ಎಐಯುಟಿಯುಸಿ. ಜಿಲ್ಲಾ ಸಂಚಾಲಕ ರವಿಕುಮಾರ್ ಮಾತನಾಡಿ ಬ್ರಿಟೀಷರ ಎದೆಯಲ್ಲಿ ನಡುಕ ಹುಟ್ಟಿಸಿದ ಕೆಚ್ಚೆದೆಯ ವೀರ ಭಗತ್‍ಸಿಂಗ್‍ರವರ ಚಿಂತನೆಗಳನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ 23 ನೇ ವಯಸ್ಸಿಗೆ ನೇಣಿಗೆ ಕೊರಳೊಡ್ಡಿದ ಭಗತ್‍ಸಿಂಗ್ ವಿಚಾರ ಯಾರಿಗೂ ಬೇಕಾಗಿಲ್ಲ. ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು ನಿರ್ಲಕ್ಷಿಸುತ್ತಲೆ ಬರುತ್ತಿವೆ. ಜಲಿಯನ್‍ವಾಲಾಬಾಗ್ ಘಟನೆ ಅವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿತು. ಬ್ರಿಟೀಷರ ಗುಲಾಮಗಿರಿ ವಿರುದ್ದ ಧ್ವನಿ ಎತ್ತಿ ದೇಶದ ಸ್ವಾತಂತ್ರ್ಯದ ಬಗೆಗಿನ ಪರಿಕಲ್ಪನೆ ಭಗತ್‍ಸಿಂಗ್‍ರಲ್ಲಿ ಪಕ್ವಗೊಂಡು ಇಂದಿಗೂ ಎಲ್ಲರೆದೆಯಲ್ಲಿ ಧೀರ ಹುತಾತ್ಮನಾಗಿ ಉಳಿದುಕೊಂಡಿದ್ದಾರೆಂದು ಸ್ಮರಿಸಿದರು.

ಎಐಎಂಎಸ್‍ಎಸ್ ಮಹಿಳಾ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಕುಮುದ, ಎಐಡಿಎಸ್‍ಓ. ಜಿಲ್ಲಾ ಸಂಚಾಲಕ ಮಹಂತೇಶ್, ಎಐಡಿವೈಓ. ಸಂಘಟನಾ ಸಂಚಾಲಕ ಕೃಷ್ಣ
ಭರತ್, ಶಿವಕುಮಾರ್, ಗಿರಿಜಮ್ಮ, ಗುರುಶಾಂತ, ಲಕ್ಷ್ಮಿ, ಭಗತ್‍ಸಿಂಗ್ ಅಭಿಮಾನಿಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಟ್ಯಾಕ್ಸಿ ಚಾಲಕರುಗಳು ಜನ್ಮದಿನಾಚರಣೆಯಲ್ಲಿ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...