ಚಿತ್ರದುರ್ಗ. ಜ.22: ಕ್ಯಾದಿಗೇರೆ ಗ್ರಾಮದ ಹಳೆ ಎನ್.ಹೆಚ್ 48 ರಸ್ತೆಗೆ ಹೊಂದಿಕೊಂಡಿರುವ ಜೈ ಹಿಂದ್ ಹೋಟೆಲ್ ನ ಪಕ್ಕದಲ್ಲಿ ಪುರುಷನ ಶವ ಪತ್ತೆಯಾದ ಕುರಿತು ಜ.19 ರಂದು ನಗರದ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾಮಾಧೇಯ ವ್ಯಕ್ತಿ 25 ರಿಂದ 30 ವರ್ಷದ ವಯಸ್ಸಿನವನಾಗಿದ್ದು, ಸುಮಾರು 5.5 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಕಪ್ಪು ಮೀಸೆ ಹಾಗೂ ಕಪ್ಪು ಗಡ್ಡ ಹೊಂದಿದ್ದು, ಬಲಗೈ ಮುಂಗೈ ಮೇಲೆ ಅಮ್ಮ ಎಂದು ಇಂಗ್ಲೀಷ್ ಅಕ್ಷರದಲ್ಲಿ ಅಚ್ಚೆ ಇರುತ್ತದೆ. ಮೃತ ವ್ಯಕ್ತಿಯು ಸಿಮೆಂಟ್ ಕಲರ್ ತುಂಬು ತೋಳಿನ ಟಿ ಶರ್ಟ್, ಜೀನ್ಸ್ ಪ್ಯಾಂಟ್, ಕಪ್ಪು ಕಲರ್ ಚಡ್ಡಿ, ಸೊಂಟ ಭಾಗದಲ್ಲಿ ಕೆಂಪು ಉಡುದಾರ ಧರಿಸಿರುತ್ತಾನೆ.
ಮೃತ ವ್ಯಕ್ತಿಯ ಗುರುತು ಪತ್ತೆಯಾದವರು, ಚಿತ್ರದುರ್ಗ ನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08194-230156, ಪೊಲೀಸ್ ಇನ್ಸ್ಪೆಕ್ಟರ್ ಮೊಬೈಲ್ ಸಂಖ್ಯೆ 9480803131, 94480803148, ಉಪ ಪೋಲಿಸ್ ಅಧೀಕ್ಷಕರ ಕಚೇರಿ ಸಂಖ್ಯೆ 08194-222430, ಜಿಲ್ಲಾ ಪೊಲೀಸ್ ಕಚೇರಿ ಸಂಖ್ಯೆ 08194-222781 ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.
ಚಿತ್ರದುರ್ಗ ತಾಲ್ಲೂಕು ಕೆ.ಬಳ್ಳೆಕಟ್ಟೆ ಸಮೀಪ ಎನ್‌ಹೆಚ್-48 ರಸ್ತೆಯ ಅಂಡರ್ ಬ್ರಿಡ್ಜ್ ಬಳಿ ಕಾತ್ರಳ್ ಕೆರೆಯಲ್ಲಿ ಪುರುಷನ ಶವ ಪತ್ತೆಯಾದ ಕುರಿತು ಜ.14 ರಂದು ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾಮಾಧೇಯ ವ್ಯಕ್ತಿಯ ಶವ ಪ್ಲಾಸ್ಟಿಕ್ ಪಾಟಿನಲ್ಲಿ ಸುತ್ತಿ, ಹಳದಿ ಬಣ್ಣದ ಹಗ್ಗದಿಂದ ಕಟ್ಟಿರುವ ಸ್ಥಿತಿಯಲ್ಲಿ ಕಂಡುಬAದಿದೆ. ವ್ಯಕ್ತಿ ಸುಮಾರು 20 ರಿಂದ 25 ವರ್ಷದವನಾಗಿದ್ದು, ಕೋಲು ಮುಖ, ದೃಡವಾದ ಮೈಕಟ್ಟು, 5.7 ಅಡುಇ ಎತ್ತರ, ಗೋದಿ ಮೈ ಬಣ್ಣ, ತಲೆಯಲ್ಲಿ ಕಪ್ಪು ಕೂದಲು, ಮುಖದಲ್ಲಿ ಗದ್ದದ ಬಳಿ ಗಡ್ಡ ಹಾಗು ತಳ್ಳನೆಯ ಮೀಸೆ, ಬಲಕೈಯಲ್ಲಿ ಸಿ ಅಥವಾ ಜಿ ಎಂಬ ಸಿಂಬಲ್ ಹಾಗೂ ಹಾರ್ಟ್ ಸಿಂಬಲ್, ಓಂ ಅಕ್ಷರದಂತೆ ಕಾಣುವ ಅಚ್ಚೆ, ಎಡಕೈಯಲ್ಲಿ ಸುತ್ತಲೂ ದೊಡ್ಡ ಪಟ್ಟಿ ಅದರ ಪಕ್ಕ ಚಿಕ್ಕ ಪಟ್ಟಿಯೊಂದಿಗೆ ಈಗಲ್ ಪಕ್ಷಿಯ ಚಿಹ್ನೆಯ ಗುರುತಿನ ಅಚ್ಚೆ ಇರುತ್ತದೆ. ಮೃತ ವ್ಯಕ್ತಿಯ ಪೂಮ ಹೆಸರಿನ ಕೆಂಪು ಬಣ್ಣದ ತುಂಬು ತೋಳಿನ ಜರ್ಕಿನ್, ಸಿಮೆಂಟ್ ಬಣ್ಣದ ಟೀ ಶರ್ಟ್, ಕಂದು ಬಣ್ಣದ ಅಂಡರ್ ವೇರ್, ಕಪ್ಪುಬಣ್ಣ ಮಿಶ್ರಿತ ನೈಟ್ ಪ್ಯಾಂಟ್ ಧರಿಸಿರುತ್ತಾನೆ. ಕೊರಳಲ್ಲಿ ಬೆಳ್ಳಿಯಂತೆ ಕಂಡುಬರುವ ಚೈನ್ ಇರುತ್ತದೆ.
ಅನಾಮಧೇಯ ವ್ಯಕ್ತಿಯ ಕುರಿತು ಮಾಹಿತಿ ತಿಳಿದು ಬಂದಲ್ಲಿ ಉಪ ಪೋಲಿಸ್ ಅಧೀಕ್ಷಕರ ಕಚೇರಿ ಸಂಖ್ಯೆ 08194-222430, ಜಿಲ್ಲಾ ಪೊಲೀಸ್ ಕಚೇರಿ ಸಂಖ್ಯೆ 08194-222781 ಹಾಗೂ ಭರಮಸಾಗರ ಪೊಲೀಸ್ ಠಾಣೆ ಸಂಪರ್ಕಿಸುವAತೆ ಪೊಲೀಸ್ ನೀರಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













