ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿಗಳು ಅಥವಾ ಸುಳ್ಳು ವಿಚಾರಗಳೇ ಬಹಳ ಬೇಗ ಜನರಿಗೆ ಕನೆಕ್ಟ್ ಆಗಿ ಬಿಡುತ್ತವೆ. ಜೊತೆಗೆ ಆತಂಕವನ್ನು ಸೃಷ್ಟಿ ಮಾಡುತ್ತವೆ. ನಮ್ಮ ಹೆಮ್ಮೆಯ ನಂದಿನಿ ಉತ್ಪನ್ನಗಳ ಬಗ್ಗೆಯೂ ಅಪಪ್ರಚಾರ ಶುರುವಾಗಿದೆ. ನಂದಿನಿ ಉತ್ಪನ್ನಗಳನ್ನ ತಿಂದರೆ ಕ್ಯಾನ್ಸರ್ ಬರುತ್ತೆ ಎನ್ನಲಾಗ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವೈರಲ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ನಂದಿನಿ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ನಂದಿನಿ ಉತ್ಪನ್ನಗಳನ್ನು ಮಾಡುವಾಗ ಯಾವುದೇ ರೀತಿಯ ಕಲಬೆರಕೆ ಮಾಡುವುದಿಲ್ಲ. ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುತ್ತಾರೆ. ಈ ಬಗ್ಗೆ ಒಕಗಕೂಟ್ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ಮಾಡಿ, ತೀರ್ಮಾನ ಮಾಡುತ್ತೇವೆ. ಖಾಸಗಿಯವರು, ಬೇರೆಯವರು ಮಾಡಿಸುತ್ತಿರಬಹುದು. ನಾವೂ ಖಾಸಗಿಯವರ ಜೊತೆಗೆ ಸ್ಪರ್ಧೆ ಮಾಡಬೇಕಾದಾಗ ಅಪಪ್ರಚಾರ ಮಾಡುವು್ಉ ಸಹಜ. ನಂದಿನಿ ಯಾವತ್ತೂ ಗಿಣಮಟ್ಟದ ಜೊತೆಗೆ ರಾಜಿಯಾಗುವುದಿಲ್ಲ. ನಂದಿನಿಗೆ ಎಷ್ಟೇ ನಷ್ಟವಾದರೂ ಎಂದಿಗೂ ಗ್ರಾಹಕರಿಗೆ ಜಾಗೂ ರೈತರಿಹೆ ಅನ್ಯಾಯ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಗುಣಮಟ್ಟದ ಉತ್ಪನ್ನಗಳನ್ನೇ ಮುಂದೆಯೂ ನೀಡಲಿದೆ ಎಂದಿದ್ದಾರೆ.
ರಾಜ್ಯದ ನಂದಿನಿ ಉತ್ಪನ್ನಗಳಿಗೆ ಹೊರಗಡೆಯಿಂದಾನೂ ತುಂಬಾನೇ ಬೇಡಿಕೆ ಇದೆ. ತಿರಪತಿಯಲ್ಲಿ ಬೇರೆ ತುಪ್ಪ ಬಳಸಿ ವಿವಾದಕ್ಕೀಡಾದ ಬಳಿಕ ನಂದಿನಿ ತುಪ್ಪಕ್ಕೆ ಬೇಡಿಕೆ ಇಡಲಾಗಿದೆ. ಸದ್ಯ ನಂದಿನಿ ಉತ್ಪನ್ನಗಳು ಎಲ್ಲೆಲ್ಲೂ ಬಳಕೆಯಾಗುತ್ತಿವೆ. ಇದರ ನಡುವೆ ಈ ರೀತಿಯಾದಂತ ವಿಚಾರ ಬಳಕೆದಾರರಿಗೂ ಆತಂಕ ತಂದೊಡ್ಡಿತ್ತು. ಈ ಬಗ್ಹೆ ಡಿಕೆ ಸುರೇಶ್ ಸ್ಪಷ್ಟನೆ ನೀಡಿ, ಜನರ ಆತಂಕವನ್ನ ದೂರ ಮಾಡುವ ಕೆಲಸ ಮಾಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











