ವಿಜಯಪುರ: ಜಿಲ್ಲೆಯ ಜನರನ್ನು ನಡುಗಿಸುವ ಭೀಕರ ಹತ್ಯೆಯೊಂದು ನಡೆದು ಹೋಗಿದೆ. ಭೀಮಾತೀರದ ಹಂತಕ, ರೌಡಿಶೀಟರ್, ಕುಖ್ಯಾತ ನಟೋರಿಯಸ್ ಎನಿಸಿಕೊಂಡಿದ್ದ 50 ವರ್ಷದ ಬಾಗಪ್ಪ ಹರಿಜನ ಭೀಕರ ಕೊಲೆಯಾಗಿದ್ದಾನೆ. ನಗರದ ರೇಡಿಯೋ ಕೇಂದ್ರದ ಬಳಿ ಬಾಗಪ್ಪನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಹಲವು ಕೊಲೆ ಮತ್ತು ದರೋಡೆಗಳನ್ನು ಮಾಡಿರುವ ಕೇಸುಗಳು ಬಾಗಪ್ಪ ಹರಿಜನ ಮೇಲಿವೆ. ಈತನನ್ನು ಮಂಗಳವಾರ ರಾತ್ರಿ ಅಟ್ಯಾಕ್ ಮಾಡಿದ್ದು, ಆತನ ಮುಖ, ಕೈಗಳು, ದೇಹವನ್ನು ಕೊಚ್ವಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಎಲ್ಲಾ ಆಯಾಮದಿಂದಾನೂ ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ ಬಾಗಪ್ಪ ಪುತ್ರಿಯರಿಗೆ ಮನೆ ಕೆಲಸದಾಕೆ ಮೇಲೆಯೇ ಅನುಮಾನ ಮೂಡಿದೆ.
![](https://suddione.com/content/uploads/2024/10/gifmaker_me-5-1.gif)
ಬಾಗಪ್ಪ ಹರಿಜನ್ ವಿಜಯಪುರ ಹೊರವಲಯದ ಮದೀನಾ ನಗರದಲ್ಲಿ ಬಾಡಿಗೆ ಮನೆಯಲಗಲಿದ್ದ. ಅಡುಗೆ ಕೆಲಸಕ್ಕಾಗಿ ತನ್ನ ಸಂಬಂಧಿಯೇ ಆಗಿದ್ದಂತ ಸಂಜನಾ ಎಂಬಾಕೆಯನ್ನು ನೇಮಕ ಮಾಡಲಾಗಿತ್ತು. ವಿಜಯಪುರದಲ್ಲಿ ಬಾಡಿಗೆ ಮನೆ ಮಾಡಿರುವುದು ಬಾಗಪ್ಪನ ವಿರೋಧಿಗಳಿಗೆ ತಿಳಿದಿರಲಿಲ್ಲ. ಆದರೂ ಏಕಾಏಕಿ ಬಾಗಪ್ಪನ ಮೇಲೆ ಮಂಗಳವಾರ ದಾಳಿ ನಡೆದಿದೆ. ಹೀಗಾಗಿ ಮನೆ ಕೆಲದಾಕೆ ಮೇಲೆ ಅನುಮಾನ ಮೂಡಿದೆ.
ಈ ಸಂಬಂಧ ಗಂಗೂಬಾಯಿ ಹಾಗೂ ಇಂದ್ರಾಬಾಯಿ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಸಂಜನಾಳ ಮೇಲೆ ನಮಗೆ ಅನುಮಾನವಿದೆ. ಯಲ್ಲಪ್ಪನ ಹರಿಜನ ಮಗ ಭೀಮಶಿ ಹರಿಜನ ಇವರೆಲ್ಲರೂ ಸೇರಿ ಹತ್ಯೆ ಮಾಡಿರಬಹುದು. ಹಾಗೆ ನಮ್ಮ ತಂದೆ ಹತ್ಯೆ ಬಳಿಕ ಅವರ ಫೋಟೋವನ್ನು ಪಿಂಟ್ಯೂ ಅಲಿಯಾಸ್ ಪ್ರಕಾಶ್ ಹಾಕಿಕೊಂಡಿದ್ದ. ನನ್ನ ಸಹೊಇದರನ ಆತ್ಮಕ್ಕೆ ಶಾಂತಿ ಸಿಕ್ತು ಅಂತ ಸ್ಟೇಟಸ್ ಹಾಕಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
![](https://suddione.com/content/uploads/2025/02/site.webp)