Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ತ.ರಾ.ಸು.ರವರ 102 ನೇ ಜಯಂತಿ ಆಚರಣೆ

Facebook
Twitter
Telegram
WhatsApp

ಚಿತ್ರದುರ್ಗ, (ಏ.21): ಶ್ರೇಷ್ಟ ಕಾದಂಬರಿಕಾರಿ ತ.ರಾ.ಸು.ರವರ ಪ್ರತಿಷ್ಠಾನ ಮಾಡಬಹುದೆಂದು ಹಿರಿಯ ಸಾಹಿತಿ ತ.ರಾ.ಸು.ರವರ ಒಡನಾಡಿಯಾಗಿದ್ದ ಶ್ರೀಶೈಲ ಆರಾಧ್ಯ ಸಲಹೆ ನೀಡಿದರು.

ತ.ರಾ.ಸು.ರವರ 102 ನೇ ಜಯಂತಿ ಅಂಗವಾಗಿ ನಗರದ ಶ್ರೀಕೃಷ್ಣರಾಜೇಂದ್ರ ಗ್ರಂಥಾಲಯದ ಆವರಣದಲ್ಲಿರುವ ಅವರ ಪುತ್ಥಳಿಗೆ ಗುರುವಾರ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ತ.ರಾ.ಸು.ರವರ ಜೊತೆಯಲ್ಲಿರುವ ಅದೃಷ್ಟ ನನಗೆ ಸಿಕ್ಕಿತ್ತು. ದುರ್ಗಾಸ್ತಮಾನಾ ಕಾದಂಬರಿಯನ್ನು ತ.ರಾ.ಸು.ರವರು ಕೊನೆಗಾದಲ್ಲಿ ಬರೆಯುವಾಗ ಸಂಶೋಧನೆಗೆ ನೆರವಾಗಿದ್ದೆ. ತ.ರಾ.ಸು.ರವರ ಹಂಸಗೀತೆ ಕಾದಂಬರಿಯನ್ನು ಓದಿದ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ರವರು ಒಮ್ಮೆ ತ.ರಾ.ಸು.ರವರನ್ನು ನೋಡಬೇಕೆಂದು ಅಪೇಕ್ಷೆ ಪಟ್ಟು ಹೇಳಿ ಕಳಿಸಿದ್ದರಂತೆ.

ಆಗ ಅರಮನೆಯ ಅಪ್ಪಣೆಯಂತೆ ಅವರು ಹೇಳಿದ ದಿರಿಸನ್ನು ಧರಿಸದೆ ಜುಬ್ಬದಲ್ಲಿಯೇ ನಾನು ಸರಳವಾಗಿಯೇ ಬರುತ್ತೇನೆಂದು ಹಠ ಹಿಡಿದು ಕೊನೆಗೂ ಮೈಸೂರು ಮಹಾರಾಜರನ್ನು ಭೇಟಿಯಾಗಲಿಲ್ಲ ಎನ್ನುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಹಂಸಗೀತೆಯಲ್ಲಿ ವೆಂಕಟಸುಬ್ಬಯ್ಯನಿಗೆ ಭೈರವಿ ರಾಗ ಎಷ್ಟು ಸಿದ್ದಿಸಿತ್ತು ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಬರವಣಿಗೆಯಲ್ಲಿ ಅಭಿಮಾನವನ್ನು ಎಲ್ಲಿಯೂ ಬಿಟ್ಟುಕೊಡದ ತ.ರಾ.ಸು.ರವರು ಯಾರೊಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಜೀವಿತದ ಕೊನೆಯವರೆಗೂ ಛಲದಿಂದಲೇ ಬದುಕಿದವರು. ಹಾಗಾಗಿ ಅಭಿಮಾನಕ್ಕೆ ಮತ್ತೊಂದು ಹೆಸರೆ ತ.ರಾ.ಸು. ಪರಾಕ್ರಮ, ಶೌರ್ಯಕ್ಕೆ ಹೆಸರುವಾಸಿಯಾಗಿರುವ ಐತಿಹಾಸಿಕ ಚಿತ್ರದುರ್ಗದ ಇತಿಹಾಸವನ್ನು ತ.ರಾ.ಸು.ರವರು ತಮ್ಮ ಬರವಣಿಗೆಯ ಮೂಲಕ ನಾಡಿನುದ್ದಕ್ಕೂ ಪರಿಚಯಿಸಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಾಗ ತ.ರಾ.ಸು.ರವರು ಬದುಕಿರಲಿಲ್ಲ. ಕೊನೆಯ ಕಾದಂಬರಿಯನ್ನು ಬರೆದು ಬದುಕು ಮುಗಿಸಿದ ತ.ರಾ.ಸು.ರವರಿಗೆ ನಿಜವಾಗಿಯೂ ಗೌರವ ಸಲ್ಲಬೇಕಾದರೆ ಪ್ರತಿಷ್ಟಾನ ಮಾಡಬಹುದು ಎಂದು ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಕೆ.ನಾಗರಾಜ್ ಮಾತನಾಡಿ ತ.ರಾ.ಸು.ರವರ ದುರ್ಗಾಸ್ತಮಾನವನ್ನು ಎಷ್ಟು ಓದಿದರು ಸಾಲದು. ಅನೇಕ ಮಹನೀಯರ ಜಯಂತಿಗಳನ್ನು ಆಚರಣೆ ಮಾಡುವ ಸರ್ಕಾರ ಚಿತ್ರದುರ್ಗದ ಇತಿಹಾಸವನ್ನು ತಮ್ಮ ಮೊನಚಾದ ಬರವಣಿಗೆಯ ಮೂಲಕ ನಾಡಿನೆಲ್ಲೆಡೆ ಪಸರಿಸಿದಂತ ತ.ರಾ.ಸು.ರವರ ಜಯಂತಿಯನ್ನು ಆಚರಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿರುವುದಲ್ಲದೆ ಇತಿಹಾಸವನ್ನು ಎಲ್ಲರೂ ತಿಳಿದುಕೊಂಡಂತಾಗುತ್ತದೆ ಎಂದರು.

ಡಾ.ಮಂಜುನಾಥರೆಡ್ಡಿ ಮಾತನಾಡುತ್ತ ತ.ರಾ.ಸು.ರವರ ಐತಿಹಾಸಿಕ ಕಾದಂಬರಿ ದುರ್ಗಾಸ್ತಮಾನವನ್ನು ಒಮ್ಮೆಯಾದರೂ ಎಲ್ಲರೂ ಓದಲೇಬೇಕು. ಐತಿಹಾಸಿಕ ಕಾದಂಬರಿಗಳ ಜೊತೆ ಸಾಮಾಜಿಕ, ಆಧ್ಯಾತ್ಮಿಕವಾಗಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ತ.ರಾ.ಸು.ರವರು ಇದೇ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಸಮೀಪವಿದ್ದ ಜೈಲಿನಲ್ಲಿ ಸೆರೆವಾಸವನ್ನು ಅನುಭವಿಸಿದ್ದುಂಟು ಎಂದು ನೆನಪಿಸಿಕೊಂಡರು.

ಶ್ರೀಕೃಷ್ಣರಾಜೇಂದ್ರ ಜಿಲ್ಲಾ ಗ್ರಂಥಾಲಯದ ಗ್ರಂಥಾಲಯಾಧಿಕಾರಿ ತಿಪ್ಪೇಸ್ವಾಮಿ, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲದ ಹಿರಿಯ ಉಪ ನಿರ್ದೇಶಕರಾದ ಸಿ.ಜಿ.ಶ್ರೀನಿವಾಸ್, ಉಪನ್ಯಾಸಕಿ ಚಂದ್ರಕಲ, ಶ್ರೀಮತಿ ಉಮ ಆರಾಧ್ಯ ಹಾಗೂ ನೂರಾರು ವಿದ್ಯಾರ್ಥಿಗಳು, ತ.ರಾ.ಸು.ರವರ ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!