ಹುಬ್ಬಳ್ಳಿ ಧಾರಾವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಗದ್ದುಗೆ ಹಿಡಿದಿದೆ. ಈ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆಯಾಗಿದೆ. ಕೈ ಎತ್ತುವ ಮೂಲಕ ಇಂದು ಮೇಯರ್ ಆಯ್ಕೆಯಾಗಿದೆ.
ಚುನಾವಣಾಧಿಕಾರಿ ಆದಿತ್ಯಾ ಆಮ್ಲಾನ್ ಬಿಸ್ವಾಸ್ ನೇತೃತ್ವದಲ್ಲಿ ಈ ಚುನಾವಣೆ ನಡೆದಿದೆ. 50 ಮತ ಪಡೆಯುವ ಮೂಲಕ ಬಿಜೆಪಿಯ ಈರೇಶ ಅಂಚಟಗೇರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಯೂರ್ ಮೋರೆ ಸೋಲು ಕಂಡಿದ್ದಾರೆ. ಈ ಮೂಲಕ ಬಿಜೆಪಿ ನಾಯಕರು ಸಂಭ್ರಮಿಸಿದ್ದಾರೆ.