ಧಾರ್ಮಿಕ ವಿಚಾರ ತರುವುದು ಎಲೆಕ್ಷನ್ ಗಾಗಿ ಮಾತ್ರ : ಬಿಜೆಪಿ ಬಗ್ಗೆ ಜಗದೀಶ್ ಶೆಟ್ಟರ್ ಶಾಕಿಂಗ್ ಹೇಳಿಕೆ

suddionenews
1 Min Read

ಬೆಂಗಳೂರು: ರಾಮ ಮಂದಿರ ಉದ್ಘಾಟನೆ ಸಮಯದಲ್ಲಿಯೇ ಹಿಂದೂಗಳ ಟಾರ್ಗೆಟ್ ಪ್ರಶ್ನೆಗೆ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ನಾನು ಅಲ್ಲಿದ್ದು ವಿತ್ ಡ್ರಾ ಮಾಡೋಕೆ ಪ್ರಯತ್ನ ಪಟ್ಟಂತ ವ್ಯಕ್ತಿ. ಷಡ್ಯಂತ್ರ ಮಾಡವ್ರೆ ಅಂದರೆ ಏನು ಷಡ್ಯಂತ್ರ ಅಂತ ಹೇಳಿ ಬಿಡಲಿ. ರಾಜ್ಯದಲ್ಲಿ ಎಷ್ಟು ಮಂದಿ ಅವರೆ ಹಿಂದುಗಳು ಇದಾರ್ರೀ. ಏಳು ಕೋಟಿ ಜನಸಂಖ್ಯೆ ಇದೆ. 8% ಜನಸಂಖ್ಯೆ ಹಿಂದೂಗಳೇ ಇದಾರೆ. ಒಬ್ಬ ವ್ಯಕ್ತಿಯನ್ನು ಅರೆಸ್ಟ್ ಮಾಡಿದರೆ ಐದಾರು ಕೋಟಿ ಜನರಿಗೆ ತೊಂದರೆ ಆಯ್ತಾ..? ಅರ್ಥ ಏನು ಇದಕ್ಕೆ. ಹಿಂದೂ ಮುಸ್ಲಿಂ ಅಂತ ಡಿವೈಡ್ ಮಾಡೋದೇ ಆಯ್ತು ನಿಮ್ಮದು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಮಣಿಕಂಠ ರಾಥೋಡ್ ಎಂಬ ವ್ಯಕ್ತಿ. 80 ಕ್ರಿಮಿನಲ್ ಕೇಸ್ ಇದೆ. ಅವನು ರೌಡಿಶೀಟರ್ ಲೀಸ್ಟ್ ನಲ್ಲಿದ್ದಾನೆ. ಅವರನ್ನು ತೆಗೆದುಕೊಂಡು ಪ್ರಿಯಾಂಕ್ ಖರ್ಗೆ ಎದುರು ಸ್ಪರ್ಧೆಗೆ ನಿಲ್ಲಿಸುತ್ತಾರೆ. ಕಾನೂನು ರೀತಿ ಹೋರಾಟ ಮಾಡಿ, ಜಾಮೀನು ತೆಗೆದುಕೊಳ್ಳಿ. ವಿಷಯ ಕೋರ್ಟ್ ನಲ್ಲಿದೆ. ಜನ ಅರ್ಥ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್ ಅನ್ನ ಹಿಂದೂ ವಿರೋಧಿ ಅಂತ ಬಿಜೆಪಿ ಹೋರಾಟ ಮಾಡುತ್ತಾ ಇದೆಯಲ್ಲ, ಧಾರ್ಮಿಕವಾದ ವಿಚಾರದ ಮೇಲೆ ಕ್ಷಣಿಕ ಗೆಲುವು ಸಾಧಿಸಿದೆ.

 

ಬಿಜೆಪಿಯವರು ಬೀದಿಗೆ ಇಳಿದು ಹೋರಾಟ ಮಾಡುತ್ತಾ ಇದಾರಲ್ಲ, ಕರಸೇವಕರ ಬಗ್ಗೆ ಬಹಳಷ್ಟು ಅಭಿಮಾನದಿಂದ ಮಾತನಾಡುತ್ತಾ ಇದಾರಲ್ಲ. ಆ ಕರಸೇವಕರ ಮೇಲೆ ಇರುವಂತ ಕೇಸನ್ನ ಅವರು ಯಾಕೆ ವಿತ್ ಡ್ರಾ ಮಾಡುವುದಕ್ಕೆ ಪ್ರಯತ್ನ ಪಡಲಿಲ್ಲ. ಆಗ ಬಿಜೆಪಿಯೇ ಅಧಿಕಾರದಲ್ಲಿಯೇ ಇತ್ತು. ಆಗ ಯಾರೂ ಕೆಲಸ ಮಾಡುವುದಿಲ್ಲ. ಆದರೆ ಇಂಥ ಘಟನೆಯಾದಾಗ ಹೋರಾಟ ಮಾಡುವುದಕ್ಕೆ ನಿಂತು ಬಿಡುತ್ತಾರೆ. ಹಿಂದೂ ಮುಸ್ಲಿಂ ವಿಚಾರ ತೆಗೆದುಕೊಂಡು ಎಲೆಕ್ಷನ್ ಉಪಯೋಗ ಪಡೆದುಕೊಳ್ಳುತ್ತಾರೆ. ಇದರಲ್ಲಿ ಪ್ರಹ್ಲಾದ್ ಜೋಶಿ ಕೈವಾಡವೂ ಇದೆ ಎಂದು ಬಿಜೆಪಿ ವಿರುದ್ದ ಆಕ್ರೋಶ ಹೊರ ಹಾಕಿದರು.

Share This Article
Leave a Comment

Leave a Reply

Your email address will not be published. Required fields are marked *