Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಸವ ಮಂಟಪ ಕೃತಿ ಬಿಡುಗಡೆಗೆ ತಡೆ ನೀಡಿ : ಮಾತೆ ಗಂಗಾದೇವಿ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ನ. 21 :  ಬಸವ ಮಂಟಪ’ ಪುಸ್ತಕವನ್ನು ಬಿಡುಗಡೆ ಮಾಡದಂತೆ ತಡೆಯಬೇಕು, ಸರ್ಕಾರ ಮುಟ್ಟುಗೋಲು ಕ್ರಮವನ್ನು ಮುಂದುವರಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಬೇಕು ಬಿಡುಗಡೆ ಮಾಡಿದಲ್ಲಿ ಎಲ್ಲ ಬಸವಪರ ಸಂಘಟನೆಗಳು ಒಗ್ಗಟ್ಟಾಗಿ ಬೀದಿಗಿಳಿದು ತೀವ್ರ ಹೋರಾಟ ನಡೆಸಲಾಗುವುದೆಂದು ಕೊಡಲ ಸಂಗಮ ಬಸವಧರ್ಮ ಪೀಠದ ಅಧ್ಯಕ್ಷರಾದ ಮಾತೆ ಗಂಗಾದೇವಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ನಗರದ ಬಸವ ಮಂಟಪದಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾತಾಜಿ ಯವರು, ಧರ್ಮಗುರು ಬಸವಣ್ಣನವರ ಬಗ್ಗೆ ರವಿ ಹಂಜಿ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರ ಲೇಖನವನ್ನು ಗಮನಿಸಿದಾಗ ಬಸವ ಭಕ್ತರಿಗೆ ತೀವ್ರ ನೋವುಂಟಾಗಿದೆ ಬಸವಣ್ಣನವರು ಹಿಂಸೆಯನ್ನು ವಿರೋಧಿಸಿದವರು ಹಾಗೂ ‘ಕೊಲ್ಲೆನೆಯ ಮೆಲ್ಲೆನೆಯ’ ಮತ್ತು ‘ಅಂಗ ದೀಕ್ಷೆ-ಜೀವ ದೀಕ್ಷೆ’ ಕುರಿತ ವಚನಗಳ ಮೂಲಕ ವಿನೂತನ, ಸ್ವತಂತ್ರ ಮತ್ತು ಪರಿಪೂರ್ಣ ಧರ್ಮವನ್ನು ನೀಡಿದ ಮಹಾಗುರುಗಳಾಗಿದ್ದು, ಕೋಟ್ಯಂತರ ಜನರು ಅವರನ್ನು ಅನುಸರಿಸುತ್ತಾರೆ ಹೀಗಿರುವಾಗ ಅವಾಚ್ಯ ಶಬ್ದಗಳನ್ನು ಬಳಸಿ ಅವಹೇಳನ ಕಾರಿ ಕಾರ್ಯ ಮಾಡಿರುವುದನ್ನು ಬಸವ ಭಕ್ತರು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯಗಳೇನೇ ಇದ್ದರೂ, ಈ ವಿಷಯದಲ್ಲಿ ಎಲ್ಲರೂ ಸೇರಿ ಹೋರಾಟ ಮಾಡ ಬೇಕಾಗುತ್ತದೆ. ರಾಷ್ಟ್ರೀಯ ಬಸವ ದಳ ಮತ್ತು ಲಿಂಗಾಯತ ಮಹಾಸಭಾ ಸೇರಿದಂತೆ ಎಲ್ಲ ಬಸವಪರ ಸಂಘಟನೆಗಳು ಒಗ್ಗೂಡಿ ಭಾಗಿಯಾಗಿ ಹೋರಾಟ ನಡೆಸಲಿವೆ ಈ ವಿಷಯದಲ್ಲಿ ಕರ್ನಾಟಕ ಸರ್ಕಾರ ಮುಟ್ಟುಗೋಲು ಹಾಕಿರುವುದನ್ನು ಗೌರವಿಸಿ ಅಭಿನಂದಿಸಲಾಗಿದ್ದು, ಮುಂದೆ ಈ ಪುಸ್ತಕವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದೆಂದು ಆಗ್ರಹಿಸಲಾಗಿದೆ. ಒಂದು ವೇಳೆ ಪುಸ್ತಕ ಬಿಡುಗಡೆ ಮಾಡಿದರೆ ಮತ್ತೆ ಹೋರಾಟ ಪ್ರಾರಂಭವಾಗುತ್ತದೆ ಎಂದು ಎಚ್ಚರಿಸಲಾಯಿತು.

ರವಿ ಹಂಜಿ ಅವರು ‘ಬಸವ ಮಂಟಪ’ ಎಂಬ ಗ್ರಂಥವನ್ನು ಪ್ರಕಟಿಸಿದ್ದು, ಅದರ ಉದ್ಘಾಟನಾ ಕಾರ್ಯ ಕ್ರಮದಲ್ಲಿ ರವಿ ಬಳಗಾರ್ ಹಾಗೂ ವೀರಶೈವ ಮಹಾಸಭಾ ಅಧ್ಯಕ್ಷರಾದ ಶಂಕರ್ ಬಿದರಿ ಭಾಗವಹಿಸಿ ರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಧರ್ಮಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾ ಡಲಾಗಿದೆ ಹಾಗೂ ಲೇಖನದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಲಾಗಿದೆ ಮುಂದೆ ಈ ಪುಸ್ತಕವನ್ನು ಬಿಡುಗಡೆ ಮಾಡದಂತೆ ಹಾಗೂ ಬಿಡುಗಡೆ ಮಾಡಿದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಸಿ ಈ ವಿಚಾರವಾಗಿ ವ್ಯಾಪಕ ಪ್ರಚಾರ ನಡೆಸುವುದರ ಜೊತೆಗೆ, ಪುಸ್ತಕವನ್ನು ಹೊರಗೆ ತಂದರೆ ಕಾನೂನು ಪ್ರಕಾರ ಯಾವ ಶಿಕ್ಷೆ ಆಗಬೇಕೋ ಅದು ಆಗಬೇಕು ಎಂದು ಬಸವ ಧರ್ಮ ಪೀಠ ಹಾಗೂ ರಾಷ್ಟ್ರೀಯ ಬಸವ ದಳದವತಿಯಿಂದ ಆಗ್ರಹಿಸಲಾಯಿತು.

ರವಿ ಹಂಜಿ ಅವರು ಕ್ಷಮೆಯಾಚನೆ ಮಾಡಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದಾಗ, ಅದು ಇನ್ನೂ ಅಷ್ಟು ಸೂಕ್ತವೆನಿಸಿಲ್ಲ ವಾಗಿದ್ದು, ಅದನ್ನು ಪರಿಶೀಲಿಸಿ ಎಲ್ಲರೂ ಸೇರಿ ವಿಚಾರ ಮಾಡಿದ ಬಳಿಕ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಇತರ ಮಠಾಧೀಶರ ನಿಲುವಿನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ತಾವು ತಮ್ಮ ಮಠದ ವತಿಯಿಂದ ಧರ್ಮ ಪ್ರಚಾರ ಮಾಡುತ್ತಿದ್ದು, ಶರಣ ಮೇಳ ಪ್ರಚಾರಕ್ಕೆ ಬಂದಾಗ ವಿಷಯ ತಿಳಿದ ತಕ್ಷಣ ಈ ವಿಚಾರವನ್ನು ಪ್ರಸ್ತಾಪಿಸಿರುವುದಾಗಿ ತಿಳಿಸಿ. ಇನ್ನೂ ಇತರ ಮಠಾಧೀಶರೊಂದಿಗೆ ಚರ್ಚೆ ನಡೆಸಿಲ್ಲವಾದರೂ, ಒಬ್ಬೊಬ್ಬರಾಗಿ ಮುಂದೆ ಬರುತ್ತಾರೆ ಮತ್ತು ಎತ್ತಲಿ-ಬಿಡಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುತ್ತಾರೆ ಹಾಗೂ ಯಾರೂ ಸುಮ್ಮನಿರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷರಾದ ಕೆ.ವಿರೇಶ್ ಕುಮಾರ್ ಮಾತನಾಡಿ, ಧಾರ್ಮಿಕ ವಿಚಾರಗಳಲ್ಲಿ ಅನಗತ್ಯ ಹಸ್ತಕ್ಷೇಪ ಹಾಗೂ ಸಮಾಜದಲ್ಲಿ ಅಶಾಂತಿ ಮೂಡಿಸುವ ಯತ್ನ ಸಲ್ಲದು, ರವಿ ಹಂಜಿ ಅವರು ಯಾವ ದೃಷ್ಟಿಕೋನದಿಂದ ಪುಸ್ತಕವನ್ನು ಬರೆದು ಬಿಡುಗಡೆ ಮಾಡಿದ್ದಾರೆ ಎಂಬ ಬಗ್ಗೆ ಸಮಾಜಕ್ಕೆ ಸ್ಪಷ್ಟತೆ ದೊರೆಯುತ್ತಿಲ್ಲ ‘ಸಂಶೋಧನೆ’ ಎಂಬ ಪದಕ್ಕೆ ತಕ್ಕ ಅರ್ಥ ಅವರ ಬರವಣಿಗೆಯಲ್ಲಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ, ತಾವು ವೀರಶೈವ ಲಿಂಗಾಯತ ಎಂದು ಹೇಳಿಕೊಳ್ಳಲು ಇದನ್ನು ಮಾಡಿದ್ದಾಗಿ ತಿಳಿಸುವುದರ ಜೊತೆಗೆ, ತಾವು ನಾಸ್ತಿಕ, ಆಸ್ತಿಕ ಅಲ್ಲ ಹಾಗೂ ಯಾವುದೇ ಧರ್ಮವನ್ನು ನಂಬುವುದಿಲ್ಲ ಎಂದು ಹೇಳುವ ವ್ಯಕ್ತಿ ಧರ್ಮಕ್ಕೆ ಸಂಬಂಧಿಸಿದ ವಿಚಾರಗಳಿಗೆ ಏಕೆ ಕೈಹಾಕಿದ್ದಾರೆ ಎಂದು ಪ್ರಶ್ನಿಸಿದರು.

ಯಾವ ಒತ್ತಡದಿಂದ ಅಥವಾ ಯಾರ ಪ್ರೇರಣೆಯಿಂದ ಈ ರೀತಿಯ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂಬುದು ತಿಳಿಯುತ್ತಿದೆ ಇದರಿಂದ ಅವರು, ಬಲಿಪಶುವಾಗುವ ಅಪಾಯವಿದೆ ಧರ್ಮಗುರುಗಳ ಸಂದೇಶದಂತೆ ಧರ್ಮಕ್ಕಾಗಿ ಹೋರಾಡಲು ಸಾವಿರಾರು ಜನ ಸಿದ್ಧರಿದ್ದಾರೆ ಬಸವಣ್ಣನವರು ಇಡೀ ಸಮಾಜದ ಎಲ್ಲರನ್ನೂ ಸಮಾನತೆಯತ್ತ ತಂದಿದ್ದಾರೆ ಸಮಾಜದ ಏಳಿಗೆಗೆ ಶ್ರಮಿಸಿದವರ ಇತಿಹಾಸವನ್ನು ಮರೆಯ ಬಾರದು ಇಲ್ಲದ ಸಲ್ಲದ ವಿಚಾರಗಳನ್ನು ಬರೆದು ಹೆಸರು ಮಾಡಿಕೊಳ್ಳಲು ಹೋಗಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವುದು ಅಥವಾ ವ್ಯವಸ್ಥೆಯನ್ನು ಹಾಳುಮಾಡುವುದು ಸರಿಯಲ್ಲ ಕಾನೂನು ವ್ಯಾಪ್ತಿಯಲ್ಲೇ ಹೋರಾಟ ನಡೆಸುವ ದೃಷ್ಟಿಯಿಂದ ಈ ಎಚ್ಚರಿಕೆ ನೀಡಲಾಗುತ್ತಿದೆ ಎಂದರು.

ಧರ್ಮ ಮತ್ತು ಸಮಾಜಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು; ಇಲ್ಲವಾದಲ್ಲಿ ಸಮಾಜದ ಅಶಾಂತಿಗೆ ಕಾರಣವಾಗುವ ಇಂತಹ ನಡೆಗಳ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now