Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING NEWS : ವಿಯೆಟ್ನಾಂನಲ್ಲಿ ಪ್ರವಾಸಿಗರ ಬೋಟ್ ಮುಳುಗಿ ದುರಂತ; 15 ಮಂದಿ ಭಾರತೀಯರು ಸಾವು

---Advertisement---

ದೆಹಲಿ.ಜುಲೈ. 11: ವಿಯೆಟ್ನಾಂನ ದಕ್ಷಿಣ ಭಾಗದ ಪ್ರಸಿದ್ಧ ಪ್ರವಾಸಿ ದ್ವೀಪವಾದ ಫೂ ಕ್ವೋಕ್ (Phu Quoc) ಬಳಿ ಶನಿವಾರ ಪ್ರವಾಸಿಗರಿದ್ದ ಬೋಟ್ ಒಂದು ಜಲಸಮಾಧಿಯಾಗಿದ್ದು, ಕನಿಷ್ಠ 15 ಭಾರತೀಯ ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಅಪಘಾತಕ್ಕೀಡಾದ ಬೋಟ್‌ನಲ್ಲಿ ಒಟ್ಟು 32 ಭಾರತೀಯ ಪ್ರವಾಸಿಗರು ಮತ್ತು ನಾಲ್ಕು ಸಿಬ್ಬಂದಿ ಇದ್ದರು. ಫೂ ಕ್ವೋಕ್ ದ್ವೀಪದ ಸಮೀಪವಿರುವ ‘ಹೊನ್ ಮೇ ರುತ್ ನ್ಗೋಯ್’ ದ್ವೀಪದಿಂದ ಕೇವಲ 400 ಮೀಟರ್ (ಸುಮಾರು 1,310 ಅಡಿ) ದೂರದಲ್ಲಿದ್ದಾಗ ಬೋಟ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ ಎನ್ನಲಾಗಿದೆ.

ಈ ದಾರುಣ ಘಟನೆಯನ್ನು ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ದೃಢಪಡಿಸಿದ್ದು, ಸಾಮಾಜಿಕ ಜಾಲತಾಣ ‘X’ ನಲ್ಲಿ ಸಂತಾಪ ಸೂಚಿಸಿದೆ. ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿ ಯುದ್ಧೋಪಾದಿಯಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಅಪಘಾತಕ್ಕೆ ನಿಖರ ಕಾರಣ ಏನೆಂಬುದರ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಕಚೇರಿ ತಿಳಿಸಿದೆ.

ಸಹಾಯಕ್ಕಾಗಿ ಕಂಟ್ರೋಲ್ ರೂಮ್ ಸ್ಥಾಪನೆ

ಬೋಟ್ ದುರಂತದಿಂದ ತೊಂದರೆಗೆ ಒಳಗಾದ ಪ್ರವಾಸಿಗರ ಕುಟುಂಬಸ್ಥರಿಗೆ ನೆರವಾಗಲು ಹೋಚಿಮಿನ್ ಸಿಟಿಯಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಮತ್ತು ಹನೋಯಿಯಲ್ಲಿರುವ ರಾಯಭಾರ ಕಚೇರಿಗಳು ತುರ್ತು ನಿಯಂತ್ರಣ ಕೊಠಡಿಗಳನ್ನು (Control Rooms) ತೆರೆದಿವೆ.

ಸಂತ್ರಸ್ತರ ಕುಟುಂಬದವರು ಸಹಾಯಕ್ಕಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ:
ಹೋಚಿಮಿನ್ ಸಿಟಿ ಕಂಟ್ರೋಲ್ ರೂಮ್: +84 36 281 7930, +84 91 552 37 14, +84 33 452 0414
ಹನೋಯಿ ಕಂಟ್ರೋಲ್ ರೂಮ್: +84 91 308 9165

Join WhatsApp

Join Now

Join Telegram

Join Now