Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಬಳ್ಳಾರಿಯ KIADB ಹಗರಣ : ಅಧಿಕಾರಿಗಳ ಸಹಿಯಿಂದ ಕೋಟಿ ಕೋಟಿ ಲೂಟಿ

---Advertisement---

ಬಳ್ಳಾರಿ: KIADB ಕಚೇರಿಯಲ್ಲಿ ಅವ್ಯವಹಾರದ ವಾಸನೆ ಬರ್ತಿದೆ. ಅಷ್ಟಿಷ್ಟಲ್ಲ ಸುಮಾರು 16.17 ಕೋಟಿ ರೂಪಾಯಿ ಲೂಟಿ ಹೊಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇಲ್ಲಿ ಅಧಿಕಾರಿಗಳ ಸಹಿಯನ್ನೇ ನಕಲು‌ ಮಾಡಿ ಲೂಟಿ ಹೊಡೆದಿದ್ದಾರೆ ಎನ್ನಲಾಗಿದೆ. ಈ ಲೂಟಿ ಹೊಡೆದ ಹಣವನ್ನು ಇತರೆ ಅಕೌಂಟ್ ಗಳಿಗೆ ಟ್ರಾನ್ಸಫರ್ ಮಾಡಿದ್ದಾರೆ ಎನ್ನಲಾಗಿದೆ.

KIADB ಗುತ್ತಿಗೆ ನೌಕರ ಸಂತೋಷ್ ವಿರುದ್ಧ ಈ ಆರೋಪ ಕೇಳಿ ಬಂದಿರುವಂತದ್ದು. ಖಾಸಗಿ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಏಳು ಜನ ಸೇರಿ ಈ ಹಣವನ್ನು ಲೂಟಿ ಹೊಡೆದಿದ್ದಾರೆ. ಬೇರೆ ಬೇರೆ ಅಕೌಂಟ್ ಗಳಿಗೆ ಹಣ ಟ್ರಾನ್ಸಫರ್ ಆಗಿದೆ. ಎಪಿಎಂಸಿ ಠಾಣೆಯಲ್ಲಿ ಏಳು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಧಿಕಾರಿಗಳ ಹೆಸರಲ್ಲಿ ಚೆಕ್ ಗೆ ನಕಲಿ ಸಹಿ ಕೂಡ ಹಾಕುತ್ತಿದ್ದನಂತೆ. 2022 ರಿಂದ 2026ರ ಅವಧಿಯಲ್ಲಿ 16 ಕೋಟಿ ಹಣವನ್ನು ಲೂಟಿ ಹೊಡೆದಿದ್ದಾರಂತೆ.

ಈ ಸಂಬಂಧ ಬಳ್ಳಾರಿ ಎಸ್ಪಿ ಸುಮನ್ ಡಿ ಪನ್ನೇಕರ್ ಪ್ರತಿಕ್ರಿಯೆ ನೀಡಿದ್ದಾರೆ. 2022 ರಿಂದ ಇದ್ದಂತ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್ ಏನಿದ್ದಾರೆ, ಅವರ ಚೆಕ್ ಗಳನ್ನ, ಸಹಿಯನ್ನ ನಕಲಿ ಮಾಡಿ ಬೇರೆ ಬೇರೆ ಅಕೌಂಟ್ ಗಳಿಗೆ ಹಂತ ಹಂತವಾಗಿ ಕಳುಹಿಸಿ, KIADB ಗೆ ಮೋಸ ಮಾಡಿದ್ದಾರೆ. ಈ ಸಂಬಂಧ 19ಕ್ಕರ ಪ್ರಕರಣವನ್ನು ದಾಖಲು ಮಾಡಿದ್ದೇವೆ. ತನಿಖೆ ಕೂಡ ಪ್ರಾಥಮಿಕ ಹಂತದಲ್ಲಿದೆ. ಆರೋಪಿಗಳನ್ನ ಪತ್ತೆ ಹಚ್ಚುವ ಕೆಲಸ ಕೂಡ ಆಗ್ತಾ ಇದೆ ಎಂದು ಎಸ್ಪಿ ತಿಳಿಸಿದ್ದಾರೆ. ಇಷ್ಟು ದೊಡ್ಡ ಹಗರಣವಾದರೂ ಅಲ್ಲಿನ ಅಧಿಕಾರಿಗಳ ಗಮನಕ್ಕೆ ಬರಲಿಲ್ವಾ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ.

Join WhatsApp

Join Now

Join Telegram

Join Now