ವರದಿ ಮತ್ತು ಫೋಟೋ ಕೃಪೆ
ವೇದಮೂರ್ತಿ, ಭೀಮಸಮುದ್ರ,
ಮೊ : 98808 36505
ಸುದ್ದಿಒನ್, ಚಿತ್ರದುರ್ಗ, (ಆ.09) : ಭೀಮಸಮುದ್ರ ಗ್ರಾಮ ಪಂಚಾಯಿತಿ ಇಂದು ಅಧ್ಯಕ್ಷರಾಗಿ ಶ್ರೀಮತಿ ರಾಧಾ
(ಎಸ್ ಟಿ ಮಹಿಳೆ) ಉಪಾಧ್ಯಕ್ಷರಾಗಿ ಉಮೇಶ್ (ಎಸ್ ಟಿ ಪುರುಷ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು
ಚುನಾವಣಾ ಅಧಿಕಾರಿ ಹನುಮಂತಪ್ಪ ಘೋಷಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಜಿ.ಎಸ್.ಅನಿತ್ ಕುಮಾರ್ ಮಾತನಾಡಿ ಅಧ್ಯಕ್ಷರಾಗಿ ಮಹಿಳೆಗೆ ಉಪಾಧ್ಯಕ್ಷರಾಗಿ ಪುರುಷರಿಗೆ ಅದರಲ್ಲೂ ಎಸ್ಟಿ ಮೀಸಲಾತಿ ಬಂದಿರುವುದು ಬಹಳ ಸಂತೋಷಕರ. ಮುಂದಿನ ದಿನಗಳಲ್ಲಿ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಒಳ್ಳೆಯ ಕೆಲಸಗಳನ್ನು ಮಾಡಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಸರನ್ನು ತರಲಿ ಎಂದು ಶುಭ ಕೋರಿದರು.
ಮಾಜಿ ಉಪಾಧ್ಯಕ್ಷ ಶರತ್ ಪಟೇಲ್ ಮಾತನಾಡಿ ಗ್ರಾಮದ ಎಲ್ಲಾ ಮುಖಂಡರು ಸೇರಿ ಇವರನ್ನು ಆಯ್ಕೆ ಮಾಡಿದ್ದೇವೆ. ಗ್ರಾಮ ಪಂಚಾಯಿತಿಯಲ್ಲಿ ಒಳ್ಳೆಯ ಕೆಲಸವನ್ನು ಮಾಡಲಿ ಎಂದು ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಜಿ. ಪಾರ್ವತಮ್ಮ ಎಂ. ಶಾಂತಕುಮಾರಿ ಟಿ.ಜಿ.ಅಶೋಕ್, ಪಾಲಕ್ಷಮ್ಮ, ಲಿಂಗರಾಜು, ಎಮ್. ಆರ್. ರಮೇಶ್, ಬಿ.ಕೆ. ಕಾವ್ಯ, ದೇವೇಂದ್ರ ನಾಯಕ್, ದ್ರಾಕ್ಷಾಯಣಮ್ಮ, ಜಿ. ನಾಗರಾಜ್, ಗೀತಾ, ಟಿ. ವಿ.ಮಂಜುನಾಥ್ ಸಾಕಮ್ಮ, ಕೆ.ಎಸ್. ಸಿಂಧು ಕುಮಾರಿ, ಪ್ರಕಾಶ್, ಎನ್. ಸಿದ್ದಗಂಗಮ್ಮ, ಡಿ.ಎಂ. ರಾಘವೇಂದ್ರ, ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












