ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಮೇ. 04 : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 50 ವರ್ಷದ ರಾಜಕೀಯ ಜೀವನದ ಹಿನ್ನಲೆಯಲ್ಲಿ ಮೇ. 9 ರಂದು ಚಿತ್ರದುರ್ಗ ನಗರದ ಹೊರವಲಯದ ಶ್ರೀ ಮಾದರ ಚೆನ್ನಯ್ಯ ಗುರುಪೀಠದ ಪಕ್ಕದಲ್ಲಿರುವ ಮೈದಾನದಲ್ಲಿ ನಡೆಸಲು ಉದ್ದೇಶಿಸಿರುವ ಅಭೀಮಾನೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ಯಡಿಯೂರಪ್ಪ ರವರ ಅಭೀಮಾನಿಯೂರ್ವ ರಾಜ್ಯದಾದ್ಯಂತ ಬೈಕ್‍ನಲ್ಲಿ ಪ್ರವಾಸ ಮಾಡುವುದರ ಮೂಲಕ ಮೇ. 9 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಅಭೀಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವಂತೆ ಯಡೆಯೂರಪ್ಪ ಅಭೀಮಾನಿಗಳಿಗೆ ಆಹ್ವಾನವನ್ನು ನೀಡಲಾಗುತ್ತಿದೆ.

ವೃತ್ತಿಯಲ್ಲಿ ನ್ಯಾಯಾವಾದಿಯಾಗಿರುವ ಮೈಸೂರಿನ ಛಲವಾದಿ ಕರಿಯಪ್ಪ ತನ್ನ ಬದುಕಿನಲ್ಲಿ ಯಡೆಯೂರಪ್ಪ ರವರು ಮುಖ್ಯಮಂತ್ರಿಯಾಗಿದ್ದಾಗ ಹಲವಾರು ರೀತಿಯಲ್ಲಿ ಉಪಯೋಗವನ್ನು ಪಡೆದಿದ್ದಾರೆ. ವಿದ್ಯಾರ್ಥಿ ಯಾಗಿದ್ದಾಗ ಉಚಿತವಾಗಿ ಸೈಕಲ್‍ನ್ನು ನೀಡಿದರು. ಹೆಣ್ಣು ಮಕ್ಕಳು ಯಾರಿಗೂ ಸಹಾ ಹೊರೆಯಾಗ ಬಾರದೆಂದು ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿ ಮಾಡಿದರು. ಕುಡಿಯವ ನೀರಿನ ಬೇಗೆಯಿಂದ ಬಳಲುತ್ತಿದ್ದ ಚಿತ್ರದುರ್ಗ ಜಿಲ್ಲೆಗೆ ಅಪ್ಪರ್‍ಭದ್ರಾ ಮೇಲ್ದಂಡೆಯನ್ನು ಜಾರಿ ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದ್ದಾರೆ. ಇದ್ದಲ್ಲದೆ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಜಾರಿಯಲ್ಲಿಯೂ ಮುಂಚೂಣಿಯನ್ನು ವಹಿಸಿದ್ದರು ಇಷ್ಟೇ ಅಲ್ಲದೆ ರೈತರಿಗಾಗಿ ಪ್ರತ್ಯೇಕವಾದ ಆಯವ್ಯಯವನ್ನು ಮಂಡಿಸಿದ ಕೀರ್ತೀ ಯಡೆಯೂರಪ್ಪ ರವರಿಗೆ ಸಲ್ಲುತ್ತದೆ ಎಂದರು.
ರಾಜ್ಯದ 31 ಜಿಲ್ಲೆಗಳನ್ನು ಸುಮಾರು 4500 ಕಿ,ಮೀನ್ನು ಎಂಟು ದಿನಗಳಲ್ಲಿ ಪೂರ್ಣ ಮಾಡುವುದರ ಮೂಲಕ ಆ ಭಾಗದ ಜನತೆಗೆ ಮೇ.9 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಯಡೆಯೂರಪ್ಪರವರ ಅಭೀಮಾನೋತ್ಸವಕ್ಕೆ ಆಗಮಿಸುವಂತೆ ಮನವಿ ಮಾಡಲಾಗುವುದು, ಈಗಾಗಲೇ ಮೇ, 2 ರಂದು ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜೇಯೇಂದ್ರ ರವರು ಮೈಸೂರಿನಲ್ಲಿ ಸುತ್ತೂರು ಮಠದಲ್ಲಿ ನನ್ನ ಯಾತ್ರೆಗೆ ಚಾಲನೆಯನ್ನು ನೀಡಿದರು. ಈಗಾಗಲೇ ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮಾರ್ಗವಾಗಿ ಇಂದು ಚಿತ್ರದುರ್ಗವನ್ನು ತಲುಪಲಾಗಿದೆ ಮುಂದೆ ದಾವಣಗೆರೆ, ಹಾವೇರಿ ಮೂಲಕ ಉಳಿದ ಜಿಲ್ಲೆಗಳಲ್ಲಿ ಪ್ರವಾಸವನ್ನು ಮಾಡುವುದರ ಮೂಲಕ ಮೇ.9ಕ್ಕೆ ವಾಪಾಸ್ಸ್ ಚಿತ್ರದುರ್ಗಕ್ಕೆ ಬರಲಾಗುವುದು ಎಂದ ಅವರು ನಾನು ಹೊಂದ ಕಡೆಯಲ್ಲಿ ಎಲ್ಲಾ ಯಡೆಯೂರಪ್ಪರವರ ಹೆಸರು ಹೇಳಿದರೆ ಸಾಕು ಜನ ಕೈಮುಗಿಯುತ್ತಾರೆ ಆತ ಒಳ್ಳೆಯ ಮನುಷ್ಯ ಎನ್ನುತ್ತಾರೆ ನಾವು ಸಹಾ ಕಾರ್ಯಕ್ರಮಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಕರಿಯಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ್ ಬೇದ್ರೇ, ಕಾರ್ಯಕರ್ತ ಯಶವಂತ ಉಪಸ್ಥಿತರಿದ್ದರು.



















