Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭಾರತ ಜೋಡೋ ಯಾತ್ರೆ : ಚಿತ್ರದುರ್ಗ ಜಿಲ್ಲೆಯಲ್ಲಿ ಅ.12 ರಿಂದ 18 ರವರೆಗೂ ಸಂಚಾರ : ಮಾಜಿ ಸಚಿವ ಎಚ್.ಅಂಜನೇಯ

Facebook
Twitter
Telegram
WhatsApp

 

ವರದಿಮತ್ತುಫೋಟೋ,ಸುರೇಶ್ ಪಟ್ಟಣ್, ಮೊ 87220 22817


ಚಿತ್ರದುರ್ಗ(ಸೆ. 26) :  ಕಳೆದ 1 ರಿಂದ ಕನ್ಯಾಕುಮಾರಿಯಿಂದ ಪ್ರಾರಂಭವಾಗಿರುವ ಭಾರತ ಐಕತ್ಯ ಯಾತ್ರೆಯಾದ ಭಾರತ್ ಜೋಡೋ ಯಾತ್ರೆಯೂ ಚಿತ್ರದುರ್ಗ ಜಿಲ್ಲೆಯಲ್ಲಿ ಅ. 12 ರಿಂದ 18ರವರೆಗೆ ಪ್ರವಾಸ ಮಾಡಲಿದ್ದು, ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ರೈತ, ಕಾರ್ಮಿಕ, ಸಾಹಿತಿ ಸೇರಿದಂತೆ ವಿವಿಧ ಮುಖಂಡರೊಂದಿಗೆ ಸಂವಾದವನ್ನು ನಡೆಸಲಿದ್ದಾರೆ ಎಂದು ಮಾಜಿ ಸಚಿವರಾದ ಎಚ್.ಅಂಜನೇಯ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಯಾತ್ರೆಗೆ ಕೇರಳ ಮತ್ತು ತಮಿಳುನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ದೊರತಿದೆ. ದೇಶ ಮತ್ತು ರಾಜ್ಯದಲ್ಲಿ ಆಡಳಿತವನ್ನು ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಆರಾಜಕತೆಯನ್ನೂ ಮೂಡಿಸಿದೆ. ಎಮರ್ಜೆನ್ಸಿ ವಾತಾವರಣವನ್ನು ನಿರ್ಮಾಣ ಮಾಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನು ಉಂಟು ಮಾಡಿದೆ. ಸಮಗ್ರತೆ, ಏಕತೆಗೆ ಮಾರಕವಾಗುತ್ತಿದೆ.

ಜನತೆಯ ಭಾವನೆ, ಸಂಪ್ರದಾಯಗಳಿಗೆ ಧಕ್ಕೆಯುಂಟಾಗುತ್ತಿದೆ. ಸಂವಿಧಾನದಲ್ಲಿ ಇವುಗಳ ಬಗ್ಗೆ ತಿಳಿ ಹೇಳಿದ್ದರು ಸಹಾ ಇದನ್ನು ಸರ್ಕಾರಗಳು ಉಲ್ಲಂಘಿಸಿದೆ. ಧರ್ಮವನ್ನು ಒಡೆಯುವ ರೀತಿಯಲ್ಲಿ ಕಾರ್ಯಗಳನ್ನು ಮಾಡುತ್ತಿದೆ. ತಾನು ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ.ದೇಶದ ಒಗ್ಗಟನ್ನು ಒಡೆಯುವ ಕಾರ್ಯವನ್ನು ಮಾಡುತ್ತಿದೆ ಎಂದು ಆರೋಪಿಸಿದರು.

ಭಾರತ ಜೋಡೋ ಯಾತ್ರೆ ಸೆ. 30 ರಂದು ಕರ್ನಾಟಕವನ್ನು ಗುಂಡುಪೇಟೆಯಿಂದ ಪ್ರವೇಶ ಮಾಡಲಿದೆ. ಶಿರಾ ಮೂಲಕ ಚಿತ್ರದುರ್ಗ ಗಡಿಯನ್ನು ಅ.12ರಂದು ಪ್ರವೇಶ ಮಾಡಲಿದೆ.
ಅಲ್ಲಿಂದ 18ರವರೆಗೆ ಐದು ದಿನಗಳ ಕಾಲ ಯಾತ್ರೆ ಜಿಲ್ಲೆಯಲ್ಲಿ ಸಂಚಾರ ಮಾಡಲಿದೆ. ಹಿರಿಯೂರು, ಚಳ್ಳಕೆರೆ, ತಳಕು, ರಾಂಪುರ ಮಾರ್ಗವಾಗಿ ರಾಯಚೂರಿನಿಂದ ತೆಲಗಾಣ ರಾಜ್ಯವನ್ನು ಪ್ರವೇಶ ಮಾಡಲಿದೆ. ಇಲ್ಲಿ ಯಾತ್ರೆ ಸಂಚಾರ ಮಾಡುವವರೆಗೂ 60 ವಿಧಾನ ಸಭಾ ಕ್ಷೇತ್ರದಿಂದ ಜನತೆ ಬಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಅಪ್ಪರ್ ಭದ್ರಾ ಯೋಜನೆಗೆ ಸಂಬಂದಪಟ್ಟಂತೆ, ರೈತ, ಕಾರ್ಮಿಕ, ಸಾಹಿತಿಗಳು ಸೇರಿದಂತೆ ವಿವಿಧ ಮುಖಂಡರೊಂದಿಗೆ ಸಂವಾದ ಮಾಡಲಿದ್ದಾರೆ ಎಂದು ಅಂಜನೇಯ ತಿಳಿಸಿದರು.

ಪೂರ್ವ ಭಾವಿ ಸಭೆ ; ಯಾತ್ರೆಯ ಅಂಗವಾಗಿ ಸ್ಥಳ ಮತ್ತು ಸಿದ್ದತೆಯ ಬಗ್ಗೆ ಪರೀಶಿಲನೆಗಾಗಿ ಅ. 27 ರಂದು ನಗರದ ತಿರುಮಲ ಕಲ್ಯಾಣ ಮಂಟಪದಲ್ಲಿ ಪೂರ್ವಬಾವಿ ಸಭೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ. ಈ ಸಭೆಯಲ್ಲಿ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಸುರ್ಜಿವಾಲ, ಸಲೀಂ ಆಹ್ಮದ್, ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಇತರೆ ಮುಖಂಡರು ಭಾಗವಹಿಸಿ ಯಾತ್ರೆಯ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.

ಗೋಷ್ಟಿಯಲ್ಲಿ ಕೆಪಿಸಿಸಿ ಸದಸ್ಯರಾದ ಬಸವರಾಜ್, ಜಿಲ್ಲಾಧ್ಯಕ್ಷ ತಾಜ್‍ಪೀರ್ ಮುಖಂಡರುಗಳಾದ ಮಹಡಿ ಶಿವಮೂರ್ತಿ, ಲಕ್ಷ್ಮೀಕಾಂತ್, ಸುದರ್ಶನ್, ಮೈಲಾರಪ್ಪ, ಸಂಪತ್, ನಾಗರಾಜ್, ನರಸಿಂಹರಾಜು, ರವಿಕುಮಾರ್, ಮುದಸಿರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

Vastu Tips : ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿಗೆ ಇಟ್ಟರೆ ಒಳ್ಳೆಯದು ಗೊತ್ತಾ ?

ಸುದ್ದಿಒನ್ : ವಾಸ್ತು ಎಂದರೆ ಮನೆಗೆ ಮಾತ್ರವಲ್ಲದೇ ಮನೆಯಲ್ಲಿ ಇರುವ  ವಸ್ತುಗಳಿಗೂ ಕೂಡ ಅನ್ವಯಿಸುತ್ತದೆ.  ವಸ್ತುಗಳನ್ನು ಇರಿಸುವ ದಿಕ್ಕನ್ನು ಅವಲಂಬಿಸಿ, ಮನೆಗೆ ನಷ್ಟ ಮತ್ತು ಲಾಭವನ್ನು ಅಂದಾಜಿಸುತ್ತಾರೆ. ವಾಸ್ತು ಪ್ರಕಾರ, ಅನೇಕ ರೀತಿಯ ವಸ್ತುಗಳನ್ನು

ದಿನಕ್ಕೆ 2 ಬಾರಿ ಈ ಪಾನೀಯವನ್ನು ಕುಡಿದರೆ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ…!

ಸುದ್ದಿಒನ್ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಧಿಕ ದೇಹದ ತೂಕದ ಬಗ್ಗೆ ಚಿಂತಿಸುತ್ತಿದ್ದಾರೆ. ತೂಕವು ನಿಯಂತ್ರಣದಲ್ಲಿದ್ದರೂ, ಜನರು ಸಾಮಾನ್ಯವಾಗಿ ಬೊಜ್ಜಿನ ಬಗ್ಗೆ ಚಿಂತಿಸುತ್ತಾರೆ. ಅಧಿಕ ತೂಕ ಅಥವಾ ಸ್ಥೂಲಕಾಯತೆಯು ಅಸಹ್ಯವಾಗಿ ಕಾಣುವುದಲ್ಲದೆ, ನಡೆಯಲು ಕಷ್ಟವಾಗುತ್ತದೆ.

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….   ಬುಧವಾರ ರಾಶಿ ಭವಿಷ್ಯ -ಮೇ-8,2024 ಸೂರ್ಯೋದಯ: 05:50, ಸೂರ್ಯಾಸ್ತ : 06:34 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079, ಚೈತ್ರಮಾಸ,

error: Content is protected !!