ಆಚಾರ್ಯ ಚಾಣಕ್ಯರು ತಮ್ಮ ‘ಚಾಣಕ್ಯ ನೀತಿ’ ಗ್ರಂಥದಲ್ಲಿ ಮನುಷ್ಯನ ಯಶಸ್ಸು, ವೈಫಲ್ಯ ಹಾಗೂ ನೆಮ್ಮದಿಯ ಜೀವನಕ್ಕೆ ಬೇಕಾದ ಅನೇಕ ಅಮೂಲ್ಯ ವಿಚಾರಗಳನ್ನು ತಿಳಿಸಿದ್ದಾರೆ. ಶತಮಾನಗಳ ಹಿಂದೆಯೇ ಅವರು ಹೇಳಿದ ಮಾತುಗಳು ಇಂದಿನ ಆಧುನಿಕ ಜೀವನಕ್ಕೂ ಅಚ್ಚುಕಟ್ಟಾಗಿ ಅನ್ವಯಿಸುತ್ತವೆ. ಅದರಲ್ಲೂ ವಿಶೇಷವಾಗಿ, ಇಂದಿನ ದಿನಗಳಲ್ಲಿ ಮನುಷ್ಯನ ನೆಮ್ಮದಿಯನ್ನು ಕಡಲುವ “ಅತಿಯಾದ ನಿರೀಕ್ಷೆಗಳ ಬಗ್ಗೆ ಚಾಣಕ್ಯರು ಮಹತ್ವದ ಎಚ್ಚರಿಕೆಯನ್ನು ನೀಡಿದ್ದಾರೆ.
ಅತಿಯಾದ ಆಸೆ, ನಿರಾಸೆಗೆ ದಾರಿ:
ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ತನ್ನದೇ ಆದ ಇಷ್ಟ-ಕಷ್ಟಗಳು, ಆಸೆಗಳು ಇರುವುದು ಸಹಜ. ಆದರೆ, ಆ ಆಸೆಗಳು ಅಥವಾ ಇತರರ ಮೇಲಿನ ನಿರೀಕ್ಷೆಗಳು ಮಿತಿ ಮೀರಿದಾಗ ಕಷ್ಟಗಳು ಕಾಯಂ ಎನ್ನುತ್ತಾರೆ ಚಾಣಕ್ಯರು. ನಾವು ಯಾರ ಮೇಲಾದರೂ ಅತಿಯಾದ ನಿರೀಕ್ಷೆ ಇಟ್ಟುಕೊಂಡಾಗ, ಅದು ಹುಸಿಯಾದರೆ ಕೊನೆಗೆ ನಮಗೆ ಸಿಗುವುದು ಕೇವಲ ನಿರಾಸೆ ಮತ್ತು ತೀವ್ರ ನಿವೇದನೆ ಮಾತ್ರ. ಆದ್ದರಿಂದ ಯಾವುದರಲ್ಲೂ ಅತಿಯಾಗಿ ಆಶಿಸಬಾರದು ಎಂಬುದು ಚಾಣಕ್ಯರ ಕಿವಿಮಾತು.
ಆಪ್ತರಿಂದಲೇ ನೋವು:
ಸಾಮಾನ್ಯವಾಗಿ ನಮಗೆ ತುಂಬಾ ಹತ್ತಿರವಾದವರಿಂದ ನಾವು ಪ್ರೀತಿ, ಗೌರವ ಅಥವಾ ಸಹಾಯವನ್ನು ಹೆಚ್ಚಾಗಿ ನಿರೀಕ್ಷಿಸುತ್ತೇವೆ. ಆದರೆ ಪ್ರತಿಯೊಬ್ಬರ ಪರಿಸ್ಥಿತಿಯೂ ಒಂದೇ ತರ ಇರುವುದಿಲ್ಲ. ನಾವು ಅಂದುಕೊಂಡಂತೆ ಆಪ್ತರಿಂದ ನಮಗೆ ಪ್ರೀತಿ ಅಥವಾ ಸ್ಪಂದನೆ ಸಿಗದೇ ಹೋದಾಗ ಮನಸ್ಸಿಗೆ ಭಾರಿ ನೋವಾಗುತ್ತದೆ. ಇಂತಹ ಸಮಯದಲ್ಲಿ ಮನುಷ್ಯ ತನ್ನ ಆಲೋಚನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಅತ್ಯಂತ ಮುಖ್ಯ ಎಂದು ನೀತಿಶಾಸ್ತ್ರ ಹೇಳುತ್ತದೆ.
ನೆಮ್ಮದಿಯ ಜೀವನಕ್ಕೆ ಚಾಣಕ್ಯರ ಸೂತ್ರ:
ನಾನು ಅಂದುಕೊಂಡಂತೆ ಏಕೆ ನಡೆಯುತ್ತಿಲ್ಲ?”, “ಅವರು ನನ್ನನ್ನು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ?” ಎಂಬ ನಕಾರಾತ್ಮಕ ಆಲೋಚನೆಗಳನ್ನು ಮೊದಲು ಬಿಟ್ಟುಬಿಡಬೇಕು. ಪರಿಸ್ಥಿತಿಗಳನ್ನು ನಿಯಂತ್ರಿಸಲು ಹೋಗಿ ಕರಗುವ ಬದಲು, ನಿಮ್ಮ ಮನಸ್ಸಿಗೆ ತಕ್ಕಂತೆ ಪ್ರಶಾಂತವಾಗಿರಲು ಪ್ರಯತ್ನಿಸಿ. ಇತರರ ನಡವಳಿಕೆಗಿಂತ ನಿಮ್ಮ ಆಂತರಿಕ ನೆಮ್ಮದಿಗೆ ಆದ್ಯತೆ ನೀಡುವುದೇ ಸುಖೀ ಜೀವನದ ರಹಸ್ಯ ಎಂದು ಚಾಣಕ್ಯರು ವಿವರಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















