ಗ್ರಾಮೀಣ ಭಾಗದವರಾದ್ರೆ ಈ ಕುಂಬಳಕಾಯಿ ಬೀಜವನ್ನ ಸೇವಿಸಿರುವ ನೆನಪು ಇದ್ದೇ ಇರುತ್ತದೆ. ಮನೆಗೆ ಅಡುಗೆಗೆಂದು ಕುಂಬಳಕಾಯಿ ಕತ್ತರಿಸಿದರೆ, ಆ ಬೀಜವನ್ನ ಶೇಖರಿಸಿ, ಒಣಗಿಸಿ, ಟೈಮ್ ಪಾಸ್ ಗೆ ಅಂತ ತಿಂದವರು ಸುಮಾರು ಜನ ಇದ್ದಾರೆ. ಆದರೆ ಈಗಿನ ಪೀಳಿಗೆಯಲ್ಲಿ ಡಯೆಟ್ ಪರ್ಪಸ್ ನಲ್ಲೂ ಕುಂಬಳಕಾಯಿ ಬೀಜವನ್ನು ತಿನ್ನುತ್ತಾರೆ. ಈ ಬೀಜವನ್ನ ಶೇಖರಿಸಿಟ್ಟು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವು ಪ್ರಯೋಜನಗಳು ಇದಾವೆ. ಏನೆಲ್ಲಾ ಲಾಭವಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

* ಕುಂಬಳಕಾಯಿ ಬೀಜದಲ್ಲಿ ಕ್ಯಾಲ್ಸಿಯಂ ಅಗಾಧವಾಗಿದೆ. ವಿಟಮಿನ್ ಸಿ ಸಿಗಲಿದೆ. ಐರನ್ ಅಂಶವೂ ಇದೆ. ಹೀಗಾಗಿ ಈಗಿನ ಪೀಳಿಗೆಯ ಮಕ್ಕಳಿಗೆ ಈ ಕುಂಬಳಕಾಯಿ ಬೀಜ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಯಾಕಂದ್ರೆ ಸಾಕಷ್ಟು ಜನರು ಐರನ್, ಕ್ಯಾಲ್ಸಿಯಂ ಸಮಸ್ಯೆಯಿಂದ ಬಳಲುತ್ತಿರುವವರೇ ಹೆಚ್ಚು. ಮೂಳೆ ಸಮಸ್ಯೆಯಿಂದ ಮಾತ್ರೆ ನುಂಗುವವರೇ ಜಾಸ್ತಿ. ಹೀಗಾಗಿ ಪ್ರತಿದಿನ ಕುಂಬಳಕಾಯಿ ಬೀಜ ಸೇವಿಸಿದರೆ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಇದರಲ್ಲಿ ಸಿಗಲಿವೆ.

* ಮಾಂಸಖಂಡಗಳು ಶಕ್ತಿಯಾಗಿಲ್ಲದೆ ಇದ್ದರೆ, ನರಗಳ ಸಮಸ್ಯೆಯನ್ನು ಹೊಂದಿರುವವರಾದರೆ, ಅವರಿಗೂ ಈ ಕುಂಬಳಕಾಯಿ ಬೀಜ ಅತ್ಯುತ್ತಮವಾಗಿದೆ. ಹೀಗಾಗಿ ಕುಂಬಳಕಾಯಿ ಬೀಜವನ್ನು ತಿನ್ನುವುದರಿಂದ ಮಾಂಸಖಂಡಗಳು ಗಟ್ಟಿಯಾಗುತ್ತವೆಮ
* ನಿದ್ರಾಹೀನತೆಯ ಸಮಸ್ಯೆ ಇರುವವರು ಕೂಡ ಕುಂಬಳಕಾಯಿ ಬೀಜವನ್ನು ಸೇವಿಸಬಹುದು. ಇದರಿಂದ ನಿದ್ರೆಯನ್ನು ಚೆನ್ನಾಗಿ ಮಾಡಬಹುದು.
* ಒಂದು ವೇಳೆ ನಿಮ್ಮ ಮುಖದ ಚರ್ಮದಲ್ಲಿ ಸುಕ್ಕುಗಟ್ಟಿದ್ದರೆ, ಕಪ್ಪು ಕಲೆಯಾಗುತ್ತಿದ್ದರೆ ಅದನ್ನು ತಡೆಯುವ ಶಕ್ತಿಯೂ ಈ ಕುಂಬಳಕಾಯಿ ಬೀಜಕ್ಕೆ ಇದೆ. ಈ ಕುಂಬಳಕಾಯಿ ಬೀಜಗಳನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಚರ್ಮದ ಸಮಸ್ಯೆ ದೂರಾಗಿ ಹೊಳೆಯುತ್ತದೆ.

