Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಗ್‌ಬಾಸ್‌ 13ಕ್ಕೆ ಜನಸಾಮಾನ್ಯರಿಗೂ ಅವಕಾಶ; ಆಡಿಷನ್ ಭಾಗವಹಿಸೊದು ಹೇಗೆ ?

---Advertisement---

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಹೊಸ ಸೀಸನ್‌ಗೆ ಸಜ್ಜಾಗಿದ್ದು, ಈ ಬಾರಿ ವೀಕ್ಷಕರಿಗೆ ವಿಶೇಷ ಅಚ್ಚರಿಯೊಂದನ್ನು ನೀಡಿದೆ. ಇದುವರೆಗೆ ಸಿನಿಮಾ, ಧಾರಾವಾಹಿ ಹಾಗೂ ಸಾಮಾಜಿಕ ಜಾಲತಾಣಗಳ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಾಗಿದ್ದ ಬಿಗ್‌ಬಾಸ್‌ ಮನೆಗೆ ಇದೀಗ ಜನಸಾಮಾನ್ಯರಿಗೂ ಪ್ರವೇಶದ ಅವಕಾಶ ಕಲ್ಪಿಸಲಾಗಿದೆ.

ಯಶಸ್ವಿಯಾಗಿ 12 ಸೀಸನ್‌ಗಳನ್ನು ಪೂರ್ಣಗೊಳಿಸಿರುವ ಬಿಗ್‌ಬಾಸ್‌ ಇದೀಗ 13ನೇ ಸೀಸನ್‌ಗೆ ಸಿದ್ಧವಾಗಿದ್ದು, ಈ ಕುರಿತು ಕಲರ್ಸ್‌ ಕನ್ನಡ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಈ ಬಾರಿ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯ ಜನರೂ ಸ್ಪರ್ಧಿಗಳಾಗಿ ಭಾಗವಹಿಸಬಹುದಾಗಿದೆ.
ಕಲರ್ಸ್‌ ಕನ್ನಡ ಬಿಡುಗಡೆ ಮಾಡಿದ ಪ್ರೋಮೋದಲ್ಲಿ, “ಅವಕಾಶ ಸಿಗದ ಆಸೆಗಳಿಗೆ ಅರ್ಥವೇ ಇಲ್ಲ. ಈ ಬಾರಿ ನಿಮ್ಮಂತಹ ಸಾಮಾನ್ಯರ ಕನಸುಗಳಿಗೆ ರೆಕ್ಕೆ ಕಟ್ಟಲು ಬಿಗ್‌ಬಾಸ್‌ ಸಜ್ಜಾಗಿದೆ. ಕೈತಟ್ಟಿ ಪ್ರೋತ್ಸಾಹಿಸುವುದು ಸಾಕು, ಈಗ ಅಖಾಡಕ್ಕಿಳಿಯುವ ಸಮಯ ಬಂದಿದೆ” ಎಂದು ಹೇಳುವ ಮೂಲಕ ಜನರನ್ನು ಆಡಿಷನ್‌ನಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.

ಆಡಿಷನ್‌ನಲ್ಲಿ ಭಾಗವಹಿಸುವುದು ಹೇಗೆ?
ಬಿಗ್‌ಬಾಸ್‌ ಮನೆಯೊಳಗೆ ತಾವು ಏಕೆ ಇರಬೇಕು ಎಂಬುದನ್ನು ವಿವರಿಸುವ 3 ನಿಮಿಷಗಳ ವಿಡಿಯೋ ಸಿದ್ಧಪಡಿಸಿ, ತಮ್ಮ ಪರಿಚಯ ಹಾಗೂ ವಿವರಗಳೊಂದಿಗೆ Colors Kannada – JioStar ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು.
ಅದಕ್ಕಾಗಿ ಮೊದಲು ವೆಬ್‌ಸೈಟ್‌ಗೆ ಭೇಟಿ ನೀಡಿ ಮೊಬೈಲ್‌ ಸಂಖ್ಯೆ ನಮೂದಿಸಬೇಕು. ಬಳಿಕ OTP ಮೂಲಕ ದೃಢೀಕರಣ ಪೂರ್ಣಗೊಳಿಸಿ ಅರ್ಜಿ ಸಲ್ಲಿಸಬಹುದು. OTP ಬರದಿದ್ದರೆ ಮೊಬೈಲ್‌ನಲ್ಲಿ DND (Do Not Disturb) ಸಕ್ರಿಯವಾಗಿರಬಹುದಾದ ಕಾರಣ, ಸಂಬಂಧಿತ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಸೂಚಿಸಲಾಗಿದೆ.ಈ ಘೋಷಣೆಯೊಂದಿಗೆ ಬಿಗ್‌ಬಾಸ್‌ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿದ್ದು, ಸಾಮಾನ್ಯ ಜನರಿಗೂ ತಮ್ಮ ಪ್ರತಿಭೆ ಪ್ರದರ್ಶಿಸಲು ದೊಡ್ಡ ವೇದಿಕೆ ಸಿಗುವಂತಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now