Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಬಿಜೆಪಿ ನಾಯಕರು ಡ್ರಾಮಾ ಮಾಸ್ಟರ್ : ಡಿಕೆಶಿ ಹೇಳಿಕೆಗೆ ಶ್ರೀರಾಮುಲು ಹೇಳಿದ್ದೇನು..?

---Advertisement---

 

ಬಳ್ಳಾರಿ: ಇಂದು ಸುದ್ದಿಗೋಷ್ಟಿ ನಡೆಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಅವರೆಲ್ಲಾ ಡ್ರಾಮಾ ಮಾಸ್ಟರ್ಸ್. ಫಿಲ್ಮ್ ಪ್ರೊಡ್ಯೂಸರ್ ಅಲ್ವಾ ಹಾಗಾಗಿ ಡ್ರಾಮಾ ಮಾಸ್ಟರ್ ಅಂದಿದ್ದರು. ಈ ಮಾತಿಗೆ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ನಾನು ಹೇಳಿರುವಂತ ವಿಚಾರ ಯಾರೂ ತಪ್ಪಿತಸ್ಥರು ಅಂತ ಗುರುತಿಸಿದ್ದಾರಾ..? ಯಾರ ಬಂದೂಕಿನಿಂದ ಗುಂಡು ಹಾರಿದೆ ಎಂಬುದನ್ನ ಗುರುತಿಸಿದ್ದಾರಾ..? ಸತ್ತಂತ ಹುಡುಗನ ದೇಹದಲ್ಲಿ ಯಾವ ಗುಂಡು ಇತ್ತು ಅಂತ ಗುರುತಿಸಿದ್ದಾರಾ ಎಂದು ಪ್ರಶ್ನೆಗಳನ್ನ ಕೇಳಿದ್ದಾರೆ.

ಇಲ್ಲಿಯ ತನಕ ಅರೆಸ್ಟ್ ಮಾಡುವುದಕ್ಕೆ ಆಗಿಲ್ಲ ಅಂದ್ರೆ ಯಾರು ಜವಬ್ದಾರಿ. ಇಂದು ಒಬ್ಬ ಅಮಾಯಕ ಸತ್ತು ಹೋಗಿದ್ದಾನೆ‌. ಅಮಾಯಕ ಪ್ರಾಣ ಕಳೆದುಕೊಂಡಂತ ಸಂದರ್ಭದಲ್ಲೂ ಅರೆಸ್ಟ್ ಮಾಡೋದಕ್ಕೆ ಆಗ್ತಾ ಇಲ್ಲ ಅಂದ್ರೆ ಏನಿಲ್ಲ ಪ್ರಭಾವ ಇದೆಯಾ..? ಈ ಸಂಬಂಧ ಅನುಮಾನ ಎಲ್ಲಾ ಕಡೆಯಲ್ಲೂ ಬರ್ತಾ ಇದೆ. ಅದಕ್ಕೆ ನಾನು ಸರ್ಕಾರಕ್ಕೆ ಒತ್ತಾಯ ಮಾಡ್ತಾ ಇದ್ದೀನಿ, ಗೃಹ ಮಂತ್ರಿಗೂ ಒತ್ತಾಯ ಮಾಡ್ತಾ ಇದ್ದೀನಿ. ಯಾರನ್ನ ನೀವೂ ಆರೋಪಿ ಅಂತ ಪತ್ತೆ ಮಾಡಿದ್ದೀರೋ ಅವರನ್ನು ತಕ್ಷಣ ಕಸ್ಟಡಿಗೆ ತೆಗೆದುಕೊಳ್ಳುವ ಕೆಲಸ ಆಗಬೇಕು.

ಸತ್ತಂತ ವ್ಯಕ್ತಿಗೆ ನ್ಯಾಯ ಕೊಡಿಸಬೇಕು ಅಂದ್ರೆ ಜೈಲಿಗೆ ಹಾಕಬೇಕು. ಪ್ಲೆಕ್ಸ್ ಕಟ್ಟುವಂತಹ ವಿಚಾರಕ್ಕೆ ಇದು ಆದ ಜಗಳವಲ್ಲ. ಅವರು ತಪ್ಪು ತಿಳಿದುಕೊಂಡಿದ್ದಾರೆ. ಜಗಳ ಮಾಡಬೇಕು ಅಂತ ಬಂದವರು. ಜಗಳ ಆಡುವಂತಹ ಸಂದರ್ಭದಲ್ಲಿ ಅವರೇ ಗುಂಡು ಹಾರಿಸಿ, ಅವರದ್ದೇ ಕಾರ್ಯಕರ್ತ‌ನನ್ನ ಕೊಂದಿದ್ದಾರೆ. ಸರಿಯಾದ ರೀತಿಯಲ್ಲಿ ಮಾಹಿತಿ ತಗೊಂಡು ಮಾತನಾಡಿ. ಒಬ್ಬ ಅಮಾಯಕ ಸತ್ತಿದ್ದಾನೆ. ಅವನ ಸಾವಿಗೆ ಹೊಣೆ ಯಾರು ಅಂತ ಕೇಳ್ತಾ ಇದ್ದೀನಿ ಎಂದು ಡಿಕೆ ಶಿವಕುಮಾರ್ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ.

Join WhatsApp

Join Now

Join Telegram

Join Now