ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಹಿರಿಯೂರು , ಮೇ. 15 : ಕೌಟುಂಬಿಕ ಕಲಹದಿಂದ ಮನನೊಂದ ಬೆಸ್ಕಾ ನೌಕರನರೊಬ್ಬ ವಾಣಿವಿಲಾಸ ಸಾಗರ ಜಲಾಶದ ನೀರಿಗೆ ಹಾರಿ ಆತ್ಮಹತ್ಯ ಮಾಡಿಕೊಂಡಿರುವ ಘಟನೆ ನಡೆದಿದೆ.
ಬಿಜಾಪುರ ಜಿಲ್ಲೆಯ ಮಹಾಂತೇಶ್ ಎನ್ನುವ ವ್ಯಕ್ತಿ ಹೊಸದುರ್ಗ ತಾಲೂಕಿನ ದೇವಿಗೆರೆ ಬೆಸ್ಕಾಂ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕೌಟುಂಬಿಕ ಕಲಹದಿಂದ ಮನನೊಂದು ವಾಣಿವಿಲಾಸ ಸಾಗರದ ಜಲಾಶಯ ನೀರಿಗೆ ಹಾರಿ ಪ್ರಾಣವನ್ನ ಕಳೆದುಕೊಂಡಿದ್ದಾನೆ.. ಘಟನಾ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪಿಎಸ್ಐ ಮಹೇಶ್ ಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಪಿಎಸ್ಐ ಮಹೇಶ್ ಗೌಡ ಮಾಹಿತಿ ನೀಡಿದ್ದಾರೆ.











