ಡಿಸೆಂಬರ್ 10 ರಂದು ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಸಮಾರಂಭ : ಅಧ್ಯಕ್ಷ ಎಂ.ನಿಶಾನಿ ಜಯಣ್ಣ

2 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಡಿ.08): ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಸಮಾರಂಭ ಡಿ.10 ರಂದು ಬೆಳಿಗ್ಗೆ 10-30 ಕ್ಕೆ ಮಾಳಪ್ಪನಹಟ್ಟಿ ರಸ್ತೆಯಲ್ಲಿರುವ ತಿರುಮಲ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸೊಸೈಟಿಯ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ತಿಳಿಸಿದರು.

ಹೊಟೇಲ್ ಐಶ್ವರ್ಯದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸಮಾರಂಭ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸೊಸೈಟಿಯ ಸಂಸ್ಥಾಪಕರ ಫೋಟೋ ಅನಾವರಣಗೊಳಿಸಲಿದ್ದಾರೆ. ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಟ್ಟಡ ಫಲಕ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ವಿಧಾನಪರಿಷತ್ ಸದಸ್ಯರುಗಳಾದ ಎನ್.ರವಿಕುಮಾರ್, ಕೆ.ಎಸ್.ನವೀನ್, ಮಾಜಿ ಸಚಿವ ಹಾಗೂ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಡಿ.ಸುಧಾಕರ್, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ವಿಶೇಷ ಆಹ್ವಾನಿತರುಗಳಾಗಿ ಸಹಕಾರ ಸಂಘಗಳ ನಿಬಂಧಕರಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾಧಿಕಾರಿ ದಿವ್ಯಪ್ರಭು ಜೆ.ಆರ್.ಜೆ. ದಿ.ಮರ್ಚೆಂಟ್ಸ್ ಸೌಹಾರ್ಧ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಆರಳಿ ಸೂರ್ಯಕಾಂತ್, ಡಿ.ಸಿ.ಸಿ.ಬ್ಯಾಂಕ್ ವ್ಯಸ್ಥಾಪಕ ನಿರ್ದೇಶಕ ಇಲ್ಯಾಸ್‍ಉಲ್ಲಾ ಷರೀಫ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಮೂರ್ತಿ, ಸಹಾಯಕ ನಿಬಂಧಕ ಟಿ.ಮಧು ಶ್ರೀನಿವಾಸ್ ಇವರುಗಳು ಆಗಮಿಸಲಿದ್ದಾರೆಂದು ಹೇಳಿದರು.

2021-22 ನೇ ಸಾಲಿಗೆ ಸಂಘವು 2562 ಸದಸ್ಯರುಗಳನ್ನು ಹೊಂದಿದ್ದು, ಷೇರು ಬಂಡವಾಳ 38.97 ಲಕ್ಷ ರೂ. ಠೇವಣಿ ರೂ. 362.62 ಲಕ್ಷ, ಸಾಲ ಮತ್ತು ಮುಂಗಡ ರೂ.148.71 ಲಕ್ಷ ರೂ. ಹಾಗಾಗಿ ಶತಮಾನೋತ್ಸವ ಆಚರಿಸುತ್ತಿರುವ ಪ್ರಯುಕ್ತ ಸದಸ್ಯರುಗಳಿಗೆ ನಾಲ್ಕು ತಿಂಗಳ ಅವಧಿಗೆ ಮಾತ್ರ ಆರು ವರ್ಷಗಳ ಅವಧಿಗೆ ದ್ವಿಗುಣ ಡಿಪಾಜಿಟ್ ಸ್ಕೀಮ್ ಜಾರಿಗೊಳಿಸಲಾಗಿದ್ದು, ಸದುಪಯೋಗಪಡೆದುಕೊಳ್ಳುವಂತೆ ಎಂ.ನಿಶಾನಿ ಜಯಣ್ಣ ವಿನಂತಿಸಿದರು.
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಸಿ.ಹೆಚ್.ಸೂರ್ಯಪ್ರಕಾಶ್, ನಿರ್ದೇಶಕರುಗಳಾದ ಡಾ.ರಹಮತ್‍ವುಲ್ಲಾ, ಬಿ.ವಿ.ಶ್ರೀನಿವಾಸ್‍ಮೂರ್ತಿ, ನಾಗರಾಜ್‍ಬೇದ್ರೆ, ಸೈಯದ್ ನೂರುಲ್ಲಾ, ಕೆ.ಚಿಕ್ಕಣ್ಣ, ಎಸ್.ವಿ.ಪ್ರಸನ್ನ, ಚಂದ್ರಪ್ಪ, ಕೆ.ಪ್ರಕಾಶ್, ಶ್ರೀಮತಿ ಎ.ಚಂಪಕ, ಶ್ರೀಮತಿ ಎನ್.ಎಂ.ಪುಷ್ಪವಲ್ಲಿ, ವ್ಯವಸ್ಥಾಪಕ ಮಹಮದ್ ನಯೀಮ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *