Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಇದೆ : ಸೋಮಶೇಖರ್

Facebook
Twitter
Telegram
WhatsApp

ವರದಿ : ಸುರೇಶ್ ಪಟ್ಟಣ್

ಚಿತ್ರದುರ್ಗ, (ನ.23) : ರಾಜ್ಯದಲ್ಲಿ ಅಡಳಿತವನ್ನು ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಇದೆ. ಜಿಲ್ಲೆಯಲ್ಲಿ ಆವರ ಶಾಸಕರು, ಸಂಸದರು, ಸಚಿವರು ಆಡಳಿತ ಪಕ್ಷವೂ ಸಹಾ ಇರಬಹುದು ಆದರೆ ಮತದಾರರ ಮನದಲ್ಲಿ ಬಿಜೆಪಿಯ ವಿರುದ್ದದ ಮನೋಭಾವ ಇದೆ ಎಂದು ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ ತಿಳಿಸಿದರು.

ಎಂ.ಎಲ್.ಸಿ.ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತದ ವಿರೋಧ ಇದೆ, ನಮ್ಮ ಪರವಾಗಿ ಮತದಾರರು ಇದ್ದಾರೆ. ಚುನಾವಣೆಗೆ ಅರ್ಜಿಯನ್ನು ಹಾಕಿದ ಮೇಲೆ ಸ್ಪರ್ಧೆ ಮಾಡಬೇಕಿದೆ ಈ ಚುನಾವಣೆಯಲ್ಲಿ ಬೇರೆ ಪಕ್ಷದವರ ಎಷ್ಟೇ ಪ್ರಾಬಲ್ಯ ಇದ್ದರು ಸಹಾ ಸ್ಫರ್ಧೆ ಮಾತ್ರ ನಡೆಯುತ್ತದೆ ಎಂದ ಅವರು ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ನಿರ್ವಹಣೆ ಮಾಡಲಾಗಿದ್ದು, ಸಾವಯವ ಕೃಷಿಗೆ ಸಿದ್ದರಾಮಯ್ಯ ನಮವರು ನನ್ನನ್ನು ಆಧ್ಯಕ್ಷನನ್ನಾಗಿ ಮಾಡಿದ್ದರು. ಅಲ್ಲೂ ಸಹಾ ಉತ್ತಮವಾದ ಹೆಸರು ಮಾಡಿ ರೈತರಿಗೆ ಸಹಾಯ ಮಾಡಲಾಗಿದೆ ಎಂದು ಸೋಮಶೇಖರ್ ಹೇಳೀದರು.

ಚುನಾವಣೆ ಎಂದರೆ ನನಗೆ ಖುಷಿಯಾದ ವಿಚಾರ, ಈ ಚುನಾವಣೆಯಲ್ಲಿ ಸ್ಥಳೀಯ ಪರಕೀಯ ಎಂಬುದು ಇಲ್ಲ, ಈಗ ಸಂಸದರಾಗಿರುವ ನಾರಾಯಣಸ್ವಾಮಿ, ಸಚಿವರಾಗಿರುವ ಶ್ರೀರಾಮುಲು ಸಹಾ ಹೊರಗಿನವರೇ ಅಲ್ಲದೆ ಇಂದಿರಾಗಾಂಧಿಯವರು ಸಹಾ ಹೊರಗಿನಿಂದಲೇ ಬಂದವರು. ನಾವುಗಳು ಅವರನ್ನು ಸ್ವಾಗತ ಮಾಡಿದ್ದೇವೆ ನಾವು ಎಲ್ಲಿಂದಲೇ ಬಂದರು ಸಹಾ ಬಂದ ಮೇಲೆ ಇದು ನಮ್ಮ ಕ್ಷೇತ್ರ ಎಂಬ ಭಾವನೆ ಬರಬೇಕಿದೆ ಎಂದರು.

ಇಲ್ಲಿ ವಲಸಿಗರು, ಸ್ಥಳೀಯರು ಎಂಬ ಭಾವನೆ ಬೇಡ, ನಾನು ಹೊರಗಿನವರಾದರೂ ಗೆದ್ದ ಮೇಲೆ ಇಲ್ಲಿಯೇ ಇದ್ದು ಮತದಾರರ ಸಮಸ್ಯೆಗಳಿಗೆ ಸ್ಫಂದಿಸುತ್ತೇನೆ, ನಾನು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದ ನಂತರ ಅದರ ಕಾರ್ಡ್ ಹಿಡಿಯುವುದಿಲ್ಲ. ನನಗೆ ನನ್ನದೆ ಆದ ಗುರುತು ಇದೆ ನಾನು ಸಹಾ ಕೃಷಿಕನಾಗಿ ಹೆಸರು ಮಾಡಿದ್ದೇನೆ ಎಂದು ಸೋಮಶೇಖರ್ ತಿಳಿಸಿದರು.

ಶಾಸಕರಾದ ರಘುಮೂರ್ತಿ ಮಾತನಾಡಿ, ಈ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದಿಂದ ಮೂರು ಜನ ಶಾಸಕರಿದ್ದಾರೆ. ಇಲ್ಲಿ ಶಾಸಕರು ಮತದಾನ ಮಾಡುವುದಿಲ್ಲ ಆದರೆ ಮತವನ್ನು ಕೂಡಿಸುವ ಕಾರ್ಯವನ್ನು ಮಾಡುತ್ತಾರೆ. ಸ್ಥಳೀಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳು ಇಲ್ಲಿ ಮತದಾರರಾಗಿರುತ್ತಾರೆ. ಇವರು ಕಾಂಗ್ರೇಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಹಿಂದಿನ ಶಾಸಕರು ಈ ಬಾರಿ ನಾನು ಸ್ಪರ್ಧೆ ಮಾಡುವುದಿಲ್ಲ ಬೇರೆಯವರಿಗೆ ಆವಕಾಶ ನೀಡುವಂತೆ ಹೇಳಿದಾಗ ಇವರಿಗೆ ಪಕ್ಷ ಟಿಕೇಟ್ ನೀಡಿದೆ. ಇಲ್ಲಿ ವಿಧಾನ ಪರಿಷತ್ ಸದಸ್ಯರು ಎಂ.ಎಲ್.ಎ. ರೀತಿಯಲ್ಲಿ ನೇರವಾಗಿ ಕೆಲಸ ಮಾಡುವುದಿಲ್ಲ ಆವರಿಗೆ ಬರುವ ಅನುದಾನವನ್ನು ತಮ್ಮ ಕ್ಷೇತ್ರದ ಅಭಿವೃದ್ದಿಗೆ ಎಂ.ಎಲ್.ಎ.ರವರ ಜೊತೆ ಗೂಡಿ ಕೆಲಸವನ್ನು ಮಾಡುತ್ತಾರೆ. ಇದರಿಂದ ಅವರು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಶಾಸಕ ರಘುಮೂರ್ತಿ ತಿಳಿಸಿದರು.

ಜಿಲ್ಲಾ ಡಿಸಿಸಿ ಅಧ್ಯಕ್ಷ ತಾಜ್‍ಪೀರ್ ಈ ಸಂದರ್ಭದಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಡಿಸೆಂಬರ್ 01 ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

  ಚಿತ್ರದುರ್ಗ. ನ.22: ಪ್ರಸಕ್ತ ಮುಂಗಾರು ಹಂಗಾಮಿನ ರಾಗಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಡಿಸೆಂಬರ್ 01 ರಿಂದ ನೋಂದಣಿ ಕಾರ್ಯ ಪ್ರಾರಂಭಿಸಲಾಗುವುದು. ಡಿ.31 ರವರೆಗೆ ನೋಂದಣಿ ನಡೆಯಲಿದೆ. ಪ್ರತಿ ಕ್ವಿಂಟಾಲ್

ಸತತ ಏರಿಕೆಯತ್ತ ಸಾಗುತ್ತಿದೆ ಚಿನ್ನದ ಬೆಲೆ : ಇಂದಿನ ದರ ಹೀಗಿದೆ..!

ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿ ಪಡುತ್ತಿರುವಾಗಲೇ ಇದೇನಿದು ಒಂದೇ ಸಮನೇ ಏರುತ್ತಲೇ ಇದೆ. ಅದರಲ್ಲೂ 70-80 ರೂಪಾಯಿ ಏರುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 70 ರೂಪಾಯಿ ಗ್ರಾಂಗೆ ಜಾಸ್ತಿಯಾಗಿದೆ. ಈ

ಚಿತ್ರದುರ್ಗ | ಯೋಗೀಶ್ ಸಹ್ಯಾದ್ರಿ ಬಿಜೆಪಿ ಸೇರ್ಪಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಉಪನ್ಯಾಸಕರು ಹಾಗೂ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ, ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿಯವರು ಬಿಜೆಪಿ

error: Content is protected !!