ಬೆಂಗಳೂರು: ಇಂದು ವಿಧಾನಸಭೆಯಲ್ಲಿ ಅಪರಾಧ ಪ್ರಕರಣಗಳ ಬಗ್ಗೆ ಚರ್ಚೆಯಾಗಿದೆ. ಈ ವೇಳೆ ಹೆಚ್ ಕೆ ಪಾಟೀಲ್ ಕೆಲವರ ಮೇಲಿರುವ ಕ್ರಿಮಿನಲ್ ಪ್ರಕರಣದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಮೊನ್ನೆ ಐದು ರಾಜ್ಯಗಳ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ದೊಡ್ಡ ಬೆಂಬಲ ಕೊಟ್ಟರು. ಉತ್ತರ ಪ್ರದೇಶದಲ್ಲಿ ಮಂತ್ರಿ ಮಂಡಲ ಮಾಡಿದರು. 53 ಮಂತ್ರಿಗಳ ಬಗ್ಗೆ ಒಂದು ಸಂಸ್ಥೆ ಅಧ್ಯನ ಮಾಡುತ್ತದೆ. ಈ ಪೈಕಿ 22 ಮಂತ್ರಿಗಳು ಕ್ರಿಮಿನಲ್ ಕೇಸ್ ಉಳ್ಳವರಿದ್ದಾರೆ. ಇದರಿಂದ ಜನರಿಗೆ ಏನು ಅಭಿಪ್ರಾಯ ಬರುತ್ತದೆ ನೀವೆ ಹೇಳಿ ಎಂದು ಹೆಚ್ ಕೆ ಪಾಟೀಲ್ ಪ್ರಸ್ತಾಪ ಮಾಡಿದ್ದಾರೆ.
ಹೆಚ್ ಕೆ ಪಾಟೀಲ್ ಪ್ರಸ್ತಾಪಕ್ಕೆ ಆಕ್ಷೇಪ ಮಾಡಿದ ಶಾಸಕ ನಡಹಳ್ಳಿ, ದೇಶದಲ್ಲಿ ಎಷ್ಟು ಜನಗಳ ಮೇಲೆ ಕೇಸ್ ಗಳಿಲ್ಲ ಎಂದು ಪ್ರಶ್ನಿಸಿದ್ದಾರೆ. ಕೇಸ್ ಇದಾವೆ ಎಂದಾಕ್ಷಣಾ ಅವು ಕ್ರಮಿನಲ್ ಗಳು ಅಲ್ಲ. ಒಂದೇ ಮುಖ ನೋಡಬಾರದು, ಎರಡು ಮುಖ ನೋಡಬೇಕಲ್ವಾ. ಸಿಎಂ ಆಗಿದ್ದವರು ಎಷ್ಟು ಮಂದಿ ಜೈಲಿಗೆ ಹೋಗಿಲ್ಲ ಹೇಳಿ ಎಂದು ಪ್ರಶ್ನಿಸಿದ್ದಾರೆ.