ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಏಣಿಕೆಯಲ್ಲಿ ಬಿಜೆಪಿಗೆ ಜಯ ಸಿಕ್ಕಿದೆ. ಈ ಸಂಬಂಧ ಸಿದ್ದರಾಮಯ್ಯ ಅವರು ದೊಡ್ಡ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಇದು ಕೇವಲ ಮತಗಳ ಕಳ್ಳತನ ಮಾಡಿಲ್ಲ, ಇದು ಮತಗಳ ಮೇಲೆ ನಡೆದ ವ್ಯವಸ್ಥಿತ ಡಕಾಯಿತಿ ಎಂದು ಕಿಡಿಕಾರಿದ್ದಾರೆ. ರಾಜೇಗೌಡ ಅವರಿಗೆ ಇದ್ದ 250 ಮತಗಳನ್ನು ವ್ಯವಸ್ಥಿತವಾಗಿ ತಿದ್ಧಲಾಗಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಇದು ವೋಟ್ ಚೋರಿ ಅಲ್ಲ ವೋಟ್ ಡಕಾಯಿತಿ. ಚುನಾವಣಾ ಏಜೆಂಟ್ ಗಳು ಮತ್ತು ರಿಟರ್ನಿಂಗ್ ಆಫೀಸರ್ ಗಳು ಘೋಷಣೆ .ಅಡಿದ್ದ ಫಲಿತಾಂಶವನ್ನು ಈಗ ಬದಲಾಯಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹವಾಗಿದೆ. ಚುನಾವಣಾ ಅಬ್ಸರ್ವರ್ ಗಳು ಕ್ಲಿಯರೆನ್ಸ್ ಸಿಗುವ ಮೊದಲೇ, ಫಲಿತಾಂಶ ಆತುರಾತುರವಾಗಿ ಘೋಷಿಸಿರುವುದು ಸರಿಯಲ್ಲ. ಚುನಾವಣಾ ಆಯೋಗವೂ ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಬೇಕು. ಆದರೆ ಇಲ್ಲಿ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಕಾಂಗ್ರೆಸ್ ಪಕ್ಷವೂ ಇದನ್ನು ನ್ಯಾಯಾಲಯದಲ್ಲಿ ಚಾಲೆಂಜ್ ಮಾಡಲಿದೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.

ಶೃಂಗೇರಿ ಚುನಾವಣಾ ಫಲಿತಾಂಶದ ನಂತರ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಅಂಚೆ ಮತಗಳ ಮರು ಎಣಿಕೆಯಲ್ಲಿ ಮೋಸ ನಡೆದಿದೆ, ಮರು ಎಣಿಕೆ ಮಾಡಬೇಕೆಂದು ಕೋರಿದ್ದರು. ಈ ಅರ್ಜಿ ಪುರಸ್ಕರಿಸಿದ ಕೋರ್ಟ್, ಅಂಚೆ ಮತಗಳ ಮರು ಎಣಿಕೆಗೆ ಸೂಚನೆ ನೀಡಿತ್ತು. ರಾಜೇಗೌಡ ಅವರಿಗೆ 569 ಮತಗಳು ಲಭಿಸಿದ್ದವು. ಈ ಸಂಬಂಧ ಮತಗಳು ಅಮಾನ್ಯವಾವಿದ್ದು ಹೇಗೆ ಎಂಬ ಪ್ರಶ್ನೆಯನ್ನ ಕೇಳಲಾಗಿದೆ.


















