ಭಜರಂಗದಳ ಕಾರ್ಯಕರ್ತ ಹರ್ಷ ಅಂತಿಮಯಾತ್ರೆಯಲ್ಲಿ ಜನವೋ ಜನ..!

suddionenews
1 Min Read

ಶಿವಮೊಗ್ಗ: ನಿನ್ನೆ ರಾತ್ರಿ ಟೀ ಕುಡಿಯುತ್ತಾ ನಿಂತಿದ್ದಾಗ ಭಜರಂಗದಳ ಕಾರ್ಯಕರ್ತ ಹರ್ಷ ಅವರ ಮೇಲೆ ದಾಳಿ ನಡೆದಿತ್ತು. ಸ್ಥಳದಲ್ಲೇ ಕುಸಿದು ಬಿದ್ದಿದ್ದ ಹರ್ಷ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಪ್ರಯೋಜನವಾಗಲಿಲ್ಲ. ಇದೀಗ ವಿದ್ಯಾನಗರ ರೋಟರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿದೆ.

ಕಾಳಿ ಸ್ವಾಮಿ ನೇತೃತ್ವದಲ್ಲಿ ಕ್ಷತ್ರೀಯ ಸಂಪ್ರದಾಯದಂತೆ ವಿಧಿವಿಧಾನಗಳನ್ನ ಮಾಡಿ, ಅಂತ್ಯಸಂಸ್ಕಾರ ಮಾಡಲಾಗಿದೆ. ಇನ್ನು ಹರ್ಷ ಅಂತ್ಯ ಸಂಸ್ಕಾರಕ್ಕೂ ಮುನ್ನ ಮೆರವಣಿಗೆ ಮಾಡಲಾಯಿತು.

ಸುಮಾರು 5 ಕಿಲೋ ಮೀಟರ್ ವರೆಗೆ ಹರ್ಷ ಮೃತ ದೇಹವನ್ನ ಮೆರವಣಿಗೆ ಮಾಡಿ ಸಾಗಿಸಲಾಗಿತ್ತು. ಈ ವೇಳೆ ಹಾದಿಯುದ್ದಕ್ಕೂ ಜನಸ್ತೋಮವೇ ನೆರೆದಿತ್ತು. ಅಷ್ಟೇ ಅಲ್ಲ ಮೆರವಣಿಗೆಯಲ್ಲಿ ಸಚಿವ ಕೆ ಎಸ್ ಈಶ್ವರಪ್ಪ, ಸಂಸದ ಬಿ ವೈ ರಾಘವೇಂದ್ರ ಕೂಡ ಭಾಗವಹಿಸಿದ್ದರು.

ಇನ್ನು ಶಿವಮೊಗ್ಗದಲ್ಲಿ ಪರಿಸ್ಥಿತಿ ನಿರೀಕ್ಷೆಗೂ ಮೀರಿತ್ತು. ಜನಸ್ತೋಮದ ನಡುವೆ ಅಹಿತಕರ ಘಟನೆಗಳು ನಡೆದಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನೆರೆದಿದ್ದರು ಕೂಡ, ಕಲ್ಲು ತೂರಾ, ಹೊಡೆದಾಟದಂತ ಘಟನೆಗಳು ನಡೆದಿವೆ. ಹಾಗೋ ಹೀಗೋ ಪರಿಸ್ಥಿತಿ ನಿಯಂತ್ರಿಸಿ, ಅಂತ್ಯಸಂಸ್ಕಾರವನ್ನ ನೆರವೇರಿಸಿದ್ದಾರೆ. ಹರ್ಷ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *