ಚಿತ್ರದುರ್ಗ, (ಫೆ.12) : ಆನ್ಲೈನ್ ವಂಚಕರು ವಂಚನೆ ಮಾಡಲು ನೇರವಾಗಿ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ.
ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರುಶುರಾಮ ಅವರ ಫೋಟೋವನ್ನು ಪ್ರೊಫೈಲ್ ಫೋಟೋಗೆ ಹಾಕಿ
DPdurga Chitradurga ಎಂಬ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆಯನ್ನು ತೆರೆದು ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಅವರಿಗೆ ಹಣಕ್ಕಾಗಿ ಬೇಡಿಕೆ ಇಡುತ್ತಿರುವುದು ತಿಳಿದು ಬಂದಿದೆ.
ಜಿಲ್ಲಾ ಪೊಲೀಸ್ ಇಲಾಖೆ ಆ ನಕಲಿ ಖಾತೆಯನ್ನು ಈಗಾಗಲೇ ತೆಗೆದು ಹಾಕಿದೆ.ಆದರೂ ಒಂದು ವೇಳೆ ಯಾರಿಗಾದರೂ DPdurga chitradurga ಎಂಬ ಹೆಸರಿನಿಂದ ರಿಕ್ವೆಸ್ಟ್ ಬಂದರೆ ನಿರ್ಲಕ್ಷಸಲು ಪೋಲಿಸ್ ಇಲಾಖೆ ಮನವಿ ಮಾಡಿದೆ.