ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 22 : ತಾಲೂಕಿನ ಸಾಣಿಕೆರೆ ಗ್ರಾಮದಲ್ಲಿ ಒಂದೇ ದಿನ ರಾತ್ರಿ ಮೂರು ಮನೆಗಳಲ್ಲಿ ಕಳ್ಳತನವಾಗಿದ್ದು ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಗ್ರಾಮದ ಪುಟ್ಟಮ್ಮ, ತಿಪ್ಪಮ್ಮ ಮತ್ತು ಶಿವಕುಮಾರ್ ಎಂಬುವವರ ಮನೆಯಲ್ಲಿ ಬುಧವಾರ ರಾತ್ರಿ ಕಳ್ಳತನಾವಾಗಿದೆ.
ಗ್ರಾಮದ ಪುಟ್ಟಮ್ಮ ಇವರ ಮನೆಯಲ್ಲಿದ್ದ 3 ತೊಲ ಬಂಗಾರ, 1 ಲಕ್ಷ ರೂಪಾಯಿ ನಗದು ಹಾಗೂ ತಿಪ್ಪಮ್ಮ ಇವರ ಮನೆಯಲ್ಲಿದ್ದ 3 ತೊಲ ಬಂಗಾರ, 5000 ನಗದು ಮತ್ತು ಶಿವಕುಮಾರ್ ಅವರ ಮನೆಯಲ್ಲಿ 25,000 ನಗದು ಹಣ, 4 ರೇಷ್ಮೆ ಸೀರೆಗಳನ್ನು ಕಳ್ಳತನ ಮಾಡಲಾಗಿದೆ.
ಪುಟ್ಟಮ್ಮ ಚಿತ್ರದುರ್ಗ ಆಸ್ಪತ್ರೆಗೆ ಹೋಗಿದ್ದರು.
ತಿಪ್ಪಮ್ಮ ಎನ್ನುವವರು ಮಗಳ ಮನೆಗೆ ಹೋಗಿದ್ದರು.
ಶಿಕ್ಷಕ ಶಿವಕುಮಾರ್ ಕರ್ತವ್ಯ ನಿಮಿತ್ತ ಹೋಗಿದ್ದಾಗ ಈ ಘಟನೆ ನಡೆದಿದೆ.
ಈ ಮೂರು ಮನೆಗಳು ಒಂದೇ ಕುಟುಂಬಕ್ಕೆ ಸೇರಿದ್ದಾವಾಗಿವೆ. ಬುಧವಾರ ರಾತ್ರಿ ಕಳ್ಳತನವಾಗಿದ್ದು ಇಂದು (ಗುರುವಾರ) ಬೆಳಕಿಗೆ ಬಂದಿದೆ.
ಘಟನ ಸ್ಥಳಕ್ಕೆ ಎಎಸ್ ಐ ತಿಪ್ಪೇಸ್ವಾಮಿ, ಪೋಲಿಸ್ ಪೇದೆಗಳಾದ ಕುಮಾರ್ ಹಾಗೂ ತಳವಾರ ಮತ್ತು ಡಾಗ್ ಸ್ಕ್ವಾಡ್ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತಂತೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












