Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ | ವೇದ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

---Advertisement---

 

ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 26 : ತಾಲ್ಲೂಕಿನ ಸಾಣಿಕೆರೆ ವೇದ ಶಾಲೆಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ದಿನಾಂಕ 25-10- 2025 ರಂದು ಚಿತ್ರದುರ್ಗದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಸಾಣಿಕರೆ ವೇದ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಕ್ರೀಡೆಗಳಲ್ಲಿ ಪ್ರಥಮ, ದ್ವಿತೀಯ, ಹಾಗೂ ತೃತೀಯ ಸ್ಥಾನಗಳನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಿ.ಟಿ.ರವೀಂದ್ರ ಸರ್, ಕಾರ್ಯದರ್ಶಿಗಳಾದ ಡಿ.ಆರ್ ಕಿರಣ್ ಸರ್, ವಿಜಯ್ ಸರ್ ಹಾಗೂ ಪ್ರಾಂಶುಪಾಲರಾದ ಪುಷುರಾಣಿ ಮೇಡಂ,ಸಂದೀಪ್ ಸರ್ ಹಾಗೂ ದೈಹಿಕ ಶಿಕ್ಷಕರಾದ ಸತೀಶ್ ಸರ್ , ರವಿ ಕುಮಾರ್ ಸರ್, ವಿದ್ಯಾರ್ಥಿಗಳಿಗೆ ಸಂಸ್ಥೆಯ ಪರವಾಗಿ ಅಭಿನಂದನೆಗಳನ್ನ ಸಲ್ಲಿಸಿದರು ಹಾಗೂ ರಾಜ್ಯಮಟ್ಟಕ್ಕೆ ಶುಭ ಆರೈಸಿದರು.

ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು
ಮಣಿಕಂಠ- ಗುಂಡು ಎಸೆತ ಪ್ರಥಮ ಸ್ಥಾನ
ಶ್ರೇಯಸ್- 400ಮೀಟರ್ ಅಡೆತಡೆ ಓಟ ಪ್ರಥಮ ಸ್ಥಾನ
ರಾಜೇಶ್- 100 ಮೀಟರ್ ಓಟ ದ್ವಿತೀಯ ಸ್ಥಾನ
ದೀಪಕ್ ಗೌಡ- 110 ಮೀಟರ್ ಅಡೆತಡೆ ಓಟ ದ್ವಿತೀಯ ಸ್ಥಾನ
ಶ್ರೇಯಸ್- ಉದ್ದ ಜಿಗಿತ, ದ್ವಿತೀಯ ಸ್ಥಾನ
ರಾಜೇಶ್, ಕೈಲಾಶ್, ಸಿದ್ದು ಪ್ರಸಾದ್, ಸಿದ್ಧಾರ್ಥ- 4X100 ಮೀಟರ್ ರಿಲೆ ಓಟದಲ್ಲಿ ದ್ವಿತೀಯ ಸ್ಥಾನ
ದೀಪಕ್ ಗೌಡ, ಚಿರಂಜೀವಿ, ಅರುಣ್ ಕುಮಾರ್, ಶ್ರೇಯಸ್ – 4X400 ಮೀಟರ್ ರಿಲೆ ಓಟದಲ್ಲಿ ದ್ವಿತೀಯ ಸ್ಥಾನ
ಬಿಂದು ಶ್ರೀ – ಉದ್ದಜಿಗಿತ ತೃತೀಯ ಸ್ಥಾನ
ಕೈಲಾಶ್ – 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ ವನ್ನು ಪಡೆದು ಶಾಲೆಗೆ ಕೀರ್ತಿಯನ್ನ ತಂದಿರುತ್ತಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...