ಚಿತ್ರದುರ್ಗ, ಮಾರ್ಚ್. 30 : ನಗರದ ವಿಪಿ ಬಡಾವಣೆ ವಾಸಿ, ಬಸವೇಶ್ವರ ಚಿತ್ರಮಂದಿರ ಹಾಗೂ ಬಸವೇಶ್ವರ ಮೋಟಾರ್ಸ್ ಮಾಲೀಕರಾದ ಸಿ.ಅಕ್ಕಿರೆಡ್ಡಿ(91) ಶನಿವಾರ ಮುಂಜಾನೆ ನಿಧನ ಹೊಂದಿದರು.
ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿಯ ಅಗಲಿದ್ದಾರೆ. ಅಂತ್ಯಕ್ರಿಯೆ ಇಂದು ಸಂಜೆ ಮುಕ್ತಿಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.












