Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಗ್ ಬಾಸ್ ಧನುಶ್ ಗೆ ಬಾಲ್ಯದಲ್ಲಿಯೇ ನಿಶ್ಚಿತಾರ್ಥ : ತಾಯಿ ಹೇಳಿದ್ದೇನು..?

---Advertisement---

ಬೆಂಗಳೂರು: ಬಿಗ್ ಬಾಸ್ ಇನ್ನೇನು ಕೆಲವೇ ದಿನಗಳ ಜರ್ನಿಯಾಗಿದೆ. ಒಳಗಿರುವ ಸ್ಪರ್ಧಿಗಳು ಬಹುದೂರ ಸಾಗಿ ಬಂದಿದ್ದಾರೆ. ಮನೆಯವರ ಸಂಪರ್ಕವಿಲ್ಲ, ಸ್ನೇಹಿತರ ಸಾಂಗತ್ಯವಿಲ್ಲ. ಎದ್ರು ಅದೇ ಮುಖ, ಕೂತರು ಅದೇ ಮುಖಗಳು. ಅಂದ್ರೆ ಮನೆಯ ಒಳಗೆ ಓಡಾಟ, ಟಾಸ್ಕ್, ಮಾತು ಎಲ್ಲಾ. ಹೊರಗಿನ ಪ್ರಪಂಚವೇ ಮರೆತು ಹೋಗಿರುವ ಸ್ಪರ್ಧಿಗಳಿಗೆ ಮನೆಯವರ ಅಪ್ಪುಗೆ ಸಿಕ್ಕರೆ ಹೇಗಿರುತ್ತೆ ಹೇಳಿ. ಇನ್ನು ಕೆಲವೇ ದಿನಗಳಲ್ಲಿ ಕಪ್ ಗೆಲ್ಲೋರು ಯಾರು ಎಂದು ತಿಳಿಯುವುದಿದೆ. ಅದಕ್ಕೆ ಇನ್ನಷ್ಟು ಶಕ್ತಿ ಸ್ಪರ್ಧಿಗಳಿಗೆ ಬೇಕಾಗಿದೆ.

ಕೊಂಚ ಜುಗ್ಗಿದ ಮನಸ್ಸುಗಳಿಗೆ ಶಕ್ತಿ ತುಂಬಲು ಬಿಗ್ ಬಾಸ್ ಮನೆಯೊಳಗೆ ಕುಟುಂಬಸ್ಥರು ಬಂದಿದ್ದಾರೆ. ಫ್ಯಾಮಿಲಿ ರೌಂಡ್ ಶುರುವಾಗಿದೆ‌. ಈ ಸಂದರ್ಭದಲ್ಲಿಯೇ ಧನುಶ್ ಅವರ ಸೀಕ್ರೇಟ್ ರಿವೀಲ್ ಆಗಿದೆ. ಅದರಲ್ಲೂ ಬಾಲ್ಯದಲ್ಲಿಯೇ ಎಂಗೇಜ್ಮೆಂಟ್ ಆದ ವಿಚಾರ ರಿವೀಲ್ ಆಗಿದೆ.

ಧನುಶ್ ಗೆ ಒಂದು ಟಾಸ್ಕ್ ಇತ್ತು. ಅವರ ಮನರಯಿಂದ ಇಬ್ಬರನ್ನ ಬಿಗ್ ಬಾಸ್ ಕರೆಸಿದ್ದರು. ಹೆಂಡತಿ ಹಾಗೂ ಅಮ್ಮ. ಧನುಶ್ ಮುಂದೆ ಒಬ್ಬರನ್ನು ಆಯ್ಕೆ ಮಾಡಲು ಸೂಚಿಸಲಾಗಿತ್ತು. ಎಷ್ಟು ಕಷ್ಟದ ಸಮಯ. ತುಂಬಾ ಯೋಚಿಸಿ, ಮನಸ್ಸಿಗೆ ನೋವಾದರೂ ಮೊದಲು ಅಮ್ಮ ಎಂದು ಅಮ್ಮನನ್ನೇ ಚೂಸ್ ಮಾಡಿದರು. ಮನೆ ಒಳಗೆ ಬಂದ ಅಮ್ಮ ಈ ಸೀಕ್ರೆಟ್ ಹೇಳಿದ್ದಾರೆ. ನನ್ನ ಸೊಸೆಯನ್ನೇ ಆಯ್ಕೆ‌ ಮಾಡಿಕೊಂಡಿದ್ದರು ಬೇಜಾರಿರಲಿಲ್ಲ‌. ನಾನು ಮೆಚ್ಚಿದ ಸೊಸೆ. ಮಗುವಾಗಿದ್ದಾಗಿನಿಂದ ಇವರಿಬ್ಬರೇ ಗಂಡ ಹೆಂಡತಿ ಅಂತ ತೀರ್ಮಾನಿಸಿದ್ದೆವು. ಅವಳ ನಾಮಕರಣಕ್ಕೆ ಇವನಿಂದಾನೇ ಉಂಗುರ ಹಾಕಿಸಿ, ಅಂದೇ ನಿಶ್ಚಿತಾರ್ಥ ಮಾಡಿದ್ದೆವು ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now