Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಾಲಕರ ಜಗಳ ಕೊಲೆಯಲ್ಲಿ ಅಂತ್ಯ : SSLC ಹುಡುಗನ ಕೊಲೆ ಬಗ್ಗೆ ಶಿವಮೊಗ್ಗ ಎಸ್ಪಿ ಹೇಳಿದ್ದೇನು..?

---Advertisement---

ಶಿವಮೊಗ್ಗ: ಇಡೀ ಜಿಲ್ಲೆಯೇ ಬೆಚ್ಚಿಬೀಳುವಂತ ಘಟನೆ ನಡೆದಿದೆ. ಮಕ್ಕಳ ಜಗಳಗಳು ಕೊಲೆಯಲ್ಲಿ ಅಂತ್ಯವಾಗೋದು ಅಂದ್ರೆ ಏನು..? ಮಕ್ಕಳ ಮನಸ್ಥಿತಿ ಎಲ್ಲಿಗೆ ಹೋಗಿ ಮುಟ್ಟುತ್ತಾ ಇದೆ ಎಂಬ ಚಿಂತೆ ಪೋಷಕರನ್ನ ಕಾಡುವಂತೆ ಮಾಡಿದೆ. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹೊರವಲಯದ ಸೂಳೆಬೈಲಿನಲ್ಲಿ ನಡೆದಿದೆ. ಸಂಕೇತ್ ಎಂಬ ವಿದ್ಯಾರ್ಥಿ ಕೊಲೆಯಾದ ದುರ್ದೈವಿ.

ಈ ಬಗ್ಗೆ ಶಿವಮೊಗ್ಗದ ಎಸ್ಪಿ ಮಾಹಿತಿ ನೀಡಿದ್ದಾರೆ. ಸ್ಪೆಷಲ್ ಕ್ಲಾಸ್ ಅನ್ನ ಮುಗಿಸಿಕೊಂಡು ಸಂಕೇತ್ ಮತ್ತು ಸಂಗಡಿಗರು ಬರ್ತಾ ಇದ್ದರು. ಈ ವೇಳೆ ಹುಡುಗರ ಮಧ್ಯೆಯೇ ಮಾತಿನ ಚಕಮಕಿ ಶುರುವಾಗಿದೆ. ಅದರಿಂದ ಕೈ ಕೈನಲ್ಲಿಯೇ ಮೊದಲು ಹೊಡೆದಾಡಿಕೊಂಡಿದ್ದಾರೆ. ಸಂಕೇತ್ ಇದರಿಂದ ಕುಸಿದು ಬಿದ್ದಿದ್ದಾನೆ. ಅಲ್ಲಿಯೇ ಇದ್ದಂತ ನಯಾಜ್ ಹಾಗೂ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಬರ್ತಾರೆ. ಅಷ್ಟರಲ್ಲಿ ಆತನ ಪ್ರಾಣ ಹೋಗಿದೆ ಅಂತ ಅನೌನ್ಸ್ ಮಾಡ್ತಾರೆ. ಯಾರೂ ಈ ಕೃತ್ಯ ಮಾಡಿದ್ದಾರೆ ಅವರು ಅಪ್ರಾಪ್ತರು. ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ ಎಂದಿದ್ದಾರೆ.

ಸಂಕೇತ್ ಮನೆ ದುಃಖದಿಂದ ಕೂಡಿದ್ದು ಸಂಕೇತ್ ತಾಯಿ ನೋವಿನಲ್ಲಿಯೇ ಮಾತನ್ನಾಡಿದ್ದಾರೆ. ಇವತ್ ಎಕ್ಸಾಂ ಇದೆ ಮಾ ಅಂತ ಎಲ್ಲರಿಗೂ ಹೇಳಿ ಹೋದ. ಟ್ಯೂಷನ್ ನವರಿಗೆ ಕರೆ ಮಾಡಿ ಕೇಳಿದ್ದಕ್ಕೆ 9 ಗಂಟೆಗೆ ಕಳುಹಿಸ್ತೀವಿ ಅಂದಿದ್ರು. ಆಸ್ಪತ್ರೆಗೆ ತಗೊಂಡ್ ಬಂದಿದ್ದರು. ನನ್ನ ತೊಡೆ ಮೇಲೆ ಹಾಕೊಂಡು ಸಂಕೇತ ಅಂದ್ರು ಮಾತಾಡ್ಲಿಲ್ಲ. ಒಳಗೆ ತಗೊಂಡ್ ಹೋದಾಗ ಡಾಕ್ಟರ್ ಹೇಳಿದ್ರು, ಇಲ್ಲಪ್ಪ ಜೀವ ಹೋಗಿದೆ ಅಂದ್ರು. ವಂಶ ಬೆಳೆಸೋ ಮಗನೇ ಇಲ್ಲ ಅಂತ ಕಣ್ಣೀರು ಹಾಕಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now