ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಜೂನ್. 15 : ನಗರದ ಜಾಫರ್ ಷರೀಫ್ ಲೇ ಔಟ್ ನಲ್ಲಿ ಶನಿವಾರ ತಡರಾತ್ರಿ ವಕೀಲರ ಮನೆಯೊಂದರಲ್ಲಿ ಕಳ್ಳತನ ನಡೆದಿದೆ. ಅದು ಎರಡು ಅಂತಸ್ತಿನ ಮನೆ, ಮನೆಯ ಯಜಮಾನರು ವಕೀಲರಾಗಿದ್ದು ಅವರ ಮಕ್ಕಳ ಜೊತೆಗೆ ಪರೀಕ್ಷೆಗೆಂದು ಮೈಸೂರಿಗೆ ಹೋಗಿದ್ದರು.
ಅವರ ತಾಯಿ ಮಾತ್ರ ಮನೆಯ ಮೇಲೆ ಮಹಡಿಯಲ್ಲಿ ವಾಸವಾಗಿದ್ದರು. ತಡರಾತ್ರಿ ಸುಮಾರು ಆರು ಜನರ ಕಳ್ಳರ ಗುಂಪೊಂದು ಮನೆಯ ಬಾಗಿಲಿನ ಬೀಗ ಮುರಿದು ಒಳ ನುಗ್ಗಿ ಮನೆಯಲ್ಲಿದ್ದ ಬೀರು ಇತರೆ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಹೋಗಿದ್ದಾರೆ ಕಳ್ಳತಕ್ಕೆ ವಿಫಲ ಯತ್ನ ನಡೆದಿತ್ತು.
ಅಕ್ಕ ಪಕ್ಕದ ಮನೆಯವರು ಬೆಳಿಗ್ಗೆ ವಕೀಲರ ಮನೆಯ ಬಾಗಿಲು ತೆರೆದಿರುವುದನ್ನ ಕಂಡು ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಟಿ.ಬಿ ರಾಜಣ್ಣ, ಪೊಲೀಸ್ ಇನ್ಸ್ ಪೆಕ್ಟರ್ ಕೆ. ಕುಮಾರ್ ಸೇರಿದಂತೆ ಪಿಎಸ್ಐ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಮುಂಬಾಗಿಲು ಇಂಟರ್ ಲಾಕ್ ಮುರಿದು ಒಳ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಕೇವಲ 700 ರೂಪಾಯಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಇದರಿಂದ ಕಳ್ಳರಿಗೆ ಬಾರೀ ನಿರಾಸೆಯಾಗಿದೆ ಎಂದು ಸ್ಥಳೀಯರು ಮಾತಾಡಿಕೊಳ್ಳುತ್ತಿದ್ದರು.
ಸಿಸಿ ಕ್ಯಾಮೆರಾ ನೋಡಲಾಗಿ ಆರು ಜನ ಇರುವ ತಂಡದ ಗುಂಪು ಕೈಯಲ್ಲಿ ಕೆಲವು ಆಯುಧ ಗಳನ್ನು ಹಿಡಿದು ಮನೆಯ ಒಳಗೆ ಹೋಗುವ ದೃಶ್ಯ ಮಾತ್ರ ಸೆರೆಯಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











