ಕಾರವಾರ : ಶಿರಸಿಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ಇಂದು ಬಿ ವೈ ರಾಘವೇಂದ್ರ ಭಾಗಿಯಾಗಿದ್ರು. ಈ ವೇಳೆ ಐಟಿ ದಾಳಿ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ. ಈ ದಾಳಿ ತನಿಖಾದಳದ ಸಹಜ ಪ್ರಕ್ರಿಯೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಈ ಸಂಬಂಧ ಮಾಡಿರೋ ಆರೋಪ್ ಸತ್ಯಕ್ಕೆ ದೂರವಾಗಿರೋದು.
ತಂದೆ ಯಡಿಯೂರಪ್ಪ ಅವರ ಕಚೇರಿಯಲ್ಲಿ ಉಮೇಶ್ ಹಲವು ವರ್ಷಗಳಿಂದ ಕೆಲಸ ಮಾಡ್ತಾ ಇದ್ರು. ಈಗ ದಾಳಿಯಾಗಿದೆ. ಅವರ ತನಿಖೆ ಪಾರದರ್ಶಕವಾಗಿ ನಡೆಯಲಿದೆ. ತನಿಖೆ ನಡೆದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ ಎಂದಿದ್ದಾರೆ.
ಇನ್ನು ರಾಜ್ಯರಾಜಕಾರಣಕ್ಕೆ ರಾಘವೇಂದ್ರ ಅವರು ಬರ್ತಾರಾ ಅನ್ನೋ ವಿಚಾರಕ್ಕೆ ಮಾತನಾಡಿದ್ದು, ಯಡಿಯೂರಪ್ಪ ಹಾಗೂ ನಮ್ಮನ್ನು ಬೆಳೆಸಿರೋದೆ ಬಿಜೆಪಿ ಪಕ್ಷ. ಹೀಗಾಗಿ ಪಕ್ಷ ಎಂದಿಗೂ ನಮಗೆ ತಾಯಿಯಿದ್ದಂತೆಯೇ ಇರಲಿದೆ. ಯಡಿಯೂರಪ್ಪ ಅವರನ್ನು ಪಕ್ಷ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಹೀಗಿದ್ದಾಗಲೂ ಪಕ್ಷದ ವರಿಷ್ಠರು ಮತ್ತು ಸಂಘಟನೆ ಒಪ್ಪಿದ್ರೆ ರಾಜ್ಯ ರಾಜಕಾರಣಕ್ಕೆ ಬರ್ತೇನೆ ಎಂಬುದಾಗಿ ಇಂಗಿತ ವ್ಯಕ್ತಪಡಿಸಿದ್ದಾರೆ.