Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿಗೆ ಸಚಿವ ಸಂಪುಟ ಸಂಪುಟ ಅನುಮೋದನೆ!

---Advertisement---

ಬೆಂಗಳೂರು.ಜುಲೈ.20 : ಬರ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ನಡೆಸಿದ ಮಹತ್ವದ ಸಭೆಯ ಬೆನ್ನಲ್ಲೇ, ರಾಜ್ಯ ಸರ್ಕಾರವು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಹತ್ತಾರು ಜನಪರ ಯೋಜನೆಗಳಿಗೆ ಅನುಮೋದನೆ ನೀಡಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಭೆಯ ಪ್ರಮುಖ ನಿರ್ಧಾರಗಳನ್ನು ಹಂಚಿಕೊಂಡಿದ್ದಾರೆ.

ಅಭ್ಯರ್ಥಿಗಳು ದೀರ್ಘಕಾಲದಿಂದ ಕಾಯುತ್ತಿದ್ದ 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಚಿವ ಸಂಪುಟ ಸಭೆಯು ಘಟನೋತ್ತರ ಅನುಮೋದನೆ ನೀಡುವ ಮೂಲಕ ನಿರುದ್ಯೋಗಿಗಳಿಗೆ ದೊಡ್ಡ ಸಿಹಿಸುದ್ದಿ ನೀಡಿದೆ. ರೈತರಿಗೆ ಹವಾಮಾನ ವೈಪರೀತ್ಯ ಹಾಗೂ ಬೆಳೆ ರೋಗಗಳ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಲು ಸರ್ಕಾರ ಮುಂದಾಗಿದೆ. ‘ಕರ್ನಾಟಕ ಅಗ್ರಿಟೆಕ್ ಮಿಷನ್ 2026’ ಯೋಜನೆಯಡಿ ಸ್ಯಾಟಲೈಟ್ ಮೂಲಕ ಹವಾಮಾನ ವಿಶ್ಲೇಷಣೆ ನಡೆಸಿ ರೈತರಿಗೆ ನಿಖರ ಮಾಹಿತಿ ತಲುಪಿಸಲು ಕೃಷಿ ಇಲಾಖೆಗೆ 36 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲಾಗಿದೆ.

ಇನ್ನು ನೀರಾವರಿ ವಲಯಕ್ಕೂ ಭರಪೂರ ಕೊಡುಗೆ ಸಿಕ್ಕಿದ್ದು, ದಿವಂಗತ ಸಚಿವ ಸುಧಾಕರ್ ಅವರ ಕನಸಿನ ಯೋಜನೆಯಾಗಿದ್ದ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿಯ 114 ಕೆರೆಗಳು ಹಾಗೂ ಗಾಯತ್ರಿ ಜಲಾಶಯವನ್ನು ತುಂಬಿಸುವ ಕಾರ್ಯಕ್ಕೆ 244 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಜೊತೆಗೆ, ಬೀದರ್ನ ಕಾರಿಂಜ ಬಲದಂಡೆ ಕಾಲುವೆ ಅಭಿವೃದ್ಧಿಗೆ 180 ಕೋಟಿ ರೂಪಾಯಿ ಹಾಗೂ ನಂಜಗೂಡಿನ ಕಪಿಲಾ ನದಿಗೆ ಕೊಳಚೆ ನೀರು ಸೇರುವುದನ್ನು ತಡೆದು ಪ್ರವಾಹ ನಿಯಂತ್ರಿಸಲು 70 ಕೋಟಿ ರೂಪಾಯಿಗಳ ಯೋಜನೆಗೆ ಚಾಲನೆ ನೀಡಲಾಗಿದೆ.

ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಕ್ಕೆ ಆದ್ಯತೆ
ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಬಲ ತುಂಬಿರುವ ಸರ್ಕಾರ, ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿಗೆ ಅಗತ್ಯ ಉಪಕರಣಗಳನ್ನು ಖರೀದಿಸಲು ಒಟ್ಟು 21.56 ಕೋಟಿ ರೂಪಾಯಿಗಳನ್ನು (ಬಜೆಟ್ನಿಂದ 16.56 ಕೋಟಿ ಮತ್ತು ಆಂತರಿಕ ಸಂಪನ್ಮೂಲದಿಂದ 5 ಕೋಟಿ) ಮಂಜೂರು ಮಾಡಿದೆ. ಇದೇ ವೇಳೆ ಬೆಂಗಳೂರು ಮೆಡಿಕಲ್ ಕಾಲೇಜಿನ ಹಳೇ ಹಾಸ್ಟೆಲ್ ದುರಸ್ತಿಗಿಂತ ಹೊಸ ಕಟ್ಟಡವೇ ಲೇಸು ಎಂದು ನಿರ್ಧರಿಸಿರುವ ಸಿಎಂ, ಕಾಲೇಜಿನ 3-4 ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಾಗ ಹುಡುಕಿ 80 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಹಾಸ್ಟೆಲ್ ನಿರ್ಮಿಸಲು ಆದೇಶಿಸಿದ್ದಾರೆ. ತಾಂತ್ರಿಕ ಪ್ರಗತಿಗಾಗಿ ರಾಯಚೂರಿನ ಐಐಟಿಯಲ್ಲಿ ‘ಎಐ ಉತ್ಕೃಷ್ಟತಾ ಕೇಂದ್ರ’ ಸ್ಥಾಪಿಸಲು 12 ಕೋಟಿ ರೂಪಾಯಿ ನೀಡಲಾಗಿದೆ.

ಮೂಲಸೌಕರ್ಯ ವಿಭಾಗದಲ್ಲಿ, ಯಾನಗಂಟಿ, ನರಿಬೋಳ, ಗೊನ್ವಾರ ಹಾಗೂ ಕಡಕೊಳ ಮಾರ್ಗದ ರಾಜ್ಯ ಹೆದ್ದಾರಿ-156ರ ಅಭಿವೃದ್ಧಿಗೆ 25 ಕೋಟಿ ರೂಪಾಯಿ ಹಾಗೂ ಲೋಕಭವನದಲ್ಲಿ ಆಡಳಿತ ಭವನ ನಿರ್ಮಾಣಕ್ಕಾಗಿ 27 ಕೋಟಿ ರೂಪಾಯಿಗಳ ಆಡಳಿತಾತ್ಮಕ ಅನುಮೋದನೆ ದೊರೆತಿದೆ.

ಸಾಮಾಜಿಕ ಕಲ್ಯಾಣ ಹಾಗೂ ವಸತಿ ಯೋಜನೆ
ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಒತ್ತು ನೀಡಿರುವ ಸಂಪುಟವು, ಒಬಿಸಿ ವಸತಿ ನಿಲಯಗಳಿಗೆ 15 ಸಾವಿರ ಹಾಸಿಗೆ ಹಾಗೂ 7,500 ಮಂಚಗಳನ್ನು ಖರೀದಿಸಲು 30 ಕೋಟಿ ರೂಪಾಯಿಗಳನ್ನು ಒದಗಿಸಿದೆ. ಅಲೆಮಾರಿ ಜನಾಂಗದವರ ವಸತಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ, ಅರ್ಹ ಫಲಾನುಭವಿಗಳಿಗೆ 380 ಚದರ ಅಡಿ ವಿಸ್ತೀರ್ಣದ ಮನೆ ನಿರ್ಮಿಸಿಕೊಳ್ಳಲು ತಲಾ 10 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

Join WhatsApp

Join Now

Join Telegram

Join Now