ಭೀಮಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ

1 Min Read

 

 

ವರದಿ ಮತ್ತು ಫೋಟೋ ಕೃಪೆ
ವೇದಮೂರ್ತಿ, ಭೀಮಸಮುದ್ರ,
ಮೊ :  98808 36505

ಸುದ್ದಿಒನ್, ಚಿತ್ರದುರ್ಗ, (ಆ.09) : ಭೀಮಸಮುದ್ರ ಗ್ರಾಮ ಪಂಚಾಯಿತಿ ಇಂದು ಅಧ್ಯಕ್ಷರಾಗಿ ಶ್ರೀಮತಿ ರಾಧಾ
(ಎಸ್ ಟಿ ಮಹಿಳೆ) ಉಪಾಧ್ಯಕ್ಷರಾಗಿ ಉಮೇಶ್ (ಎಸ್ ಟಿ ಪುರುಷ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು
ಚುನಾವಣಾ ಅಧಿಕಾರಿ ಹನುಮಂತಪ್ಪ ಘೋಷಿಸಿದರು.

ಈ ಸಂದರ್ಭದಲ್ಲಿ  ಬಿಜೆಪಿ ಮುಖಂಡ ಜಿ.ಎಸ್.ಅನಿತ್ ಕುಮಾರ್ ಮಾತನಾಡಿ ಅಧ್ಯಕ್ಷರಾಗಿ ಮಹಿಳೆಗೆ ಉಪಾಧ್ಯಕ್ಷರಾಗಿ ಪುರುಷರಿಗೆ ಅದರಲ್ಲೂ ಎಸ್ಟಿ ಮೀಸಲಾತಿ ಬಂದಿರುವುದು ಬಹಳ ಸಂತೋಷಕರ. ಮುಂದಿನ ದಿನಗಳಲ್ಲಿ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಒಳ್ಳೆಯ ಕೆಲಸಗಳನ್ನು ಮಾಡಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಸರನ್ನು ತರಲಿ ಎಂದು ಶುಭ ಕೋರಿದರು.

ಮಾಜಿ ಉಪಾಧ್ಯಕ್ಷ ಶರತ್ ಪಟೇಲ್ ಮಾತನಾಡಿ ಗ್ರಾಮದ ಎಲ್ಲಾ ಮುಖಂಡರು ಸೇರಿ ಇವರನ್ನು ಆಯ್ಕೆ ಮಾಡಿದ್ದೇವೆ. ಗ್ರಾಮ ಪಂಚಾಯಿತಿಯಲ್ಲಿ ಒಳ್ಳೆಯ ಕೆಲಸವನ್ನು ಮಾಡಲಿ ಎಂದು ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಶುಭಾಶಯ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಜಿ. ಪಾರ್ವತಮ್ಮ ಎಂ. ಶಾಂತಕುಮಾರಿ ಟಿ.ಜಿ.ಅಶೋಕ್,  ಪಾಲಕ್ಷಮ್ಮ, ಲಿಂಗರಾಜು,  ಎಮ್. ಆರ್. ರಮೇಶ್,  ಬಿ.ಕೆ. ಕಾವ್ಯ,  ದೇವೇಂದ್ರ ನಾಯಕ್,  ದ್ರಾಕ್ಷಾಯಣಮ್ಮ,  ಜಿ. ನಾಗರಾಜ್,  ಗೀತಾ,  ಟಿ. ವಿ.ಮಂಜುನಾಥ್ ಸಾಕಮ್ಮ,  ಕೆ.ಎಸ್. ಸಿಂಧು ಕುಮಾರಿ, ಪ್ರಕಾಶ್, ಎನ್. ಸಿದ್ದಗಂಗಮ್ಮ,  ಡಿ.ಎಂ. ರಾಘವೇಂದ್ರ, ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *